ಬೇಸಿಗೆ ಭತ್ತ ಬೆಳೆಯಲು ಅನ್ನದಾತರ ಭರದ ಸಿದ್ಧತೆ
ಭತ್ತದ ಸಸಿ ಹಾಕುತ್ತಿರುವ ರೈತರು
Team Udayavani, Nov 28, 2019, 1:16 PM IST
ಬಳಗಾನೂರು: ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ಭತ್ತದ ಎರಡನೇ ಬೆಳೆಗೆ ನೀರು ಹರಿಸಲು ನಿರ್ಧರಿಸುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದ ರೈತರು ಎರಡನೇ ಭತ್ತದ ಬೆಳೆಗೆ ಸಸಿ ಮಡಿ ಹಾಕುವುದರ ಮೂಲಕ ಭರದ ಸಿದ್ದತೆ ನಡೆಸಿದ್ದಾರೆ.
ಕಳೆದ ಮೇ, ಜೂನ್ ತಿಂಗಳಲ್ಲಿ ಬೋರ್ ವೆಲ್, ಕೆರೆ ನೀರು ಬಳಸಿ ಸಸಿ ಮಡಿಗಳನ್ನು ಹಾಕಿ ಜುಲೈ ಕೊನೆ ವಾರ ಮತ್ತು ಆಗಸ್ಟ್ ತಿಂಗಳ ಪೂರ್ತಿ ನಾಟಿ ಮಾಡಿದ ಭತ್ತದ ಬೆಳೆ ಕೊಯ್ಲಿಗೆ ಸಿದ್ಧವಾಗಿದೆ. ರೈತರು ಈಗಾಗಲೆ ಭತ್ತ ಕಟಾವು ಯಂತ್ರಗಳನ್ನು ತರಿಸಿ ಬೆಳೆ ಕೊಯ್ಲಿಗೆ ಮುಂದಾಗಿದ್ದಾರೆ. ಅದರ ಜತೆಗೆ ಮುಂದಿನ ಭತ್ತದ ಬೆಳೆಗೆ ಸಸಿ ಮಡಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಸಿ ಮಡಿ ಹಾಕಲು ಕಾಲುವೆ ನೀರು ಲಭ್ಯವಿದ್ದ ರೈತರು ತಮ್ಮ ಹೊಲಗಳಲ್ಲಿ ಸಸಿ ಹಾಕುತಿದ್ದಾರೆ. ಇನ್ನೂ ಕೆಲವು ರೈತರು ಸಸಿಗಳನ್ನು ಕಾಲುವೇ ನೀರು ಸುಲಭವಾಗಿ ಸಿಗುವ ರೈತರ ಗದ್ದೆಗಳಲ್ಲಿ ಸ್ಥಳ ಬಾಡಿಗೆ ಪಡೆದು ಹಾಕುತ್ತಿದ್ದಾರೆ.
ಪಟ್ಟಣದ ಹೋಬಳಿಯಲ್ಲಿ 55ನೇ ಡಿಸ್ಟ್ರಿಬ್ಯೂಟರ್ ಉಪ ಕಾಲುವೆಯಲ್ಲಿ ಬಾರ್ 1 ಮತ್ತು ಬಾರ್ 2 ವ್ಯಾಪ್ತಿಗೆ ಸುಮಾರು 5 ಸಾವಿರ ಎಕರೆ ಭೂಮಿ ಇದ್ದು ಇದರಲ್ಲಿ 3 ಸಾವಿರ ಎಕರೆ ಭತ್ತ ನಾಟಿ ಮಾಡಿದ್ದಾರೆ. 65ನೇ ಡಿಸ್ಟ್ರಿಬ್ಯೂಟರ್ ನಲ್ಲಿ ಸುಮಾರು 5 ಸಾವಿರ ಎಕರೆಯಲ್ಲಿ ಅದರಲ್ಲಿ ಸುಮಾರು 2.5 ಸಾವಿರ ಎಕರೆ ಭತ್ತ ನಾಟಿ ಮಾಡಿದ್ದಾರೆ. ಸಕಾಲಕ್ಕೆ ನಾಟಿ ಮಾಡದೆ ಇರುವುದು ಮತ್ತು ಆರಂಭದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಇಳುವರಿ ಕಡಿಮೆಯಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.
ಇನ್ನುಳಿದ ಪ್ರದೇಶದಲ್ಲಿ ಮಳೆ ಕೊರತೆ, ಕಾಲುವೆ ನೀರಿನ ಅಭಾವದಿಂದ ಭೂಮಿಯಲ್ಲಿ ಕಡಲೆ, ಜೋಳ ಹತ್ತಿ, ಸೇರಿ ಇತರೆ ಬೆಳೆಗಳನ್ನು ಹಾಕಿದ್ದರು. ಮುಂದಿನ ಬೆಳೆಗೆ ಸಂಪೂರ್ಣ ನೀರು ಸಿಗುವ ಭರವಸೆ ಹಿನ್ನೆಲೆಯಲ್ಲಿ ಕೆಲ ರೈತರು ಬಿತ್ತಿದ ಜೋಳ ಕಿತ್ತಿ ಹಾಕಿ ಭತ್ತದ ಸಸಿ ಮಡಿಗಳನ್ನು ಸಿದ್ಧಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.