ಮಂಗಳೂರು: ಬಸ್ಸು ಮಾಲಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ
Team Udayavani, Nov 28, 2019, 12:27 PM IST
ಮಂಗಳೂರು: ಹರೇಕಳ ಗ್ರಾಮಕ್ಕೆ ಸರಕಾರಿ ಬಸ್ಸುಗಳಿಗಾಗಿ ಬೇಡಿಕೆ ಸಲ್ಲಿಸಿ ಹಲವು ವರ್ಷಗಳಾದರೂ ಸರಕಾರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಗುರುವಾರ ಪಂಚಾಯತ್ ಸದಸ್ಯರು ಖಾಸಗಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜ, ನಾಲ್ಕೈದು ವರ್ಷಗಳಿಂದ ಆರ್.ಟಿ.ಓ. ಅಧಿಕಾರಿ ಬರುತ್ತಿಲ್ಲ. ಬಸ್ ಇಲ್ಲದ ಕಾರಣ ಸರಕಾರಿ ಶಾಲೆಗೆ ಮಕ್ಕಳು ಕಡಿಮೆಯಾಗಿದ್ದಾರೆ ಎನ್ನುವ ದೂರು ಬಂದಿದೆ. ಗ್ರಾಮಸಭೆಗೆ ಬರಲು ಆಗುವುದಿಲ್ಲ, ಯಾವೆಲ್ಲಾ ಬಸ್ಸುಗಳಿಗೆ ಪರವಾನಿಗೆ ಇದೆ ಬರೆದು ಕೊಡಿ ಎಂದು ನಮ್ಮಲ್ಲೇ ಕೇಳುತ್ತಾರೆ. ಬಸ್ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸ್ ಇಲಾಖೆಗೆ ಬಸ್ ನಿಲ್ಲಿಸಲು ಮನವಿ ಮಾಡಿದರೆ ಅನುಮತಿ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಿಂದ ಸರ್ಕಾರಿ ಬಸ್ಸಿಗೆ ಮನವಿ ಸಲ್ಲಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಆರ್ ಟಿಓಗೆ ಮನವಿ ಮಾಡಿದ್ದೇವೆ. ಮೂರು ತಿಂಗಳಿಗೊಮ್ಮೆ ಆರ್ ಟಿಓ ಬದಲಾಗುತ್ತಿದ್ದಾರೆ. ಬಸ್ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಅಧಿಕಾರಿಗಳು ನಮ್ಮನ್ನು ಮಂಗಗಳಂತೆ ಅಲೆದಾಡಿಸುತ್ತಾರೆ. ನಾಲ್ಕು ವರ್ಷಗಳಿಂದ ಸರಿಯಾಗಿ ಗ್ರಾಮಸಭೆಯೂ ನಡೆಯುತ್ತಿಲ್ಲ ಎಂದು ತಿಳಿಸಿದರು.
ಸದಸ್ಯ ಬಶೀರ್ ಉಂಬುದ ಮಾತನಾಡಿ, ಮಂಗಳೂರಿಂದ ಹರೇಕಳಕ್ಕೆ ಮೂವತ್ತು ಕಿ.ಮೀ. ದೂರವಿದ್ದು, ಬಸ್ಸಿನ ಅವ್ಯವಸ್ಥೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮನವಿಗೆ ಸ್ಪಂದಿಸದೆ, ಬಸ್ ಮಾಲೀಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗ್ರಾಮಸಭೆಗೆ ಬರಲು ಆಗುವುದಿಲ್ಲ, 2020ಕ್ಕೆ ನಮ್ಮ ಸಭೆ ಇದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಇಂದು ಸ್ಪಷ್ಟ ಉತ್ತರ ಸಿಗದಿದ್ದರೆ ಮುಂದಕ್ಕೆ ಗ್ರಾಮಸ್ಥರನ್ನು ಸೇರಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಮಹಮ್ಮದ್ ಸಾಲಿ, ಮಹಮ್ನದ್ ಅಶ್ರಫ್, ಬದ್ರುದ್ದೀನ್, ಸತ್ತಾರ್, ಬಶೀರ್, ಮಜೀದ್ ಎಂ.ಪಿ, ಶಿವರಾಮ ಶೆಟ್ಟಿ, ಕಲ್ಯಾಣಿ, ಸಾರ್ವಜನಿಕರಾದ ಮಜೀದ್, ವಿಶ್ವನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.