ರಾಜಕೀಯದಲ್ಲಿ ತಕ್ಷಣದ ಲಾಭ ಮುಖ್ಯವಾಗಬಾರದು


Team Udayavani, Nov 28, 2019, 4:49 AM IST

aa-32

ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಾಯಕರನ್ನು ಗೆಲ್ಲಿಸಿಕೊಡಿ ಎಂದು ಬಿಜೆಪಿ ನಾಯಕರು ಮತದಾರರಲ್ಲಿ ಅಕ್ಷರಶಃ ಗೋಗರೆಯುತ್ತಿದ್ದಾರೆ. ಪಕ್ಷಾಂತರದಲ್ಲಿ ತನ್ನ ಪಾತ್ರವಿರುವುದನ್ನು ಬಿಜೆಪಿ ಒಪ್ಪಿಕೊಳ್ಳುವುದು ಅನಿವಾರ್ಯ. ಹೀಗಾಗಿ ಮಿನಿ ಮಹಾಚುನಾವಣೆಯನ್ನು ರಾಜ್ಯದ ಮೇಲೆ ಹೇರುವ ಮೂಲಕ ಸಮಯ, ಸಂಪನ್ಮೂಲವನ್ನು ವ್ಯರ್ಥ ಗೊಳಿಸಿದ ದೂಷಣೆಯನ್ನು ಅದು ಕೂಡ ಹೊತ್ತುಕೊಳ್ಳಬೇಕಾಗುತ್ತದೆ.

ರಾಜ್ಯದ ಪ್ರಜ್ಞಾವಂತ ಜನತೆ ಡಿ.5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಹೊಸದಾಗಿ ಬಿಜೆಪಿಗೆ ಸೇರ್ಪಡೆಯಾಗಿರುವ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರು ಪ್ರಚಾರ ಮಾಡುತ್ತಿರುವ ವೈಖರಿಯನ್ನು ತಮಾಷೆಯಿಂದ ನೋಡುತ್ತಿದೆ.

ಕೆಲವು ಸಚಿವರು ತಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ, ಸರಕಾರವನ್ನು ಉಳಿಸಬೇಕೆಂಬ ಉದ್ದೇಶದಿಂದ ಮಾತ್ರ ಪಕ್ಷಾಂತರಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. 15ನೇ ವಿಧಾನಸಭೆಯಲ್ಲಿ ಬಹುಮತ ಗಳಿಸಿಕೊಳ್ಳಲು ಸರಕಾರಕ್ಕೆ ಏಳು ಶಾಸಕರ ಅಗತ್ಯವಿದೆ. ಒಂದೂವರೆ ವರ್ಷದ ಹಿಂದೆಯಷ್ಟೇ ಅಂದರೆ 2018ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಸ್ತುತ ಸ್ಪರ್ಧಿಸುತ್ತಿರುವವರೆಲ್ಲ ಬಿಜೆಪಿಯ ಕಟ್ಟಾ ವಿರೋಧಿಗಳಾಗಿದ್ದರು. ಈ ಪೈಕಿ ಕೆಲವರು ಕಳಂಕಿತ ರಾಜಕಾರಣಿಗಳಾಗಿದ್ದು, ರಾಜಕೀಯ ಅಥವಾ ಸಾರ್ವಜನಿಕ ಬದುಕಿನಲ್ಲಿ ಇರುವ ಅರ್ಹತೆ ಹೊಂದಿಲ್ಲ. ಪುಣ್ಯಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುನಿರತ್ನ ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಲ್ಲ. ಮುನಿರತ್ನ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ (ಎಸ್‌ಟಿ ಮೀಸಲು) ಶಾಸಕರ ಅನರ್ಹತೆ ಪ್ರಕರಣ ಇನ್ನೂ ಕೋರ್ಟಿನಲ್ಲಿರುವುದರಿಂದ ಉಪ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿದೆ.

ಪಕ್ಷಾಂತರ ಮಾಡಿದ 17 ಶಾಸಕರನ್ನು ಹಿಂದಿನ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಅನರ್ಹಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ಅನರ್ಹತೆಎತ್ತಿ ಹಿಡಿದರೂ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿದೆ. ಗೋಕಾಕದಲ್ಲಿ ರಮೇಶ್‌ ಜಾರಕಿಹೊಳಿ, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಕೆ.ಗೋಪಾಲಯ್ಯ, ಕೃಷ್ಣರಾಜಪುರಂನಲ್ಲಿ ಬೈರತಿ ಬಸವರಾಜ್‌, ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್‌, ಯಶವಂತಪುರದಲ್ಲಿ ಎಸ್‌. ಟಿ. ಸೋಮಶೇಖರ್‌ ಅವರಂಥ ಕೆಲವು ನಾಯಕರನ್ನು ಗೆಲ್ಲಿಸಿಕೊಡಿ ಎಂದು ಬಿಜೆಪಿ ನಾಯಕರು ಮತದಾರರಲ್ಲಿ ಅಕ್ಷರಶ ಗೋಗರೆಯುತ್ತಿದ್ದಾರೆ. 17 ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವ ತನಕ ಅನರ್ಹರಾಗಿರಬೇಕೆಂದು ಸ್ಪೀಕರ್‌ ರಮೇಶ್‌ಕುಮಾರ್‌ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದರೆ ಏನಾಗುತ್ತಿತ್ತು? ಇಂಥ ತೀರ್ಪು ಏನಾದರೂ ಬಂದಿದ್ದರೆ ಬಿಜೆಪಿ ಯಾವುದೇ ಮುಜುಗರವಿಲ್ಲದೆ ಹೊಸ ಮತ್ತು ನಿಷ್ಠಾವಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದಿತ್ತು. ಪ್ರಸ್ತುತ ತೀರ್ಪಿನಿಂದ ಪಕ್ಷಾಂತರ ಮಾಡಿದ ಶಾಸಕರು ಯಾವುದೇ ಶಿಕ್ಷೆ ಇಲ್ಲದೆ ಪಾರಾದರು ಎಂದೂ ತರ್ಕಿಸಬಹುದು. ಒಂದು ವೇಳೆ ಅವರು ಉಪ ಚುನಾವಣೆಯಲ್ಲಿ ಮರಳಿ ಗೆದ್ದು ಬಂದರೆ ಬರೀ ಮೂರು ತಿಂಗಳ ಮಟ್ಟಿಗೆ ವಿಧಾನಸಭೆಯಿಂದ ಹೊರಗಿದ್ದಂತಾಯಿತಷ್ಟೆ. ಅನೇಕ ಶಾಸಕರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಆಪ್ತರ ಜೊತೆಗಿನ ಮಾತುಕತೆಯಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ “ನಮ್ಮನ್ನೇನೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರಿಗಳನ್ನು ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳನ್ನು ಪರಾಮರ್ಶಿಸುವುದು ಅಪೇಕ್ಷಣೀಯ.

ಸದ್ಯಕ್ಕೆ ರಾಜರಾಜೇಶ್ವರಿನಗರದಲ್ಲಿ ಮಾಜಿ ಶಾಸಕ ಮುನಿರತ್ನ ಪರವಾಗಿ ಪ್ರಚಾರ ಮಾಡುವ ಮುಜುಗರದಿಂದ ಬಿಜೆಪಿ ನಾಯಕರು ಪಾರಾಗಿದ್ದಾರೆ. ಮುನಿರತ್ನ ಮೇಲಿರುವ ಆರೋಪಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಅವರು ಶಾಸಕರಾಗಿದ್ದಾಗ ತನಿಖಾ ಸಂಸ್ಥೆಯೊಂದು ದಾಳಿ ನಡೆಸಿದಾಗ ಬಿಬಿ ಎಂಪಿಯ ಕೆಲವು ಎಂಜಿನಿಯರ್‌ಗಳು ಅವರ ಕಟ್ಟಡವೊಂದರ ಕೆಲಸದಲ್ಲಿ ನಿರತರಾಗಿರುವುದು ಪತ್ತೆಯಾಗಿತ್ತು. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 10,000ಕ್ಕೂ ಅಧಿಕ ಮತದಾರರ ಗುರುತಿನ ಕಾರ್ಡು ಮತ್ತು ಸಾವಿರಾರು ಚುನಾವಣಾ ಸಂಬಂಧಿ ದಾಖಲೆಪತ್ರಗಳು ಮುನಿರತ್ನ ಅವರಿಗೆ ಸೇರಿದ ಕಟ್ಟಡದಲ್ಲಿ ಪತ್ತೆಯಾದ ಬಳಿಕ ಚುನಾವಣಾ ಆಯೋಗ ಮತದಾನವನ್ನೇ ಮುಂದೂಡಿತ್ತು. ಅನಂತರ ಮತದಾನ ನಡೆದು ಮುನಿರತ್ನ ಗೆದ್ದು ಬಂದಿದ್ದಾರೆ ಎನ್ನುವುದು ಬೇರೆ ವಿಚಾರ. ಆದರೆ ಅವರ ವಿರುದ್ಧ ಆರೋಪ ಹೊರಿಸಿದವರಲ್ಲಿ ಬಿಜೆಪಿಯವರೇ ಮುಂಚೂಣಿಯಲ್ಲಿದ್ದರು.

ಪುಣ್ಯಕ್ಕೆ ಮಾಜಿ ಸಚಿವ ರೋಶನ್‌ ಬೇಗ್‌ ಅವರಿಗೆ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೇಟ್‌ ಕೊಡಲಿಲ್ಲ. ಇಂಟರ್‌ನ್ಯಾಶನಲ್‌ ಮೋನಿಟರಿ ಫ‌ಂಡ್‌ (ಐಎಂಎಫ್) ಎಂಬ ಬ್ಲೇಡ್‌ ಕಂಪೆನಿ ಎಸಗಿದ ಮಹಾ ವಂಚನೆಯ ಜೊತೆಗೆ ಬೇಗ್‌ ಹೆಸರು ತಳಕು ಹಾಕಿಕೊಂಡಿದೆ. ಐಎಂಎಫ್ “ಹಲಾಲ್‌ ಬ್ಯಾಂಕಿಂಗ್‌’ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಅಧಿಕ ಪ್ರತಿಫ‌ಲ ನೀಡುವ ಆಮಿಷ ತೋರಿಸಿ ಮುಸ್ಲಿಂರಿಂದ ಕೋಟಿಗಟ್ಟಲೆ ಹೂಡಿಕೆ ಸಂಗ್ರಹಿಸಿ ಪಂಗನಾಮ ಹಾಕಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಕಾರ್ಪೋರೇಟರ್‌ ಸರವಣ ಅವರನ್ನು ಕಣಕ್ಕಿಳಿಸಿದೆ. ಶಿವಾಜಿನಗರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ (ಶೇ.40). ರೋಶನ್‌ ಬೇಗ್‌ ಕಾಂಗ್ರೆಸ್‌ ಅಥವಾ ಜನತಾ ದಳ (ಎಸ್‌) ಟಿಕೇಟಿನಲ್ಲಿ ಈ ಕ್ಷೇತ್ರದಿಂದ ನಿರಾಯಾಸವಾಗಿ ಗೆಲ್ಲುತ್ತಿದ್ದರು. ಆದರೆ ಹಿಂದು ಅಭ್ಯರ್ಥಿಗಳಾದ ಕಾಂಗ್ರೆಸಿನ ಎ.ಕೆ.ಅನಂತಕೃಷ್ಣ ಹಾಗೂ ಬಿಜೆಪಿಯ ಸುರಾನ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎದುರು ಅವರು ಸೋತ ಇತಿಹಾಸವೂ ಇದೆ. ನಾಯ್ಡು ಎರಡು ಸಲ ರೋಶನ್‌ ಬೇಗ್‌ ಅವರನ್ನು ಸೋಲಿಸಿರುವುದರಿಂದ ಈ ಕ್ಷೇತ್ರಕ್ಕೆ ಅವರೇ ಉತ್ತಮ ಅಭ್ಯರ್ಥಿಯಾಗುತ್ತಿದ್ದರು.

ಬಹುತೇಕ ಬೆಂಗಳೂರಿನ ಭಾಗವೇ ಆಗಿರುವ ಹೊಸಕೋಟೆ ಉಪ ಚುನಾವಣೆಯಲ್ಲಾಗುತ್ತಿರುವ ಮುಜುಗರವನ್ನು ಮರೆಮಾಚಲು ಬಿಜೆಪಿ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಚಿಕ್ಕಬಳ್ಳಾಪುರದ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಈ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್‌ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗಿನವರೆಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದ ಎಂ.ಟಿ.ಬಿ. ನಾಗರಾಜ್‌ರನ್ನು ಸೋಲಿಸಬೇಕೆನ್ನುವುದು ಶರತ್‌ ಬಚ್ಚೇಗೌಡರ ಗುರಿ. ರಾಜ್ಯದ ಸಿರಿವಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ನಾಗರಾಜ್‌ ಟೇಬಲ್‌ ಮೌಲ್ಡ್‌ ಇಟ್ಟಿಗೆ ವ್ಯವಹಾರದಲ್ಲಿ ತೊಡಗಿಕೊಂಡವರು. ಎಂ.ಟಿ.ಬಿ. ಎಂದರೆ ಮಂಜುನಾಥ ಟೇಬಲ್‌ ಬ್ರಿಕ್ಸ್‌ನ ಸಂಕ್ಷಿಪ್ತ ರೂಪ. ಕುರುಬ ಸಮುದಾಯಕ್ಕೆ ಸೇರಿದ ನಾಗರಾಜ್‌ ಮೊರಸು ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.

ಹೊಸಕೋಟೆ ರಣಾಂಗಣ
ಶರತ್‌ ಬಚ್ಚೇಗೌಡರಿಗೆ ಟಿಕೆಟ್‌ ನಿರಾಕರಿಸಿರುವುದನ್ನು ಸಂಸತ್‌ ಅಥವಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕುಟುಂಬದ ಹಿಡಿತವನ್ನು ಮುರಿಯುವ ಪ್ರಯತ್ನ ಎಂದು ವ್ಯಾಖ್ಯಾನಿಸಬಹುದು. ಅವರ ಅಜ್ಜ ಚನ್ನಬೈರೇಗೌಡ ಸ್ವತಂತ್ರ ಪಾರ್ಟಿಯ ವಿಧಾನ ಪರಿಷತ್‌ ಸದಸ್ಯರಾಗಿ ದ್ದರು. ಕಾಂಗ್ರೆಸಿನ ಮಾಜಿ ಸಚಿವ ಎನ್‌. ಚಿಕ್ಕೇಗೌಡ, ಚನ್ನಬೈರೇಗೌಡರಿಗೆ ಸಂಬಂಧಿಯಾಗಬೇಕು. ಇನ್ನೋರ್ವ ಸಂಬಂಧಿ ವಿ. ಮನೇಗೌಡ ಅವರೂ ಎಂಎಲ್‌ಸಿಯಾಗಿದ್ದವರು. ಚನ್ನಬೈರೇ ಗೌಡರ ಅಳಿಯ ಡಿ. ಎಸ್‌. ಗೌಡ ಪಕ್ಕದ ದೇವನಹಳ್ಳಿ ಕ್ಷೇತ್ರದ ಶಾಸಕರಾಗಿದ್ದರು. ಶರತ್‌ ಗೌಡರ ತಂದೆ ಬಚ್ಚೇಗೌಡ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದರೂ ಹೊಸಕೋಟೆಯಿಂದ ಗೆದ್ದು ಸಚಿವರಾಗಿದ್ದಾರೆ. ಒಂದು ರೀತಿಯಲ್ಲಿ ಬಚ್ಚೇಗೌಡ ರಿಗೀಗ ಉಭಯ ಸಂಕಟ. ಅವರು ಪಕ್ಷ ನಿಷ್ಠೆಯನ್ನು ಆಯ್ದುಕೊಳ್ಳುತ್ತಾರೋ/ಪುತ್ರನ ರಾಜಕೀಯ ಭವಿಷ್ಯ ವನ್ನು ಆಯ್ದುಕೊಳ್ಳುತ್ತಾರೋ ಎನ್ನುವುದನ್ನು ಬಿಜೆಪಿ ಹೈಕಮಾಂಡ್‌ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಅದು ಅಸಹಜವಲ್ಲ. ದೇವೆಗೌಡ ಕುಟುಂಬ ಮಾತ್ರವಲ್ಲ ರಾಜಕೀಯವಾಗಿ ಉಳಿದವರ ಬೆಳವಣಿಗೆಯನ್ನು ತಡೆಯುವ ಇನ್ನೂ ಹಲವು ಕುಟುಂಬಗಳು ಇವೆ. ಗೋಕಾಕದ ಜಾರಕಿಹೊಳಿ ಕುಟುಂಬ ಇದಕ್ಕೆ ಇನ್ನೊಂದು ಉದಾಹರಣೆ.

ಸಚಿವರಾಗಿ ಪಕ್ಷಾಂತರಿಗಳು
ಕುಟುಂಬ ರಾಜಕಾರಣಕ್ಕೆ ಪ್ರಮುಖ ರಾಜಕೀಯ ಪಕ್ಷಗಳನ್ನೇ ದೂಷಿಸಬೇಕು. ಈ ಪಕ್ಷಗಳು ಜಾತಿ ಮತ್ತು ಗೆಲುವಿನ ಸಾಧ್ಯತೆಯನ್ನು ಮಾನದಂಡವಾಗಿರಿಸಿಕೊಂಡು ಪಕ್ಷಾಂತರಿಗಳನ್ನು ಬರಮಾಡಿಕೊಳ್ಳುತ್ತವೆ.
ಆದರೆ ಈಗ ರಾಜ್ಯದ ಜನತೆಯ ಮುಂದಿರುವ ಪ್ರಶ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹರಿಗೆ ಗೆದ್ದು ಬಂದರೆ ಮಂತ್ರಿ ಮಾಡುತ್ತೇವೆ ಎಂಬುದಾಗಿ ನೀಡಿರುವ ಭರವಸೆ ಕುರಿತಾದದ್ದು. ಈ ಅಂಕಣದಲ್ಲಿ ಹಲವಾರು ಬಾರಿ ಹೇಳಿರುವಂತೆ ಮಂತ್ರಿಗಳ ಆಯ್ಕೆ ವಿಚಾರದಲ್ಲಿ ಜನರನ್ನು ಗುತ್ತಿಗೆ ತೆಗೆದುಕೊಂಡಿರುವಂತೆ ಭಾವಿಸಬಾರದು. ಆದರೆ ಈಗ ಆಗುತ್ತಿರುವುದು ಅದೇ. ನ್ಯಾಯಾಂಗವೇ ರಚಿಸಿರುವ ಕೊಲಿಜಿಯಂ ವ್ಯವಸ್ಥೆಯಲ್ಲೇ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ವಕೀಲರೂ ಸೇರಿ ಹಲವರು ದೂರುತ್ತಿದ್ದಾರೆ. ಹೀಗಿರುವಾಗ ಮಂತ್ರಿಗಳ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ನಿರೀಕ್ಷಿಸಬಹುದೆ? ಜನರು ತಮ್ಮ ಮೇಲೆ ಹೇರಿದವರನ್ನು ತೆಪ್ಪಗೆ ಒಪ್ಪಿಕೊಳ್ಳಬೇಕಷ್ಟೆ.

ಚುನಾವಣೆಯಲ್ಲಿ ಸ್ಪರ್ಧಿಸದ ಇಬ್ಬರನ್ನು ಸೇರಿ ಅನರ್ಹಗೊಂಡಿರುವ ಹೆಚ್ಚಿನ ಶಾಸಕರಿಗೆ ಸರಕಾರ ನಡೆಸುವ ಅರ್ಹತೆ ಇಲ್ಲ. ಇಂಥ ಸಚಿವರು ಇಲ್ಲದೆಯೂ ಆಡಳಿತ ನಡೆಸಬಹುದು. ಓರ್ವ ರಾಜಕೀಯ ನಾಯಕನ ಆಯ್ಕೆ ಅವನಿಗೆ ಅಥವಾ ಅವನ ಕುಟುಂಬಕ್ಕಷ್ಟೆ ಕಳವಳದ ಅಥವಾ ಹೆಮ್ಮೆಯ ವಿಷಯವಾಗಿರಬಹುದು. ಆದರೆ ಸದ್ಯ ಯಡಿಯೂರಪ್ಪ ನೇತೃತ್ವದ 4ನೇ ಸರಕಾರದ ಅಳಿವು ಉಳಿವಿನ ಪ್ರಶ್ನೆಯೂ ಇದೆ.

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ˆಕುಮಾರಸ್ವಾಮಿಯವರ ಸರಕಾರ ಅದಾಗಿಯೇ ಪತನಗೊಳ್ಳುವ ತನಕ ತಾಳ್ಮೆಯಿಂದ ಕಾಯ ಬೇಕಿತ್ತು. ಆಗ ಜೆಡಿಎಸ್‌ ಸರಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿತ್ತು. ಒಂದು ವೇಳೆ ಜೆಡಿಎಸ್‌ ಸಿದ್ಧಾಂತದ ನೆಪ ಹೇಳಿ ಬೆಂಬಲ ನೀಡದಿದ್ದರೆ ಮರಳಿ ಹೊಸದಾಗಿ ಚುನಾವಣೆ ನಡೆಸುವುದೇ ಉಳಿಯುವ ದಾರಿಯಾಗುತ್ತಿತ್ತು. ಪಕ್ಷಾಂತರದಲ್ಲಿ ತನ್ನ ಪಾತ್ರವಿರುವುದನ್ನು ಬಿಜೆಪಿ ಒಪ್ಪಿಕೊಳ್ಳುವುದು ಅನಿವಾರ್ಯ. ಹೀಗಾಗಿ ಉಪಚುನಾವಣೆಯನ್ನು ರಾಜ್ಯದ ಮೇಲೆ ಹೇರುವ ಮೂಲಕ ಸಮಯ, ಸಂಪನ್ಮೂಲವನ್ನು ವ್ಯರ್ಥ ಗೊಳಿಸಿದ ದೂಷಣೆಯನ್ನೂ ಅದು ಹೊತ್ತುಕೊಳ್ಳಬೇಕಾಗುತ್ತದೆ. ಪದೇ ಪದೆ ಚುನಾವಣೆ ನಡೆಸುವುದರಿಂದ ಸಂಪನ್ಮೂಲ,ಸಮಯ ನಷ್ಟವಾಗುವು ದನ್ನು ತಡೆಯಲು ಲೋಕಸಭೆ-ವಿಧಾನಸಭೆಗಳಿಗೆ ಏಕಕಾಕಲಕ್ಕೆ ಚುನಾವಣೆ ನಡೆಸಬೇಕೆಂದು ಪ್ರಧಾನಿ ಮೋದಿ ಪ್ರತಿಪಾದಿಸುತ್ತಿದ್ದಾರೆ. ಆದರೆ ರಾಜಕೀಯ ನಾಯಕರ ಇತಿಹಾಸವನ್ನು ಗಮನಿಸಿದರೆ ಗೆದ್ದವರು ಪಕ್ಷಾಂತರ ಮಾಡುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ.

ಎರಡನೇ ಹಂತದಲ್ಲಿ ನಡೆದ ಆಪರೇಷನ್‌ ಕಮಲದಿಂದ ಬಿಜೆಪಿಯ ವರ್ಚಸ್ಸಿಗೆ ಸಾಕಷ್ಟು ಹಾನಿಯಾಗಿದೆ. “ಭಿನ್ನವಾದ ಪಕ್ಷ’ ಎಂಬ ತನ್ನ ಹಿರಿಮೆಯನ್ನು ಈ ಪಕ್ಷ ಗಂಭೀರವಾಗಿ ಪರಿಗಣಿಸಿ ತಕ್ಷಣದ ಲಾಭಕ್ಕಾಗಿ ಹಾತೊರೆದರೆ ಭವಿಷ್ಯದಲ್ಲಿ ಅಪಾಯವಿದೆ ಎಂಬುದನ್ನು ಅರಿತುಕೊಳ್ಳಬೇಕು ಮತ್ತು ಅಧಿಕಾರದ ನಾಗಾಲೋಟದಲ್ಲಿ ಉಳಿದ ಪಕ್ಷಗಳನ್ನು ಮೂರ್ಖರನ್ನಾಗಿ ಮಾಡಬಾರದು.

-ಅರಕೆರೆ ಜಯರಾಮ್‌

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.