ಮಧ್ಯಾಂತರ ಚುನಾವಣೆ ಸಾಧ್ಯತೆ ಇಲ್ಲ: ಸಿ.ಟಿ.ರವಿ
Team Udayavani, Nov 28, 2019, 6:16 PM IST
ಬೆಂಗಳೂರು: ಉಪಚುನಾವಣೆ ಫಲಿತಾಂಶದ ಬಳಿಕ ಅವಕಾಶವಾದಿ ಕೂಟ ಕಟ್ಟಿಕೊಳ್ಳುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ಸುಭದ್ರವಾಗಿರಲಿದ್ದು, ಮಧ್ಯಾಂತರ ಚುನಾವಣೆ ನಡೆಯುವ ಸಾಧ್ಯತೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ನಾಯಕರ ಪರಸ್ಪರ ಆರೋಪ- ಪ್ರತ್ಯಾರೋಪ, ರಿಮೋಟ್ ಕಂಟ್ರೋಲ್ ಆಡಳಿತ, ಎಚ್.ಡಿ.ರೇವಣ್ಣ ಹಸ್ತಕ್ಷೇಪದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರಕಾರ ಪತನಗೊಂಡಿತು. ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಕಾಂಗ್ರೆಸ್‌ನವರು ತಮ್ಮನ್ನು ಗುಲಾಮರಂತೆ ನಡೆಸಿಕೊಂಡಿದ್ದು, ಅದರಿಂದ ಮುಕ್ತಿ ಸಿಕ್ಕಿದೆ ಎಂದು ಹೇಳಿದ್ದರು.
ಹಾಗಾಗಿದ್ದರೂ ಉಪಚುನಾವಣೆ ಬಳಿಕ ಮತ್ತೆ ಅವಕಾಶವಾದಿ ಕೂಟ ಕಟ್ಟಿಕೊಳ್ಳುವ ಹಗಲುಗನಸು ಕಾಣಲಾರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿನೆಮಾ ನಟರಿಗೆ ನಟನೆ ಒಂದು ವೃತ್ತಿಯಾಗಿದ್ದರೂ ಗ್ಲಿಸರಿನ್ ಇಲ್ಲದೆ ಅಳಲು ಸಾಧ್ಯವಾಗುವುದಿಲ್ಲ. ಆದರೆ ನಟ ಭಯಂಕರರಿಗೆ ಗ್ಲಿಸರಿನ್ ಇಲ್ಲದೆ ಕಣ್ಣೀರು ಬರುತ್ತದೆ. ತಮ್ಮದೇ ಪಕ್ಷದಿಂದ ಎರಡು ಬಾರಿ ಆಯ್ಕೆಯಾಗಿದ್ದ ಶಾಸಕನನ್ನು “ಬಾಂಬೆ ಕಳ್ಳ’ ಎನ್ನುತ್ತಾರೆ. ಅವರ ಪಕ್ಷದಲ್ಲಿದ್ದರೆ ಆತ ಸಂಪನ್ನ, ಪಕ್ಷ ಬಿಟ್ಟರೆ ಕಳ್ಳ. ತಮ್ಮ ಪಕ್ಷದಲ್ಲಿದ್ದರೆ ಸಚ್ಚಾರಿತ್ರ್ಯವಂತ, ಪಕ್ಷ ಬಿಟ್ಟರೆ ಪರಮ ಭ್ರಷ್ಟ ಎಂಬ ಧೋರಣೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪಕ್ಷಾಂತರಿಗಳು ಎಂದು ನಿಂದಿಸುವವರು ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದನ್ನು ಮರೆಯಬಾರದು. ಶಾಸಕರು ರಾಜೀನಾಮೆ ನೀಡಿರುವುದನ್ನು ರಾಜಕೀಯ ವ್ಯಭಿಚಾರ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ರಾಜೀನಾಮೆ ಕೊಟ್ಟು ಜನರ ಬಳಿಗೆ ಹೋಗುವುದು ರಾಜಮಾರ್ಗವಲ್ಲವೆ. ಆಡಳಿತದಲ್ಲಿರುವ ಪಕ್ಷದ ಶಾಸಕರು ರಾಜೀನಾಮೆ ನೀಡಲು ಕಾರಣ ಏನು ಎಂಬುದನ್ನು ತಣ್ತೀಭ್ರಷ್ಟ ಕಾಂಗ್ರೆಸ್, ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೂರು ಪಟ್ಟು ಶಾಸಕರು ಬರುತ್ತಿದ್ದರು!
ಕೆಟ್ಟ ಸರಕಾರವಿದ್ದು, ರಾಜೀನಾಮೆ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಅವರಿಗೆ ಹೇಳಿದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ಪಕ್ಷೇತರ ಸಹಿತ 26 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, 177 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತ ಪಡೆದಿದೆ. ಹೀಗಿರುವಾಗ ಅವರು ಅಂಥ ಸಲಹೆ ನೀಡುವುದು ಸಹಜ. ಬಿಜೆಪಿ ಏನಾದರೂ ಆಮಿಷ ಒಡ್ಡಿದ್ದರೆ ಇನ್ನೂ ಮೂರು ಪಟ್ಟು ಶಾಸಕರು ಖಾಲಿ ಮಾಡಿಕೊಂಡು ಬರುತ್ತಿದ್ದರು ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಮಹಾರಾಷ್ಟ್ರದಲ್ಲಿ ಶಿವಸೇನೆಯು ಎನ್‌ಸಿಪಿ- ಕಾಂಗ್ರೆಸ್ ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದ ಬಿಜೆಪಿಗೆ ಒಳ್ಳೆಯದೆ ಆಗಲಿದೆ. ಬಿಜೆಪಿಯದ್ದು ಮೃದು ಹಿಂದುತ್ವವಾದರೆ, ಶಿವಸೇನೆಯದ್ದು ಕಠೊರ ಹಿಂದುತ್ವ. ಇದೀಗ ಶಿವಸೇನೆಯು ಜಾತ್ಯತೀತವಾಗಿದೆ. ಈ ಕೂಟ ಎಷ್ಟು ದಿನ ಎಂದು ನೋಡೋಣ. ಮುಂದಿನ ದಿನಗಳಲ್ಲಿ ಪಾಲುದಾರಿಕೆ ಪಕ್ಷವಿಲ್ಲದೆ ಬಿಜೆಪಿಗೆ ಸಾರ್ವಭೌಮತ್ವ ಸಿಗಲಿದೆ. ಕರ್ನಾಟಕದಲ್ಲಿ ಏನಾಯಿತೋ, ಅದೇ ಆಗಲಿದೆ ಎಂದು ಸಿ.ಟಿ.ರವಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.