ಶಾಲೆ ತ್ಯಜಿಸಿದ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರತಿಜ್ಞೆ
ಪೆರ್ಮುದೆ ಗ್ರಾ.ಪಂ. ಮಕ್ಕಳ ಗ್ರಾಮಸಭೆ
Team Udayavani, Nov 28, 2019, 3:49 AM IST
ಬಜಪೆ: ಪೆರ್ಮುದೆ ಗ್ರಾ.ಪಂ.ನ 2019-20ನೇ ಸಾಲಿನ ಮಕ್ಕಳ ಗ್ರಾಮಸಭೆಯು ಕುತ್ತೆತ್ತೂರು ಸ. ಹಿ. ಪ್ರಾಥಮಿಕ ಶಾಲಾ ವಿದ್ಯಾರ್ಥಿ ರಿತೇಶ್ ಹಾಗೂ ಪೆರ್ಮುದೆಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಛಾಯಾ ಅವರ ಅಧ್ಯಕ್ಷತೆಯಲ್ಲಿ ಪೆರ್ಮುದೆ ಗ್ರಾ.ಪಂ. ಸಭಾಭವನದಲ್ಲಿ ಬುಧವಾರ ಜರಗಿತು.
ಶಿಕ್ಷಣ ಪಡೆಯುವುದು ಎಲ್ಲ ಮಕ್ಕಳ ಕರ್ತವ್ಯವಾಗಿದೆ. ಪರಿಸರದಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳ ಮಾಹಿತಿ ಸಂಗ್ರಹಿಸಿ, ಮರಳಿ ಶಾಲೆಗೆ ಬರುವಂತೆ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಇದಕ್ಕೆ ಎಲ್ಲರು ಸಹಕರಿಸಬೇಕು ಎಂದು ಬುಧವಾರ ನಡೆದ ಪೆರ್ಮುದೆ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ಪ್ರತಿಜ್ಞೆ ಮಾಡಿದ್ದಾರೆ.
ಓರ್ವ ವಿದ್ಯಾರ್ಥಿನಿ ಕೆಲವೊಮ್ಮ ಶಾಲೆಗೆ ಬಾರದೇ ರಜೆ ಹಾಕುತ್ತಾಳೆ ಎಂದು ಈ ಬಗ್ಗೆ ಕುತ್ತೆತ್ತೂರು ಶಾಲಾ ಮಕ್ಕಳು ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಿಆರ್ಪಿ ಲಕ್ಷ್ಮೀ ಅವರ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಸಿಆರ್ಪಿ ಲಕ್ಷ್ಮೀ ಒಟ್ಟು 18 ಮಕ್ಕಳು ಆರೋಗ್ಯ ಹಾಗೂ ವಿವಿಧ ಕಾರಣಗಳಿಂದ ಶಾಲೆಯಿಂದ ದೂರ ಉಳಿದಿದ್ದಾರೆ. ಅದರಲ್ಲಿ ಶಾಲೆಯಿಂದ ದೂರ ಉಳಿದ 7 ಮಂದಿಯಲ್ಲಿ 5ಮಂದಿಯನ್ನು ಶಾಲೆಗೆ ಸೇರಿಸಲಾಗಿದೆ. ಇನ್ನು ಇಬ್ಬರ ಬಗ್ಗೆ ಎಲ್ಲಿ ಕಲಿಯುತ್ತಿದ್ದಾರೆ ಎಂಬ ಮಾಹಿತಿಯಿಲ್ಲ. ತಂದೆತಾಯಿ ಬಾಡಿಗೆ ಮನೆಯಲ್ಲಿದ್ದು ತಿಂಗಳಿಗೊಮ್ಮೆ ಮನೆ ಬದಲಾವಣೆಯಿಂದ ಮಕ್ಕಳ ಬಗ್ಗೆ ಮಾಹಿತಿಗೆ ಕೊಂಚ ಕಷ್ಟವಾಗುತ್ತಿದೆ. ಶಾಲೆಯಿಂದ ದೂರ ಉಳಿದ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡಿ ಸಹಕರಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಇದಕ್ಕೆ ಸಭೆಯಲ್ಲಿದ್ದ ಪೆರ್ಮುದೆಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರಾಥಮಿಕ ಶಾಲೆ ಹಾಗೂ ಕುತ್ತೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಶಾಲೆಯಿಂದ ದೂರ ವಿರುವ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಅವರ ಮನವೊಲಿಸುವ ಪ್ರಯತ್ನ ಹಾಗೂ ಅವರ ಬಗ್ಗೆ ಮಾಹಿತಿಯನ್ನು ನೀಡಿ ಸಹಕರಿಸುವ ಬಗ್ಗೆ ಸಭೆಯಲ್ಲಿ ಪ್ರಮಾಣ ವಚನ ತೆಗೆದುಕೊಂಡರು. ಇದರ ಜತೆ ಪಂಚಾಯತ್ ಆಡಳಿತ, ಶಿಕ್ಷಣ ಇಲಾಖೆಯೂ ಪ್ರಮಾಣವಚನ ತೆಗೆದುಕೊಂಡರು
ಸಂಪನ್ಮೂಲ ವ್ಯಕ್ತಿ ಪಡಿ ಸಂಸ್ಥೆಯ ಹರಿಣಿ ಮಾಹಿತಿ ನೀಡಿ, ಮಕ್ಕಳ ಗ್ರಾಮಸಭೆಗೆ ಮಕ್ಕಳು ಭಾಗವಹಿಸಿ, ಇಲಾಖಾ ಮಾಹಿತಿ, ಮಕ್ಕಳ ಸಮಸ್ಯೆ ಹಾಗೂ ಹಕ್ಕುಗಳ ಬಗ್ಗೆ ತಿಳಿಯಬೇಕು. ಉತ್ತಮ ಬಾಲ್ಯ, ನೆಮ್ಮದಿ, ಗೌರವ ಸಿಗಬೇಕು ಎಂದು ಹೇಳಿದರು.
ಕಂಪ್ಯೂಟರ್. ಗ್ರಂಥಾಲಯ ನೀಡಿ
ಕುತ್ತೆತ್ತೂರು ಸರಕಾರಿ ಶಾಲೆಗೆ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಬೇಕು. ಒಂದೇ ಹಾಲ್ನಲ್ಲಿ 2 ತರಗತಿ ಗಳು ನಡೆಯುತ್ತಿದೆ ಹೆಚ್ಚಿನ ಕಟ್ಟಡಬೇಕು ಎಂದು ಮಕ್ಕಳು ಬೇಡಿಕೆ ಇಟ್ಟರು. ಇದಕ್ಕೆ ಉತ್ತರಿ ಸಿದ ಅಧ್ಯಕ್ಷೆ ಸರೋಜಾ ಕಳೆದ ಬಾರಿ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಜಾಗದ ಕೊರತೆಯಿಂದಾಗಿ ಆದು ಸಾಧ್ಯ ವಾಗಲಿಲ್ಲ ಎಂದರು.
ರಸ್ತೆ ಹುಬ್ಬು ನಿರ್ಮಾಣ ಅಗತ್ಯ
ಮಳೆಗಾಲದಲ್ಲಿ ಮಳೆ ನೀರು ರಸ್ತೆಗೆ ಚರಂಡಿ ಇಲ್ಲದೇ ಶಾಲಾ ಆಟದ ಮೈದಾನಕ್ಕೆ ನುಗ್ಗಿ ನೆರೆ ಬರುತ್ತದೆ. ಶಾಲಾ ವಠಾರದಲ್ಲಿ ವೇಗವಾಗಿ ವಾಹನಗಳು ಚಲಿಸುತ್ತಿವೆ ಇದಕ್ಕೆ ರಸ್ತೆ ಹುಬ್ಬು ಹಾಕಬೇಕು. ಶಾಲಾ ಸಮೀಪ ಬೀದಿದೀಪ ಇಲ್ಲ. ಕುಡುಕರು ಶಾಲೆಯ ಬಳಿ ಮಲಗುತ್ತಿದ್ದಾರೆ. ಶಾಲೆಗೆ ಸಭಾಂಗಣ ಅಗತ್ಯವಾಗಿ ಬೇಕಾಗಿದೆ. ಪ್ರೌಢಶಾಲೆ ಆಗಿ ಪರಿವರ್ತಿಸಬೇಕು ಎಂದು ಮಕ್ಕಳು ಸಭೆಯಲ್ಲಿ ಸಮಸ್ಯೆ ಹಾಗೂ ಬೇಡಿಕೆ ಇಟ್ಟರು.
ಪೆರ್ಮುದೆ ಶಾಲಾ ಎದುರಿನಲ್ಲಿಯೇ ಕಸ ಬಿಸಾಡುತ್ತಿದ್ದಾರೆ ಎಂದು ಮಕ್ಕಳು ಸಭೆಯಲ್ಲಿ ತಿಳಿಸಿದರು.ಗ್ರಾ.ಪಂ. ಸದಸ್ಯರಾದ ಸದಾನಂದ ಶೆಟ್ಟಿಗಾರ್, ಲೀನಾ, ಕುತ್ತೆತ್ತೂರು ಶಾಲಾ ಶಿಕ್ಷಕ ರಾಜಣ್ಣ, ಪೆರ್ಮುದೆ ಶಾಲಾ ಮುಖ್ಯ ಶಿಕ್ಷಕಿ ಹೆಲೆನಾ ಪಿಂಟೋ, ಗ್ರಾಮ ಕರಣಿಕ ಜಗದೀಶ್ ಶೆಟ್ಟಿ, ಆಶಾ ಕಾರ್ಯಕರ್ತೆ ಕಲ್ಯಾಣಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯದರ್ಶಿ ನಾಗೇಶ್ ಪೂಜಾರಿ ಸಭೆಯನ್ನು ನಿರ್ವಹಿಸಿದರು.
ನೈರ್ಮಲ್ಯ ಕಾಪಾಡಲು ಮನವಿ
ಕುತ್ತೆತ್ತೂರು ಸರಕಾರಿ ಶಾಲೆಯ ಹಿಂಬದಿ ಮಲಮೂತ್ರ ಮಾಡುತ್ತಿದ್ದಾರೆ, ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಹುಲ್ಲುಗಳು ಬೆಳೆದಿವೆ. ಹಾವುಗಳು ಬರುತ್ತಿದೆ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಭೆಯಲ್ಲಿ ಮಕ್ಕಳು ಕೇಳಿದರು. ಈ ಬಗ್ಗೆ ಮಾತನಾಡಿದ ಪೆರ್ಮುದೆ ಗ್ರಾ.ಪಂ. ಅಧ್ಯಕ್ಷೆ ಸರೋಜಾ, ಶಾಲೆಯ ಹಿಂಬದಿ ಖಾಸಗಿ ಜಾಗವಾಗಿದೆ. ಅವರಣ ಗೋಡೆ, ಶೌಚಾಲಯ ಈಗಾಗಲೇ ಕಟ್ಟಲಾಗಿದೆ. ಶೌಚಾಲಯವನ್ನು ಸ್ವತ್ಛವಾಗಿ ಇಡುವುದು ಶಾಲೆಯವರದ್ದಾಗಿದೆ ಎಂದರು.
ಕುಡಿಯುವ ನೀರು ಒದಗಿಸಿ
ಪೆರ್ಮುದೆ ಶಾಲೆಯಲ್ಲಿ ನೀರಿಲ್ಲದೆ, ಕೈತೊಳೆಯಲು, ಶೌಚಾಲಯ ಸ್ವತ್ಛಗೊಳಿಸಲು ತೊಂದರೆಯಾಗಿದೆ, ಸಮಯಕ್ಕೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಸಭೆಯಲ್ಲಿ ಮಕ್ಕಳು ತಿಳಿಸಿದರು. ಈ ಬಗ್ಗೆ ಮಾತನಾಡಿದ ಅಧ್ಯಕ್ಷೆ ಸರೋಜಾ ಪಂಚಾಯತ್ ಶಾಲೆಗಾಗಿ ಬೇರೆಯೇ ನೀರಿನ ಪೈಪ್ ಹಾಕಿದೆ. 500 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ಬದಲು ದೊಡ್ಡ ಟ್ಯಾಂಕ್ನ್ನು ಅಳವಡಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.