ಯಾಣವೆಂಬ ಪ್ರಕೃತಿಯ ಮಡಿಲು


Team Udayavani, Nov 28, 2019, 5:00 AM IST

aa-24

ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು ತುಂಬಿದ ಗಿಡ-ಮರಗಳು, ಎತ್ತರದ ಬೆಟ್ಟ- ಗುಡ್ಡಗಳು ನಮ್ಮನ್ನು ಹೊಸ ದೊಂದು ಪ್ರಪಂಚಕ್ಕೆ ಕರೆದು ಕೊಂಡು ಹೋಗು ತ್ತದೆ. ಕ್ಷೇತ್ರದ ಹಿನ್ನೆಲೆ ಸಹಿತ ಪ್ರವಾ ಸದ ಅನುಭವಗಳನ್ನು ಪ್ರವಾಸಿಗ ರೊಬ್ಬರು ಅಕ್ಷರ ರೂಪದಲ್ಲಿ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಇನ್ನೇನು ಕಾಲೇಜು ಮುಗಿಯುವ ದಿನಗಳು ಹತ್ತಿರ ಬಂದಿದ್ದವು. ಆದರೂ ಸುತ್ತುವ ಆಸೆ ಮುಗಿದಿರಲಿಲ್ಲ. ತರಗತಿಯವರೆಲ್ಲ ಸೇರಿಕೊಂಡು ಎಲ್ಲಾದರೂ ಚಾರಣಕ್ಕೆ ಹೋಗುವ ಯೋಜನೆ ಕೈ ಕೊಟ್ಟಿತ್ತು. ಅದರ ಅಸಮಾಧಾನದಲ್ಲಿಯೇ ಮನೆಗೆ ತೆರಳಿದಾಗ ಸಂಜೆ ನಾವು ನಾಲ್ಕು ಜನ ಇರುವ ವಾಟ್ಸಾಪ್‌ ಗುಂಪಿನಲ್ಲಿ ಮತ್ತೆ ಚರ್ಚೆ ಶುರುವಾಗಿತ್ತು. ಎಲ್ಲದರೂ ಹೋಗಿಯೇ ಇನ್ನೂ ಕಾಲೇಜಿಗೆ ಹೋಗಬೇಕೆಂದು ನಮ್ಮ ನಿರ್ಧಾರವಾಗಿತ್ತು. ಇಂಟರ್‌ನೆಟ್‌ನಲ್ಲಿ ಹುಡುಕಾಡುವಾಗ ನಮ್ಮ ಕಣ್ಣಿಗೆ ಬಿದ್ದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಬಳಿಯ ಯಾಣ. ಮರುದಿನವೇ ನಾವು ಹೊರಟೆವು. ನಮ್ಮ ಪ್ರಯಾಣ ಯಾಣದತ್ತ ಸಾಗಿತ್ತು.

ಪ್ರಕೃತಿಯ ಮಡಿಲಲ್ಲಿರುವ ಯಾಣಕ್ಕೆ, ಕುಮುಟಾದಿಂದ 30 ಕಿ.ಮೀ. ದೂರ. ಅಲ್ಲಿÉಗೆ ಹೋಗಿ ಕಾರು ಇಳಿಯುತ್ತಿದ್ದಂತಯೇ ಸುತ್ತಲಿನ ಹಸುರು ತುಂಬಿರುವ, ಪ್ರಶಾಂತ ವಾತಾವರಣ ನಮ್ಮನ್ನು ಮುದಗೊಳಿಸಿತ್ತು. ಪ್ರತಿದಿನ ಜನಜಂಗುಳಿ, ವಾಹನಗಳ ಸದ್ದುಗಳಿಂದ ಬೇಸತ್ತಿದ್ದ ಮನಸ್ಸಿಗೆ ಸ್ವರ್ಗಕ್ಕೆ ಬಂದು ನಿಂತ ಅನುಭವವಾಗಿದ್ದಂತೂ ನಿಜ.

ಸುತ್ತಲಿನ ಹಸುರು ಗಿಡ ಮರಗಳು ಪ್ರೀತಿಯಿಂದ ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿತ್ತು. ಅಲ್ಲಿರುವ ಗೇಟಿನಿಂದ 10 ನಿಮಿಷಗಳ ಕಾಲು ನಡಗೆಯಲ್ಲಿ ಸಾಗಬೇಕು. ತಂಪಾದ ವಾತಾವರಣದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದುಗಳನ್ನು ಕೇಳುತ್ತ ನಡೆದರೆ ದಾರಿ ಸಾಗಿದ್ದೇ ತಿಳಿಯದು. ಹೀಗೆ ಹೋದಾಗ ಕೊನೆಯಲ್ಲಿ ಸಿಗುವುದು ಸುಂದರ ಪ್ರಕೃತಿಯ ನಡುವೆ ಒಂದು ದೇವಸ್ಥಾನ ಅದರ ಸುತ್ತಲೂ ಅಕಾಶಕ್ಕೆ ಮುತ್ತಿಡುತ್ತಿರುವಂತೆ ತೋರುವ ಗಗನಚುಂಬಿ ಕಲ್ಲಿನ ಶಿಖರಗಳು, ಅದನ್ನು ಒಮ್ಮೆಲೆ ನೋಡಿ ಕಣ್ಣ ಮಿಟುಕಿಸಲು ಮನಸ್ಸಾಗಲಿಲ್ಲ. ಅಲ್ಲಿನ ಸುಂದರ ದೃಶ್ಯಗಳನ್ನು ನೋಡುತ್ತ¤ ದೇವಸ್ಥಾನದ ಒಳಗೆ ನಡೆದರೆ ಗುಹೆಯೊಳಗೆ ಕಾಣುವ ಭೈರವೇಶ್ವರನ ಲಿಂಗ. ಸುಮಾರು 120 ಮೀ ಎತ್ತರದ ಹಿರಿಬಂಡೆಯ ಮಧ್ಯದಲ್ಲಿ ಗುಹೆಯಲ್ಲಿ ತಾನಾಗಿಯೆ ಮೂಡಿದ ಲಿಂಗವಾಗಿದೆ. ಇದು ಸುಮಾರು 2 ಮೀ ಎತ್ತರಬಹುದು. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯಮೇಲೆ ಜಲಸಂಚಾರವಿದೆ ಆದ ಕಾರಣ ಭೈರವೇಶ್ವರ ಲಿಂಗದ ಮೇಲೆ ಸದಾ ಅಂಗುಲದ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ.

ಪೌರಾಣಿಕ ಹಿನ್ನೆಲೆ
ಸ್ಕಂದ ಪುರಾಣದಲ್ಲೂ ಯಾಣದ ಇತಿಹಾಸ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನೇ ಸುಡುವುದಾಗಿ ಅಟ್ಟಿಸಿಕೊಂಡು ಬಂದಾಗ ಭೈರವೇಶ್ವರನ ರಕ್ಷಣೆಗೆ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿಕೊಂಡು ಅವನ ಹಸ್ತವನ್ನೇ ಅವನ ತಲೆಯಮೇಲೆ ಇರಿಸಿಕೊಳ್ಳುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವೆಂದು ಪ್ರತೀತಿ ಇದೆ. ಅದೇ ಕಾರಣದಿಂದ ಯಾಣದಲ್ಲಿ ಮಣ್ಣು ಸುಟ್ಟ ಬಣ್ಣದಲ್ಲಿ ಇದೆ ಎಂದು ಹೇಳುತ್ತಾರೆ.

ಶಿವರಾತ್ರಿಯ ದಿನ ಇಲ್ಲಿ ಭೈರವೇಶ್ವರನಿಗೆ ವಿಶೇಷ ಪೂಜೆ ಇರುತ್ತದೆ, ಜತೆಗೆ ದೂರ-ದೂರದ ಊರಿನಂದ ಭಕ್ತರು ಆಗಮಿಸುತ್ತಾರೆ. ಈ ಶಿವರಾತ್ರಿಯ ದಿನ ಭೈರವೇಶ್ವರನಿಗೆ ಪೂಜೆ ಸಲ್ಲಿಸಿ ದಂಡಿ ತೀರ್ಥದ ನೀರನ್ನು ಕೊಂಡೊಯ್ದು ಗೋಕರ್ಣದ ಮಾಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.

ಹೀಗೆ ಯಾಣದಲ್ಲಿ ಸುತ್ತಾಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಂಡು, ಗ್ಯಾಲರಿ ತುಂಬುವಷ್ಟು ಫೋಟೊ ಕ್ಲಿಕ್ಕಿಸಿಕೊಂಡು ನೆನಪಿನ ಬುತ್ತಿಗೆ ಮತ್ತೂಂದು ಹೊಸ ಜಾಗವನ್ನು ಸೇರಿಸಿಕೊಂಡು ವಾಪಸಾಗಿದ್ದೆವು.

ಭೈರವೇಶ್ವರ, ಮೋಹಿನಿ ಶಿಖರ
ಯಾಣದ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಎರಡೂ ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಸುತ್ತಲಿನ ಹಸುರು ಪ್ರಕೃತಿಯ ನಡುವಿನ ಶಿಖರಗಳು ಬಾನೆತ್ತರದಿಂದ ಕೈಬೀಸಿ ಕರೆಯುವಂತೆ ತೋರುತ್ತವೆ. ಭೈರವೇಶ್ವರ ಶಿಖರವು 120ಮೀ. ಎತ್ತರ ಹಾಗೂ ಮೋಹಿನಿ ಶಿಖರವು 90 ಮೀ. ಎತ್ತರವಿದೆಯಂತೆ.

-  ಪವಿತ್ರಾ ಭಟ್‌, ಪುತ್ತೂರು

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.