ಶಿವಸೇನೆ ಮೈತ್ರಿ-ಮುನಿಸು ವಿಪಕ್ಷಗಳೊಂದಿಗೆ ನಡೆದದ್ದು ಇದೇ ಮೊದಲಲ್ಲ

Team Udayavani, Nov 28, 2019, 10:24 AM IST

mumbai-tdy1

ಮುಂಬಯಿ, ನ. 27: ಶಿವಸೇನೆ ತನ್ನ ಪರಮಾಪ್ತ ಗೆಳೆಯ ಬಿಜೆಪಿಯನ್ನು ತ್ಯಜಿಸಿ ಎನ್‌ ಸಿಪಿ, ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಲು ಸಿದ್ಧವಾಗುವ ಮೂಲಕ ವಿಪಕ್ಷಗಳೊಂದಿಗಿನ ಮುನಿಸಿಗೆ ಇತಿಶ್ರೀ ಹೇಳಿದೆ.

ಈ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ್ದು, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಎದುರು ಅಭ್ಯರ್ಥಿ ನಿಲ್ಲಿಸದೇ ಇದ್ದದ್ದು, ಕಟ್ಟರ್‌ ವಿರೋಧಿ ಎನ್ನಲಾಗಿದ್ದ ಮುಸ್ಲಿಂ ಲೀಗ್‌ ವಿರುದ್ಧವೂ ಸ್ಪರ್ಧಿಸದೇ ಇದ್ದ ಶಿವಸೇನೆ ಕೆಲವು ಹಂತಗಳಲ್ಲಿ ವಿಪಕ್ಷಗಳಿಗೂ ಆಪ್ತನಾಗಿ ಕಂಡಿತ್ತು. ಸುಮಾರು 5 ದಶಕಗಳಲ್ಲಿ ಶಿವಸೇನೆಯ ಮುಖ್ಯಸ್ಥರೇ ಮುಖ್ಯಮಂತ್ರಿ ಹುದ್ದೆಗೇರಿಲ್ಲ. ಅದರ ನಾಯಕರನ್ನು ಹುದ್ದೆಗೇರಿಸಿ, ತಾವೇ ಹಿನ್ನೆಲೆಯಲ್ಲಿರುತ್ತಿದ್ದರು.

ಕಾಂಗ್ರೆಸ್‌ ಭಾಯ್‌ :  1971ರಲ್ಲಿ ಪಕ್ಷ ಕಾಂಗ್ರೆಸ್‌ (ಒ) ನೊಂದಿಗೆ ಮೈತ್ರಿ ಸಾಧಿಸಿ ಮುಂಬಯಿ, ಕೋರೆಂಗಾವ್‌ ಪ್ರದೇಶದಿಂದ 3 ಸ್ಪರ್ಧಿಗಳನ್ನು ಇಳಿಸಿತ್ತು. 1977ರಲ್ಲಿ ಶಿವಸೇನೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು. ಆದರೂ ಆ ವರ್ಷ ಲೋಕಸಭೆ ಚುನಾವಣೆಗೆ ಯಾವುದೇ ಸ್ಪರ್ಧಿಯನ್ನು ಇಳಿಸಿರಲಿಲ್ಲ. 1977ರಲ್ಲೂ ಅದು ಕಾಂಗ್ರೆಸ್‌ ಅನ್ನು ಬೆಂಬಲಿಸಿತ್ತು. ಮುರಳಿ ದೇವೋರಾ ಅವರು ಮೇಯರ್‌ಗಿರಿಗೆ ಸ್ಪರ್ಧಿಸಿದ ಮುರಳಿ ದೇವೂರಾ ಅವರಿಗೆ ಕಾಂಗ್ರೆಸ್‌ ಬೆಂಬಲವಿತ್ತೆನ್ನಲಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, 1978ರಲ್ಲಿ ಜನತಾ ಪಕ್ಷದೊಂದಿಗೆ ಶಿವಸೇನೆಗೆ ಮೈತ್ರಿ ಸಾಧ್ಯವಾಗದಿದ್ದಾಗ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ (ಐ) ಜತೆ ಸಖ್ಯ ಬೆಳೆಸಿತ್ತು. ಆಗಿನ ವಿಧಾನಸಭೆ ಚುನಾವಣೆಯಲ್ಲಿ 33 ಅಭ್ಯರ್ಥಿ ಗಳನ್ನು ಇಳಿಸಿತ್ತು. ಆದರೆ ಇಂದಿರಾ ವಿರೋಧಿ ಅಲೆ ಇದ್ದಿದ್ದರಿಂದ ಎಲ್ಲರೂ ಸೋತಿದ್ದರು.

1970ರಲ್ಲಿ ಜೈ ಮಹಾರಾಷ್ಟ್ರ ವಾಕ್ಯದೊಂದಿಗೆ ಶಿವಸೇನೆ ನಗರ ಪಾಲಿಕೆ ಚುನಾವಣೆ ಸಂದರ್ಭ ಮುಸ್ಲಿಂ ಲೀಗ್‌ ಜತೆ ಕೈ ಜೋಡಿಸಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಮುಂಬಯಿಯಲ್ಲಿ ಎಡ ಪಕ್ಷಗಳ ಕಾರ್ಮಿಕ ಸಂಘಟನೆ ಪ್ರಾಬಲ್ಯ ವನ್ನು ಮುರಿದದ್ದು ಶಿವಸೇನೆ. ಅದಕ್ಕೆ ಬೆಂಗಾವಲಾಗಿದ್ದದ್ದು ಕಾಂಗ್ರೆಸ್‌. ಇದಕ್ಕೆ ತಕ್ಕಂತೆ ಶಿವಸೇನೆ ಮಧು ದಂಡವತೆ ಅವರ ಪ್ರಜಾ ಸೋಷಲಿಷ್ಟ್ಪಾ ರ್ಟಿಯೊಂದಿಗೆ 1968ರಲ್ಲಿ ಸಖ್ಯ ಸಾಧಿಸಿತ್ತು. ಇಂದಿರಾಗಾಂಧಿ ಅವರ ನಿಧನಾನಂತರ ಕಾಂಗ್ರೆಸ್‌ನೊಂದಿಗಿನ ಸಖ್ಯ ಕೊನೆಗೊಂಡಿತು. ಬಳಿಕ ಹಿಂದುತ್ವದ ಕಡೆಗೆ ತಿರುಗಿತು. ರಾಷ್ಟ್ರಪತಿ ಚುನಾವಣೆ ಸಂದರ್ಭ ಪ್ರತಿಭಾ ಪಾಟೀಲ್‌ ಮತ್ತು ಪ್ರಣಬ್‌ ಮುಖರ್ಜಿ ಅವರನ್ನು ಬೆಂಬಲಿಸಿತ್ತು.

ಪವಾರ್‌ ಭಾಯ್‌ :  ರಾಜಕಾರಣದಲ್ಲಿ ಶಿವಸೇನೆ-ಪವಾರ್‌ ಕೂಟದ ಪರಸ್ಪರ ವಿರೋಧ ಖಾಸಗಿ ಜೀವನದಲ್ಲಿರಲಿಲ್ಲ. ಶರದ್‌ ಪವಾರ್‌ ಅವರ ಆತ್ಮಕಥೆ “ಆನ್‌ ಮೈ ಟರ್ಮ್ಸ್’ನಲ್ಲಿ ಅವರು ಮಾತೋಶ್ರೀಗೆ ತಮ್ಮ ಪತ್ನಿ ಪ್ರತಿಭಾ ಅವರೊಂದಿಗೆ ಔತಣಕ್ಕೆ ಹೋಗಿದ್ದನ್ನು ಹೇಳಿದ್ದಾರೆ. 2004ರಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಠಾಕ್ರೆ ಅವರು, ಯಾವುದನ್ನೆಲ್ಲ ತಿನ್ನಬೇಕು? ಆಹಾರ ಹೇಗಿರಬೇಕು ಎಂದು ಸಲಹೆಯನ್ನೂ ನೀಡಿದ್ದರಂತೆ. ಖಾಸಗಿಯಾಗಿ ಪವಾರ್‌ ಅವರನ್ನು ಠಾಕ್ರೆ, “ಶರದ್‌ಬಾಬು’ ಎಂದೇ ಸಂಬೋಧಿಸುತ್ತಿದ್ದರಂತೆ. 2006ರಲ್ಲಿ ಸುಪ್ರಿಯಾ ರಾಜ್ಯಸಭೆಗೆ ನಿಂತಾಗ ಅವರ ವಿರುದ್ಧ ಶಿವಸೇನೆ ಸ್ಪರ್ಧಿಯನ್ನು ಇಳಿಸಿರಲಿಲ್ಲ. “ಶರದ್‌ಬಾಬು, ಆಕೆಯ ವೃತ್ತಿ ಜೀವನದಲ್ಲಿ ಇದು ಮಹತ್ವದ ಹೆಜ್ಜೆ. ಆಕೆ ಅವಿರೋಧವಾಗಿ ಆಯ್ಕೆಯಾಗುವುದನ್ನು ನಮ್ಮ ಪಕ್ಷ ನಿರೀಕ್ಷಿಸುತ್ತದೆ ಎಂದು ಠಾಕ್ರೆ ಅವರು ಫೋನ್‌ನಲ್ಲಿ ಹೇಳಿದ್ದರೆಂದು ಪವಾರ್‌ ಆತ್ಮಕಥೆಯಲ್ಲಿ ಉಲ್ಲೇಖೀಸಿದ್ದಾರೆ.

ಇತಿಹಾಸ ನಿರ್ಮಿಸಿದ ಉದ್ಧವ್‌ ಠಾಕ್ರೆ : ಶಿವಸೇನೆಯ ಸುದೀರ್ಘ‌ ಇತಿಹಾಸವನ್ನು ಗಮನಿಸಿದಾಗ ಮುಖ್ಯಸ್ಥರು ಎಂದಷ್ಟೇ ಗುರುತಿಸಿಕೊಳ್ಳುತ್ತಿದ್ದ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ಏರಿರುವುದು ವಿಶೇಷ. 1966ರಲ್ಲಿ ಬಾಳಾ ಠಾಕ್ರೆ ಹುಟ್ಟು ಹಾಕಿದ ಶಿವಸೇನೆ ರಾಜ್ಯ ಮತ್ತುಕೇಂದ್ರಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರೂತನ್ನದೇ ಪಕ್ಷದ ಮುಖ್ಯಸ್ಥನನ್ನು ಅಧಿಕಾರಕ್ಕೆ ಇಳಿಸಿರಲಿಲ್ಲ. ಹೀಗಾಗಿ ಉದ್ಧವ್‌ರ ಸಾಧನೆಹೊಸ ದಾಖಲೆ. ಉದ್ಧವ್‌ ಠಾಕ್ರೆಯನ್ನು ಅವರ ಚಿಕ್ಕಪ್ಪ (ಬಾಳ ಠಾಕ್ರೆಯವರ ತಮ್ಮ) ಶ್ರೀಕಾಂತ್‌ ಠಾಕ್ರೆ ಅವರು ಪ್ರೀತಿಯಿಂದ ಡಿಂಗ ಎಂದೇ ಕರೆಯುತ್ತಿದ್ದರು. ತಂದೆ ಬಾಳ ಠಾಕ್ರೆ, ಚಿಕ್ಕಪ್ಪ ಶ್ರೀಕಾಂತ್‌ ಠಾಕ್ರೆ ಮತ್ತು ಚಿಕ್ಕಪ್ಪನ ಮಗ ರಾಜ್‌ ಠಾಕ್ರೆ ಅವರಂತೆಯೇ ಉದ್ಧವ್‌ ಕೂಡ ವ್ಯಂಗ್ಯಚಿತ್ರಕಾರ. ಚಿಕ್ಕಪ್ಪನ ಒಡನಾಟ ದಲ್ಲೇ ಹೆಚ್ಚು ಬೆಳೆದ ಉದ್ಧವ್‌ ಬಳಿಕ ಛಾಯಾ ಗ್ರಹಣ ದತ್ತ ಹೊರಳಿದರು. 9 ವರ್ಷದ ಮಗು ವಾಗಿದ್ದಾಗ ತೀವ್ರ ಕಾಯಿಲೆಗೆ ಒಳಗಾಗಿದ್ದ ಉದ್ಧವ್‌ ಅವರನ್ನು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಆರೈಕೆ ಮಾಡಿದವರು ಶ್ರೀಕಾಂತ್‌ ಠಾಕ್ರೆ. ಮೌನಕ್ಕೆ ಶರಣಾದ ರಾಜ್‌ಠಾಕ್ರೆ ತಂದೆಯ ಕಾಲದ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಉದ್ಧವ್‌, ಕುಟುಂಬದ ಇದು ವರೆಗಿನ ನಡೆಯ ದಿಕ್ಕನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಇದೇ ವೇಳೆ ಠಾಕ್ರೆ ಕುಟುಂಬದ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಮೌನಕ್ಕೆ ಶರಣಾಗಿದ್ದಾರೆ.

ಶಿವಸೇನೆ- ಹಿಂದೂ ಧೋರಣೆ: 1995 ರಲ್ಲಿ  ಶಿವಸೇನೆಯ ಮನೋಹರ ಜೋಶಿಮೊಟ್ಟ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಅದಾದ ಬಳಿಕ ಈಗ ಉದ್ಧವ್‌ ಠಾಕ್ರೆ ಆಸ್ಥಾನವನ್ನು ಅಲಂಕರಿಸುತ್ತಿದ್ದಾರೆ. “ಮಣ್ಣಿನ ಮಕ್ಕಳಿಗೆ ಮುಂಬಯಿ’ ಎನ್ನುವ ಧೋರಣೆಯನ್ನು ಸಡಿಲಿಸಿ ಈ ನಾಡು ಹಿಂದೂಗಳದ್ದು ಎಂದು ಘೋಷಿಸಿದ್ದವರು ಬಾಳಾ ಠಾಕ್ರೆ. ಈ ಹಂತದಲ್ಲಿ ಮರಾಠಿಯೇತರರನ್ನೂ ಸ್ವಾಗತಿಸಿತು ಶಿವಸೇನೆ. ಹಲವು ರಾಜ್ಯಗಳ ಮುಖ್ಯ ಮಂತ್ರಿಗಳು, ಪಕ್ಷಗಳ ನಾಯಕರು, ಧಾರ್ಮಿಕ ಮುಂದಾಳು ಗಳಷ್ಟೇ ಅಲ್ಲ. ಪಾಪ್‌ ಗಾಯಕ ಮೈಕಲ್‌ ಜಾಕ್ಸನ್‌ ನಂಥವರೂ ಮಾತೋಶ್ರೀಯ ಅತಿಥಿ ಯಾಗಲು ಉತ್ಸಾಹ ತೋರಿದ್ದರು. ಬಾಳಾ ಠಾಕ್ರೆ ಅವರು ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಜನರ ನೋವು, ಹತಾಶೆಯನ್ನು ಅಭಿವ್ಯಕ್ತಿ ಸುತ್ತಿದ್ದರು. “ಮಾರ್ಮಿಕ್‌’ ಪತ್ರಿಕೆ ಯನ್ನು ಪ್ರಾರಂಭಿಸಿ, ಬಳಿಕ “ಸಾಮ್ನಾ’ವನ್ನು ಪ್ರಕಟಿಸಿದರು. ವ್ಯಂಗ್ಯಚಿತ್ರ ರಚನೆಯಿಂದ ಏಕೆ ವಿಮುಖರಾದಿರಿ ಎಂಬ ಪ್ರಶ್ನೆಗೆ ಠಾಕ್ರೆಯವರು, “ಒಳ್ಳೆಯ ಚಹರೆಗಳೇ ರಾಜಕೀಯದಲ್ಲಿ ಕಂಡು ಬಾರದಿದ್ದಾಗ ನಿಲ್ಲಿಸಿದೆ ‘ಎಂದಿದ್ದರು.

ಟಾಪ್ ನ್ಯೂಸ್

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.