ಸರವಣ ಪರ ಯಡಿಯೂರಪ್ಪ ರೋಡ್‌ ಶೋ

Team Udayavani, Nov 28, 2019, 3:07 AM IST

saravana

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಬೀದಿಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಅವರು ರೋಡ್‌ ಶೋ ಮೂಲಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪರ ಮತಯಾಚನೆ ಮಾಡಿದರು.

ಮತ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಕಳೆದ ಮೂರುವರೆ ದಶಕಗಳಿಂದ ನಗರದ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆಯದೆ ಕ್ಷೇತ್ರ ಹಿಂದುಳಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ನಿಮ್ಮ ಮನೆಯ ಮಗ ಸರವಣ ಅವರು ಕಣಕ್ಕಿಳಿದಿದ್ದಾರೆ. ಮತದಾರ ಪ್ರಭುಗಳಾದ ತಾವುಗಳು ತಮ್ಮ ಅಮೂಲ್ಯ ಮತವನ್ನು ಕಮಲದ ಗುರುತಿಗೆ ನೀಡುವ ಮೂಲಕ ಭಾರಿ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಪ್ರಚಾರಕ್ಕೂ ಮುನ್ನ ಹಲಸೂರಿನಲ್ಲಿರುವ ತಮಿಳು ಕವಿ ತಿರುವಳ್ಳುವರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅವರ ಜತೆಯಲ್ಲಿ ಸಂಸದ ಪಿ.ಸಿ. ಮೋಹನ್‌, ಶಾಸಕ ಉದಯ ಗರುಡಾಚಾರ್‌, ಮೇಯರ್‌ ಗೌತಮ್‌ಕುಮಾರ್‌ ಜೈನ್‌, ಬಿಜೆಪಿ ಮುಖಂಡ ನಿರ್ಮಲ್‌ ಕುಮಾರ್‌ ಸುರಾನಾ ಇದ್ದರು.

ಕ್ಷೇತ್ರದ ಪ್ರಮುಖ ಬಡಾವಣೆಗಳಲ್ಲಿ ರೋಡ್‌ ಶೋ ನಡೆಸಿದ ಸಿಎಂ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ನಮ್ಮ ಸರ್ಕಾರಕ್ಕೆ ನೀವು ಬೆಂಬಲ ನೀಡಿದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಹಿಂದೆ ಈ ಕ್ಷೇತ್ರದ ವಾರ್ಡ್‌ಗೆ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿರುವ ಸರವಣ ಅವರಿಗೆ ಮತ ನೀಡುವ ಮೂಲಕ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.

ರಸಲ್‌ ಮಾರ್ಕೆಟ್‌ನಲ್ಲಿ ಮತಯಾಚನೆ: ಬೆಳಗ್ಗೆ ರಸಲ್‌ ಮಾರ್ಕೆಟ್‌ನಿಂದ ಮತ ಪ್ರಚಾರ ಆರಂಭಿಸಿದ ಸರವಣ ಅವರು, ಅಲ್ಲಿನ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿ, ನಿಮ್ಮ ಸಮಸ್ಯೆಗಳನ್ನು ಹಾಗೂ ಕಷ್ಟಗಳನ್ನು ನೇರವಾಗಿ ಕಂಡಿದ್ದೇನೆ. ಅವುಗಳೆಲ್ಲವೂ ನನ್ನ ಮನಸ್ಸಿನಲ್ಲಿವೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನಿಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ನಂತರ ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ವಿವಿಧ ಭಾಗದ ಮನೆ ಮನೆಗೆ ತೆರಳಿ ಮತಯಾಚಿಸಿದರು. ಸಂಜೆ ಜಯಮಹಲ್‌ ವಾರ್ಡ್‌ ಬಡಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು. ಸರವಣ ಅವರಿಗೆ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್‌ ನೀಡಿದರು.

ಟಾಪ್ ನ್ಯೂಸ್

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bengaluru

ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.