ರಾಜ್ಯದಲ್ಲೂ ಹನಿಟ್ರ್ಯಾಪ್‌: ಎಂಟು ಬಂಧನ


Team Udayavani, Nov 28, 2019, 5:45 AM IST

AA-40

ಬೆಂಗಳೂರು: ಇತ್ತೀಚೆಗಷ್ಟೇ ಮಧ್ಯ ಪ್ರದೇಶದಲ್ಲಿ ನಡೆದ ದೇಶದಲ್ಲೇ ಅತೀ ದೊಡ್ಡ ಹನಿಟ್ರ್ಯಾಪ್‌ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿಯೂ ಅಂಥದೇ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಒಂದೆರಡು ವರ್ಷಗಳಲ್ಲಿ ಆರೇಳು ಮಂದಿ ಜನಪ್ರತಿನಿಧಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದ ಮಾಜಿ ಸಚಿವರು, ಶಾಸಕರು ಯುವತಿಯರ ಜತೆ ಖಾಸಗಿಯಾಗಿರುವ ದೃಶ್ಯಗಳನ್ನು ಸೆರೆ ಹಿಡಿದು ಕೋಟ್ಯಂತರ ರೂ.ಗೆ ಬೇಡಿಕೆ ಇರಿಸಿದ್ದ ಯುವತಿಯರು ಸೇರಿ 8 ಮಂದಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ನಿವಾಸಿ ರಾಘವೇಂದ್ರ ಅಲಿಯಾಸ್‌ ರಘು ಮತ್ತು ಆತನ ಸ್ನೇಹಿತೆ, ವೈಟ್‌ಫೀಲ್ಡ್‌ ನಿವಾಸಿ ಯುವತಿ, ಇನ್ನೊಬ್ಬಳು ಯುವತಿ ಮತ್ತು ಉದಯ್‌, ಇತರ ನಾಲ್ವರು ಬಂಧಿತರು.

ಮೊಬೈಲ್‌ ಅಂಗಡಿ ಉದ್ಯೋಗಿಯಾಗಿದ್ದ ರಾಘವೇಂದ್ರ ಅಲ್ಲಿ ಸೈಬರ್‌ ಕ್ರೈಂ ಬಗೆಗೆ ತಿಳಿದುಕೊಂಡು ಹನಿಟ್ರ್ಯಾಪ್‌ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದಿಸಬಹುದು ಎಂದು ತೀರ್ಮಾನಿಸಿದ್ದ. ಈ ವಿಚಾರವನ್ನು ಸ್ನೇಹಿತೆಗೆ ತಿಳಿಸಿ ಸಹಕಾರ ಕೋರಿದ್ದ. ಇವರಿಬ್ಬರು ಅನಂತರ ತಮ್ಮ ಜಾಲ ವಿಸ್ತರಿಸಿಕೊಳ್ಳಲು ವೇಶ್ಯಾವಾಟಿಕೆ ದಂಧೆ ನಡೆಸುವ ವ್ಯಕ್ತಿಯನ್ನು ಪರಿಚಯಿಸಿಕೊಂಡು ತಮ್ಮ ಅವ್ಯವಹಾರಕ್ಕೆ ಬೆಲೆವೆಣ್ಣುಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಜನಪ್ರತಿನಿಧಿಗಳಿಗೆ ಹತ್ತಿರ
ಆರಂಭದಲ್ಲಿ ಕಷ್ಟಗಳನ್ನು ಹೇಳಿಕೊಂಡು ಜನಪ್ರತಿನಿಧಿಗಳ ಬಳಿ ಹೋಗುತ್ತಿದ್ದ ರಾಘವೇಂದ್ರ ಮತ್ತಾತನ ಸ್ನೇಹಿತೆ ಅನಂತರ ಅವರ ಸ್ನೇಹ ಬೆಳೆಸು ತ್ತಿದ್ದರು. ನಾನಾ ಸ್ಥಳಗಳಲ್ಲಿ ಅವರನ್ನು ಪದೇ ಪದೇ ಭೇಟಿ ಯಾಗುತ್ತಿದ್ದರು. ತೀರಾ ಆತ್ಮೀಯರಾಗುತ್ತಿದ್ದ ನಾಯಕರನ್ನು ಹನಿಟ್ರ್ಯಾಪ್‌ ಮೂಲಕ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು.

ಅನಂತರ ಕೆಲವು ಕಾಲ್‌ಗ‌ರ್ಲ್ಗಳನ್ನು ಸಂಪರ್ಕಿಸಿ, ದಂಧೆಗೆ ಬಳಸಿಕೊಳ್ಳುತ್ತಿದ್ದರು. ಯುವತಿಯರ ಜತೆ ಖಾಸಗಿ ಸಮಯ ಕಳೆಯಲು ಬಯಸುವ ನಾಯಕರಿಗೆ ಹೋಟೆಲ್‌ ಕಾಯ್ದಿರಿಸುತ್ತಿದ್ದರು. ರಹಸ್ಯ ಕೆಮರಾಗಳ ಮೂಲಕ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಹಣಕ್ಕಾಗಿ ಬೇಡಿಕೆ ಮಂಡಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

25 ಕೋ.ರೂ.ಗೆ ಬೇಡಿಕೆ ಇರಿಸಿ ಬಲೆಗೆ ಬಿದ್ದರು!
ಆರೋಪಿಗಳು ಒಂದೆರಡು ವರ್ಷಗಳಿಂದ ಇದೇ ದಂಧೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಮಧ್ಯೆ ಮಾಜಿ ಸಚಿವರೊಬ್ಬರ ಖಾಸಗಿ ದೃಶ್ಯವನ್ನು ಸೆರೆ ಹಿಡಿದಿದ್ದ ರಾಘವೇಂದ್ರನ ಸ್ನೇಹಿತೆ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು.

ರಾಘವೇಂದ್ರ ಜತೆ ಸೇರಿಕೊಂಡು 25 ಕೋ.ರೂ.ಗೆ ಬೇಡಿಕೆ ಇಟ್ಟಿದ್ದಳು. ಕೊನೆಗೆ 10 ಕೋ.ರೂ.ಗೆ ಕೊಡುವಂತೆ ಹೇಳಿ, ಲಕ್ಷಾಂತರ ರೂ. ಹಣ ಪಡೆದಿದ್ದರು. ಆದರೆ ನಿರಂತರ ಬ್ಲಾಕ್‌ಮೇಲ್‌ಗೆ ವಿಚಲಿತಗೊಂಡ ಆ ಮಾಜಿ ಸಚಿವರು, ಸದ್ಯ ರಾಜ್ಯದಲ್ಲಿ ಪ್ರಭಾವಿ ಖಾತೆ ಹೊಂದಿರುವ ಸಚಿವರೊಬ್ಬರ ಸಹಾಯ ಕೋರಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಹಾಲಿ ಸಚಿವರು ಆರೋಪಿಗಳ ಬಂಧನಕ್ಕೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೇಳು ದಿನಗಳಿಂದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಸೆ. 23ರಂದು ರಾಘವೇಂದ್ರನ ಗೆಳತಿ ಮತ್ತು ವೇಶ್ಯಾವಾಟಿಕೆ ದಂಧೆ ನಡೆಸುವ ವ್ಯಕ್ತಿಯನ್ನು ಬಂಧಿಸಿದ್ದರು. ಮಂಗಳವಾರ ರಾತ್ರಿ ದಾವಣಗೆರೆಯಲ್ಲಿ ರಾಘವೇಂದ್ರ ಮತ್ತು ಮತ್ತೂಬ್ಬ ಯುವತಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಪೊಲೀಸರಿಂದಲೇ ಮಾತುಕತೆ
ಕಾರ್ಯಾಚರಣೆಗಿಳಿದ ಪೊಲೀಸರು ಆರಂಭದಲ್ಲಿ ಆರೋಪಿ ರಾಘವೇಂದ್ರನನ್ನು ಸಂಪರ್ಕಿಸಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮನವಿ ಮಾಡಿದ್ದರು. ಆದರೂ ರಾಘವೇಂದ್ರ ವಿಡಿಯೋವನ್ನು ಗದಗ ಜಿಲ್ಲೆಯ ತಾಲೂಕಿನ ಉದಯ ಎಂಬಾತನ ಮೂಲಕ ಹರಿಯಬಿಟ್ಟು ಬಳಿಕ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಜೈಲಿಗೆ ಹೋಗಿದ್ದ ಆರೋಪಿ
ಆರೋಪಿ ರಾಘವೇಂದ್ರ ಹನಿಟ್ರ್ಯಾಪ್‌ ದಂಧೆ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡಕದಲ್ಲಿ ರಹಸ್ಯ ಕೆಮರಾ
ಜನಪ್ರತಿನಿಧಿಗಳ ಜತೆ ಖಾಸಗಿ ಸಮಯ ಕಳೆಯಲು ಕಳುಹಿಸುತ್ತಿದ್ದ ಯುವತಿಯರು ಧರಿಸುವ ಕನ್ನಡಕ ಮತ್ತು ಕೊಂಡೊಯ್ಯುವ ವ್ಯಾನಿಟಿ ಬ್ಯಾಗ್‌ನಲ್ಲಿ ರಹಸ್ಯ ಕೆಮರಾ ಅಳವಡಿಸಿ ರೆಕಾರ್ಡ್‌ ಮಾಡಿಕೊಳ್ಳಲಾಗುತ್ತಿತ್ತು. ಅನಂತರ ಪೆನ್‌ಡ್ರೈವ್‌ನಲ್ಲಿ ಹಾಕಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.