ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಅಭಿಷೇಕ್-ಜ್ಯೋತಿ
Team Udayavani, Nov 28, 2019, 12:00 AM IST
ಬ್ಯಾಂಕಾಕ್: ಇಪ್ಪತ್ತೂಂದನೇ ಏಶ್ಯನ್ ಆರ್ಚರಿ ಚಾಂಪಿಯನ್ಶಿಪ್ನ ಕೊನೆಯ ದಿನ ಭಾರತ ಚಿನ್ನದ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಬುಧವಾರ ನಡೆದ ಮಿಶ್ರ ಕಂಪೌಂಡ್ ವಿಭಾಗದ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮ-ಜ್ಯೋತಿ ಸುರೇಖಾ ವೆನ್ನಮ್ ಬಂಗಾರಕ್ಕೆ ಗುರಿ ಇರಿಸಿದರು. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ಏಳಕ್ಕೆ ಏರಿತು.
ಅಭಿಷೇಕ್-ಜ್ಯೋತಿ ಜೋಡಿ ಫೈನಲ್ನಲ್ಲಿ ಚೈನೀ ಸ್ ತೈಪೆಯ ಯಿ ಸುವಾನ್ ಚೆನ್-ಚೀ ಲುಹ್ ಚೆನ್ ವಿರುದ್ಧ 158-151 ಅಂಕಗಳ ಮೇಲುಗೈ ಸಾಧಿಸಿದರು.
ಬೆಳ್ಳಿಗೆ ಸಮಾಧಾನ
ಇದಕ್ಕೂ ಮೊದಲು ನಡೆದ ಪುರುಷರ ಕಂಪೌಂಡ್ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮ ಚಿನ್ನದ ಪದಕ ಕಳೆದುಕೊಂಡು ನಿರಾಸೆ ಅನುಭವಿಸಿದ್ದರು. ಅಭಿಷೇಕ್ ವರ್ಮ, ರಜತ್ ಚೌಹಾಣ್, ಮೋಹನ್ ಭಾರದ್ವಜ್ ಅವರನ್ನೊಳಗೊಂಡ ಭಾರತ ತಂಡ ಕೊರಿಯಾ ವಿರುದ್ಧ ಕೇವಲ ಒಂದಂಕದ ಹಿನ್ನಡೆ ಅನು ಭವಿಸಿ (232-233) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ವನಿತಾ ಕಂಪೌಂಡ್ ತಂಡ ವಿಭಾಗದಲ್ಲೂ ಭಾರತ 215-231 ಅಂಕಗಳಿಂದ ಕೊರಿಯಾ ವಿರುದ್ಧ ಸೋತು ಚಿನ್ನ ಕಳೆದುಕೊಂಡಿತು. ಜ್ಯೋತಿ ಸುರೇಖಾ ವೆನ್ನಮ್, ಮುಸ್ಕಾನ್ ಕಿರಾರ್, ಪ್ರಿಯಾ ಗುರ್ಜರ್ ಭಾರತ ತಂಡದಲ್ಲಿದ್ದರು.
ಆದರೆ ಮಿಶ್ರ ಕಂಪೌಂಡ್ ವಿಭಾಗದ ಫೈನಲ್ನಲ್ಲಿ ಅಭಿಷೇಕ್-ಜ್ಯೋತಿ ಭರ್ಜರಿಯಾಗಿ ತಿರುಗಿ ಬಿದ್ದರು. ಆರಂಭದಿಂದಲೇ ನಿಖರ ಗುರಿ ಕಂಡುಕೊಳ್ಳುವ ಮೂಲಕ ಚೈನೀಸ್ ತೈಪೆ ಎದುರಾಳಿಗಳನ್ನು ಹಿಂದಿಕ್ಕಿದರು.
ಭಾರತ ಈ ಕೂಟದಲ್ಲಿ ಒಟ್ಟು ಒಂದು ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಜಯಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.