17 ಶಾಸಕರಿಂದ ಸಂವಿಧಾನ ದುರುಪಯೋಗ
Team Udayavani, Nov 28, 2019, 3:30 PM IST
ಹಿರೇಕೆರೂರ: ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಅವರ ಪರ ಕ್ಷೇತ್ರದಲ್ಲಿ ಕಾರ್ಯಕರ್ತರ ಉತ್ಸಾಹ ಅಧಿಕವಾಗಿದೆ. ಜನತೆ ಗಟ್ಟಿಯಾಗಿ ನಿಂತು ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ ಮನವಿ ಮಾಡಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಪರ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರಟ್ಟಿಹಳ್ಳಿ ತಾಲೂಕು ರಚನೆ ಮಾಡಿದ್ದಾರೆ. ಕ್ಷೇತ್ರಕ್ಕೆ ಶುದ್ಧಕುಡಿಯುವ ನೀರಿನ ಘಟಕಗಳು, ರಸ್ತೆಗಳು ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಇಷ್ಟೆಲ್ಲ ಕೊಟ್ಟರೂ ಬಿ.ಸಿ. ಪಾಟೀಲ ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಕ್ಷೇತ್ರದ ಜನತೆಯನ್ನು ಕೇಳದೇ ಪಕ್ಷ ಬಿಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ನಿಮಗೇನು ಕಡಿಮೆ ಮಾಡಿತ್ತು ಎಂದು ಬಿ.ಸಿ.ಪಾಟೀಲರನ್ನು ಪ್ರಶ್ನಿಸಿದರು. 17 ಜನ ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿಯವರು ಸಂವಿಧಾನ ದುರಪಯೋಗ ಮಾಡಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಅಗೌರವ ತೊರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ಅವರ ಪರವಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಅವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಉಪ ಚುನಾವಣೆ ಅನಿವಾರ್ಯವಾಗಿ ಬಂದಿಲ್ಲ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದರಿಂದ ಬಂದಿದೆ. ಇವರಿಗೆ ಸರಿಯಾದ ಪಾಠ ಕಲಿಸದಿದ್ದಲ್ಲಿ ಮುಂದಿನದಿನಗಳಲ್ಲಿ ರಾಜ್ಯದಲ್ಲಿ ಸ್ಥಿರವಾದ ಸುಭದ್ರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ 4 ತಿಂಗಳು ಕಳೆದಿದೆ. ನಿರಾಶ್ರಿತರು ಕಣ್ಣೀರು ಒರೆಸಲು ಸಿದ್ಧರಿಲ್ಲ. ಆದರೆ, ರಾಜೀನಾಮೆ ನೀಡಿದ ಶಾಸಕರ ಕಣ್ಣೀರು ಒರೆಸುವುದು ಮತ್ತವರ ವೈಯಕ್ತಿಕ ಆಸೆಗಳನ್ನು ಈಡೇರಿಸುವಲ್ಲಿ ಮಗ್ನರಾಗಿದ್ದಾರೆ ಎಂದು ದೂರಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಸರ್ವರನ್ನು ಸಮನಾಗಿ ಕಾಣುವ ಮತ್ತು ದೇಶದ ಐಕ್ಯತೆ, ಸಮಗ್ರತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷ. ಉಪ ಚುನಾವಣೆ ಧರ್ಮಯುದ್ಧವಾಗಿದೆ ಜನತೆಯಲ್ಲಿದ್ದು ಈ ಕಾರ್ಯ ಮಾಡುಬೇಕು ಎಂದರು.
ಇದೇ ಸಂದರ್ಭದಲ್ಲಿ ಉಪಚುನಾವಣೆ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ ರಾಜಶೇಖರ ದೂದಿಹಳ್ಳಿ, ಪಟ್ಟಣ ಪಂಚಾಯತ್ ಸದಸ್ಯರಾದ ಬಸವರಾಜ ಕಟ್ಟಿಮನಿ, ಸನಾವುಲ್ಲಾ ಮಕಾನದಾರ, ಶಂಪದಾ ಕುಪ್ಪೇಲೂರ, ಸಿದ್ದಪ್ಪ ಗುಡದಪ್ಪನವರ, ದಿಗ್ವಿಜಯ ಹತ್ತಿ, ಸಿದ್ದನಗೌಡ ಪಾಟೀಲ ಮಹೇಶ ಕೊಟ್ಟೂರ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ಡಿ.ಆರ್. ಪಾಟೀಲ, ಉಮಾಪತಿ, ಜಿ.ಎಸ್. ಪಾಟೀಲ, ಜಿ.ಎಸ್.ಗಡ್ಡದೇವರಮಠ, ಟಿ. ಈಶ್ವರ, ಎಂ.ಎಂ.ಹಿರೇಮಠ, ಜಿಪಂ ಅಧ್ಯಕ್ಷ ಎಸ್. ಕೆ. ಕರಿಯಣ್ಣನವರ, ಎಸ್.ಬಿ.ತಿಪ್ಪಣ್ಣನವರ, ಬಿ.ಎನ್. ಬಣಕಾರ, ಅಶೋಕ ಪಾಟೀಲ, ಪಿ.ಡಿ.ಬಸನಗೌಡ್ರ, ರಮೇಶ ಮಡಿವಾಳರ, ಎಚ್.ಎಸ್.ಕೊಣನವರ, ಶೇಕಣ್ಣ ಉಕ್ಕುಂದ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.