ತಿರುಪತಿಯಲ್ಲಿ ವಿಐಪಿ ಲಾಂಜ್ ಸ್ಥಾಪನೆಗೆ ಕೇಂದ್ರ ಒಪ್ಪಿಗೆ
Team Udayavani, Nov 27, 2019, 9:40 PM IST
– ಲಾಂಜ್‌ಗಾಗಿ 19,375 ಚದುರಡಿ ಜಾಗ ನೀಡಲು ಸಂಪುಟ ಸಭೆ ನಿರ್ಧಾರ
– ತಿರುಪತಿ ವಿಮಾನ ನಿಲ್ದಾಣದಲ್ಲೇ ನಿರ್ಮಾಣವಾಗಲಿರುವ ಐಶಾರಾಮಿ ಲಾಂಜ್
– ಎಎಐ ಸುಪರ್ದಿಯಲ್ಲಿರುವ ಭೂಮಿ ಆಂಧ್ರ ಸರ್ಕಾರಕ್ಕೆ ಹಸ್ತಾಂತರ
– ವಾರ್ಷಿಕವಾಗಿ 1 ರೂ. ಬಾಡಿಗೆಯಂತೆ 15 ವರ್ಷದವರೆಗೆ ಒಪ್ಪಂದ
ನವದೆಹಲಿ: ತಿರುಪತಿಗೆ ಆಗಮಿಸುವ ಗಣ್ಯ ಹಾಗೂ ಗಣ್ಯಾತಿಗಣ್ಯ ವ್ಯಕ್ತಿಗಳಿಗಾಗಿ, ತಿರುಪತಿ ವಿಮಾನ ನಿಲ್ದಾಣದಲ್ಲಿ ವಿಶೇಷ ಲಾಂಜ್ ಸ್ಥಾಪಿಸುವ ಉದ್ದೇಶಕ್ಕಾಗಿ, 19,375 ಚದರಡಿ ಜಾಗವನ್ನು ವಿಮಾನ ನಿಲ್ದಾಣಕ್ಕೆ ನೀಡುವ ಪ್ರಸ್ತಾವನೆಗೆ ಬುಧವಾರ, ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಸೇರಿರುವ ಈ ಭೂಮಿಯನ್ನು, ವರ್ಷಕ್ಕೆ 1 ರೂ. ಬಾಡಿಗೆಯಂತೆ ಮುಂದಿನ 15 ವರ್ಷದವರೆಗೆ ಆಂಧ್ರಪ್ರದೇಶದ ಶಿಕ್ಷಣ ಮತ್ತು ಕಲ್ಯಾಣ ಮೂಲಸೌಕರ್ಯ ಇಲಾಖೆಗೆ (ಎಪಿಇಡಬ್ಲೂಐಡಿಸಿ) ಹಸ್ತಾಂತರಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಜಾಗದಲ್ಲಿ, ಐಷಾರಾಮಿ ಸೌಲಭ್ಯಗಳುಳ್ಳ ಲಾಂಜ್ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಎಪಿಇಡಬ್ಲೂಐಡಿಸಿ ಹೊರಲಿದೆ.
ಇತರ ನಿರ್ಧಾರಗಳು:
ಭಾರತೀಯ ಆಹಾರ ನಿಗಮದಲ್ಲಿ (ಎಫ್ಸಿಐ), ಕೇಂದ್ರ ಸರ್ಕಾರ ಹೂಡಿರುವ ಅಧಿಕೃತ ಬಂಡವಾಳ ಮಿತಿಯನ್ನು ಈವರೆಗೆ ಇದ್ದ 3,500 ಕೋಟಿ ರೂ.ಗಳಿಂದ 10,000 ಕೋಟಿ ರೂ.ಗಳಿಗೆ ಏರಿಸುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಇನ್ನು, 2020-21ರ ಆರ್ಥಿಕ ವರದಿಯನ್ನು ನೀಡುವ ಹೊಣೆ ಹೊತ್ತಿರುವ 15ನೇ ಆರ್ಥಿಕ ಆಯೋಗಕ್ಕೆ ನೀಡಲಾಗಿರುವ ಗಡುವನ್ನು 2020ರ ಅ. 30ರವರೆಗೆ ವಿಸ್ತರಿಸಲು ಸಂಪುಟ ಒಪ್ಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.