ಜೈಲಿನಲ್ಲಿ ಆತ್ಮಹತ್ಯೆ ರಾಜ್ಯಕ್ಕೆ 3ನೇ ಸ್ಥಾನ
ತಮಿಳುನಾಡು ಮುಂಚೂಣಿಯಲ್ಲಿ
Team Udayavani, Nov 28, 2019, 4:43 AM IST
ಪೊಲೀಸರ ವಶದಲ್ಲಿರುವಾಗಲೇ ಪ್ರಾಣ ಕಳೆದುಕೊಳ್ಳುತ್ತಿರುವ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಸ್ವಾಭಾವಿಕವಾಗಿ ದೇಶದಲ್ಲಿ ಒಟ್ಟು 133 ಅಪರಾಧಿಗಳು ಮತ್ತು ಆರೋಪಿಗಳು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ತಿಳಿಸಿದೆ. ಇಂತಹ ಪ್ರಕರಣಗಳು ತಮಿಳುನಾಡಿನಲ್ಲಿ ಅತಿ ಹೆಚ್ಚು ಕಂಡುಬಂದಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ವರದಿ ಏನು ಹೇಳುತ್ತದೆ? ಕಾರಣಗಳೇನು ಎಂಬ ಕುರಿತ ಮಾಹಿತಿ ಇಲ್ಲಿದೆ.
ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2017ನೇ ಸಾಲಿನಲ್ಲಿ 133 ಜನರು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆ.
ಶೇ.15 ರಷ್ಟು ಹೆಚ್ಚಳ
ದೇಶಾದ್ಯಂತ ಕಾರಾಗೃಹಗಳಲ್ಲಿ ಅಸ್ವಾಭಾವಿಕವಾಗಿ ಸಾಯುತ್ತಿರು ವವರ ಪ್ರಮಾಣದಲ್ಲಿ ಶೇ.15 ರಷ್ಟು ಹೆಚ್ಚಾಗಿದ್ದು, 2015 ರಲ್ಲಿ 115 ಜನರು ಮೃತಪಟ್ಟಿದ್ದರು.
ಕೋರ್ಟ್‌ಗೆ ಹಾಜರಿ ಮೊದಲೇ 58 ಸಾವು
ಪೊಲೀಸರ ವಶದಲ್ಲಿದ್ದು, ಮೃತಪಟ್ಟವರಲ್ಲಿ 58 ಮಂದಿಯನ್ನು ಬಂಧಿಸಲಾಗಿತ್ತೇ ಹೊರತು ಅವರನ್ನು ನ್ಯಾಯಾಲಯಕ್ಕೆ ಹಾಜ ರು ಪಡಿಸಲಾಗಿರಲಿಲ್ಲ. ಅದಕ್ಕೂ ಮೊದಲೇ ಅವರು ಮೃತಪಟ್ಟಿದ್ದಾರೆ.
42 ಮಂದಿ ಶಿಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
62 ಪ್ರಕರಣಗಳು
ಪೊಲೀಸ್ ಕಸ್ಟಡಿಯಲ್ಲಿ ಸಾವಿಗೆ ಸಂಬಂಧಿಸಿದಂತೆ ಒಟ್ಟು 62 ಪ್ರಕರಣಗಳು ದಾಖಲಾಗಿದ್ದು, 33 ಪೊಲೀಸರನ್ನು ಬಂಧಿಸಲಾಗಿದೆ, 27 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಹಾಕಲಾಗಿದೆ, ಮತ್ತು ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ಉಳಿದ ವರಿಗೆ ಯಾವುದೇ ಶಿಕ್ಷೆ ಆಗಿಲ್ಲ.
ರಾಜ್ಯ: 3ನೇ ಸ್ಥಾನ
ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ 2017ನೇ ಸಾಲಿನಲ್ಲಿ ರಾಜ್ಯದಲ್ಲಿ 10 ಅಸ್ವಾಭಾವಿಕ ಕಸ್ಟೋಡಿಯಲ್ ಸಾವು ದಾಖಲಾ ಗಿದ್ದು, ಒಟ್ಟು 114 ಮಂದಿ ಜೈಲಿನಲ್ಲಿ ಮೃತಪಟ್ಟಿದ್ದಾರೆ.
136 ವಿದೇಶಿ ಕೈದಿಗಳು
ರಾಜ್ಯದ ಕಾರಾಗೃಹದಲ್ಲಿ ಒಟ್ಟು 136 ವಿದೇಶಿ ಕೈದಿಗಳಿದ್ದು, 6 ಮಂದಿ ಆಪರಾಧಿಗಳು ಮತ್ತು 130 ವಿಚಾರಣಾಧೀನರು.
ಸಿಬ್ಬಂದಿ ಕೊರತೆ
ರಾಜ್ಯ ಕಾರಾಗೃಹ ಸಿಬ್ಬಂದಿ ಕೊರತೆ ಸೂಚ್ಯಂಕದಲ್ಲಿ 4ನೇ ಸ್ಥಾನ ದಲ್ಲಿದೆ. ಒಟ್ಟು 3,094 ಜೈಲು ಹುದ್ದೆಗಳಿದ್ದು,1,708 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ತುಂಬಿ ತುಳುಕುತ್ತಿವೆ ಕಾರಾಗೃಹಗಳು
ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದ್ದು. ರಾಜ್ಯದ ಕಾರಾಗೃಹಗಳಲ್ಲಿ ಶೇ.106 ರಷ್ಟು ದಟ್ಟಣೆ ವರದಿಯಾಗಿದೆ.
ಕಾರಣಗಳೇನು?
· ವಿಚಾರಣೆಯಲ್ಲಿ ವಿಳಂಬ
· ಶಿಕ್ಷೆಯ ಭೀತಿ
· ಚಿತ್ರಹಿಂಸೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುವುದು
· ಆರೋಗ್ಯ ಮತ್ತು ನೈರ್ಮಲ್ಯದ ನಿರ್ಲಕ್ಷ್ಯ
· ಜೈಲಿನ ವಾತಾವರಣ
· ಅವ್ಯವಸ್ಥಿತ ಆಡಳಿತ
- ಸುಶ್ಮಿತಾ ಜೈನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.