ಬಿಜೆಪಿಗೆ ಸಮೀಕ್ಷೆಯ ಆತಂಕ
Team Udayavani, Nov 28, 2019, 6:30 AM IST
ಬೆಂಗಳೂರು: ಉಪ ಚುನಾವಣೆ ಕಣ ರಂಗೇರುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ, 4 ಕಡೆ ತೀವ್ರ ಹಣಾಹಣಿ ನಡೆಯಲಿದೆ ಎಂಬುದು ಪಕ್ಷದ ಕೈಸೇರಿರುವ ಸಮೀಕ್ಷಾ ವರದಿಗಳಿಂದ ಗೊತ್ತಾಗಿದೆ. ಉಳಿದಂತೆ 8 ಕ್ಷೇತ್ರಗಳು ಬಿಜೆಪಿಗೆ ಆಶಾದಾಯಕವಾಗಿರುವ ಬಗ್ಗೆಯೂ ವರದಿ ಉಲ್ಲೇಖೀಸಿದೆ. ಈ ವರದಿಗಳ ಆಧಾರದಲ್ಲಿ ಬದಲಾದ ಪರಿಸ್ಥಿತಿಗೆ ಪೂರಕವಾಗಿ ಕಾರ್ಯತಂತ್ರ ಹೆಣೆದು ಗೆಲುವು ಸಾಧಿಸುವತ್ತ ಶ್ರಮಿಸಲು ಬಿಜೆಪಿ ನಾಯಕರು ಗಮನ ಹರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಾಲ್ಕು ಕ್ಷೇತ್ರಗಳಲ್ಲಿ ಹಿನ್ನಡೆ
ಪ್ರತಿಷ್ಠಿತ ಕ್ಷೇತ್ರಗಳೆನಿಸಿರುವ ಕೆ.ಆರ್. ಪೇಟೆ, ಹುಣಸೂರು, ಶಿವಾಜಿ ನಗರ ಮತ್ತು ಕಾಗವಾಡಗಳಲ್ಲಿ ಸದ್ಯ ಬಿಜೆಪಿಗೆ ತುಸು ಹಿನ್ನಡೆಯ ವಾತಾವರಣ ವಿರುವುದು ಗೊತ್ತಾಗಿದೆ.
ಮೂರು ಕಡೆ ತೀವ್ರ ಹಣಾಹಣಿ
ಹೊಸಕೋಟೆ, ಯಶವಂತಪುರ ಮತ್ತು ಚಿಕ್ಕಬಳ್ಳಾಪುರಗಳಲ್ಲೂ ತೀವ್ರ ಹಣಾಹಣಿ ನಡೆಯುವ ಲಕ್ಷಣ ಕಂಡು ಬಂದಿದ್ದು, ಬಿ’ ವಲಯದಲ್ಲಿವೆ ಎಂದು ಸಮೀಕ್ಷೆ ಹೇಳಿದೆ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆಯಿಂದಾಗಿ ಹಿನ್ನಡೆಯಾಗುವ ಸಾಧ್ಯತೆ ಬಗ್ಗೆಯೂ ಉಲ್ಲೇಖವಾಗಿದೆ.
ಎ’ ವಲಯದಲ್ಲಿ ಎಂಟು ಕ್ಷೇತ್ರ
ಮಹಾಲಕ್ಷ್ಮೀ ಲೇಔಟ್, ಕೆ.ಆರ್. ಪುರ, ಯಲ್ಲಾಪುರ, ಗೋಕಾಕ, ಅಥಣಿ, ವಿಜಯನಗರ (ಹೊಸಪೇಟೆ), ಹಿರೇ ಕೆರೂರುಗಳಲ್ಲಿ ಸದ್ಯ ಬಿಜೆಪಿಗೆ ಪೂರಕ ವಾತಾವರಣವಿದೆ ಎಂದು ಸಮೀಕ್ಷೆ ಹೇಳಿದೆ. ರಾಣೆಬೆನ್ನೂರಿನಲ್ಲಿದ್ದ ಸಮಸ್ಯೆ ಬಗೆಹರಿಸಲಾಗಿದ್ದು, ಎ’ ವಲಯ ದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.
ಕಾರ್ಯತಂತ್ರ ಬದಲು
ಮತದಾನಕ್ಕೆ ವಾರ ವಷ್ಟೇ ಬಾಕಿಯಿದ್ದು, ಹಿನ್ನಡೆಯಾಗಲಿರುವ ಮತ್ತು ತೀವ್ರ ಹಣಾಹಣಿ ನಡೆಯುವ ಕ್ಷೇತ್ರಗಳತ್ತ ಹೆಚ್ಚು ಗಮನಹರಿಸಲು ಬಿಜೆಪಿ ನಿರ್ಧರಿಸಿದೆ. ಸ್ಥಳೀಯ ಪರಿಸ್ಥಿತಿಗೆ ಪೂರಕ ವಾಗಿ ಪ್ರಮುಖ ವಿಚಾರಗಳನ್ನು ಪ್ರಸ್ತಾವಿಸುವ ಜತೆಗೆ ಅಭ್ಯರ್ಥಿ ಗೆದ್ದರೆ ಸಚಿವರಾಗಿ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ಅಂಶವನ್ನೇ ಒತ್ತಿ ಹೇಳುವಂತೆ ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.