ಅಮೇಜಾನ್ ಪ್ರೈಮ್‌ನಲ್ಲಿ `ಗಂಟುಮೂಟೆ’ ಸಿಗುತ್ತೆ!
Team Udayavani, Nov 28, 2019, 6:56 PM IST
ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದು ಪ್ರೇಕ್ಷಕರ ಮನಗೆದ್ದಿರುವ ಚಿತ್ರ ಗಂಟುಮೂಟೆ. ಈ ಚಿತ್ರ ಸ್ಟಾರ್ ಸಿನಿಮಾಗಳಿಗೆ ಎದುರಾಗಿ ತೆರೆ ಕಾಣಲು ತಯಾರಾದಾಗಲೇ ಹೆಚ್ಚಿನ ಮಂದಿ ಅಚ್ಚರಿಗೀಡಾಗಿದ್ದರು. ಈ ನಿರ್ದೇಶಕಿಯ ಆತ್ಮವಿಶ್ವಾಸ ಮತ್ತು ಸಿನಿಮಾ ಮೇಲಿಟ್ಟಿದ್ದ ನಂಬಿಕೆಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಿನಿಮಾ ಏನೋ ಮ್ಯಾಜಿಕ್ಕು ಮಾಡುತ್ತದೆ ಅಂತ ಪ್ರೇಕ್ಷಕರೇ ಮಾತಾಡಿಕೊಂಡಿದ್ದರು. ಅದು ನಿಜವಾಗಿದೆ. ಗಂಟುಮೂಟೆಗೆ ದೊಡ್ಡ ಮಟ್ಟದಲ್ಲಿಯೇ ಗೆಲುವು ಸಿಕ್ಕಿದೆ. ಅದೇ ಖುಷಿಯಲ್ಲಿ ಈ ಸಿನಿಮಾವೀಗ ಅಮೇಜಾನ್ ಪ್ರೈಮ್‌ಗೂ ಎಂಟ್ರಿ ಕೊಟ್ಟಿದೆ!
ಅಮೇಜಾನ್ ಪ್ರೈಮ್ ಎಂಬುದು ಬೇಗನೆ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಳ್ಳಲು ಇರುವ ಪರಿಣಾಮಕಾರಿ ಅವಕಾಶ. ಆದರೆ ಅದಕ್ಕೆ ಎಂಟ್ರಿ ಕೊಡೋದೆಂದರೆ ಸಲೀಸಿನ ವಿಚಾರವಲ್ಲ. ಜನಮನ ಸೆಳೆಯುವಂಥಾ ಮೋಹಕವಾದ, ರೋಚಕವಾದ ಮತ್ತು ಹೊಸತನಗಳಿಂದ ಕೂಡಿದ ಕಥೆಯಿದ್ದರೇನೇ ಅದು ಸಾಧ್ಯವಾಗುತ್ತದೆ. ಗಂಟು ಮೂಟೆ ಕನ್ನಡ ಚಿತ್ರರಂಗದಲ್ಲಿಯೇ ಮೈಲಿಗಲ್ಲಾಗಿ ದಾಖಲಾಗಿರೋ ಚಿತ್ರ. ಈ ಹಿಂದೆ ಎಲ್ಲಿಯೂ ಕಂಡು ಕೇಳಿರದಂಥಾ ಕಥೆ ಇದರಲ್ಲಿದೆ. ನಿರೂಪಣೆ ಸೇರಿದಂತೆ ಪ್ರತಿಯೊಂದರಲ್ಲಿಯೂ ಹೊಸತನವನ್ನು ಹೊಂದಿರೋ ಈ ಚಿತ್ರದ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
ಈ ಚಿತ್ರದಲ್ಲಿ ತೇಜು ಬೆಳವಾಡಿ ಮತ್ತು ನಿಶ್ಚಿತ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಹೇಳಿ ಕೇಳಿ ನಾಯಕಿಯ ಕೇಂದ್ರದಿಂದಲೇ ಬಿಚ್ಚಿಕೊಳ್ಳುವ ಕಥೆಯನ್ನೊಳಗೊಂಡಿರುವ ಚಿತ್ರ. ಇವರಿಬ್ಬರನ್ನೂ ಕೂಡಾ ಪಳಗಿದ ನಟರಂತೆ ರೂಪಿಸಿರುವ ರೂಪಾ ರಾವ್ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅದರಲ್ಲಿಯೂ ತೇಜು ಬೆಳವಾಡಿ ಮೊದಲ ಚಿತ್ರದಲ್ಲಿಯೇ ನಟಿಸಿರೋ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೆಲ್ಲವೂ ಕೂಡಾ ಗಂಟುಮೂಟೆಯನ್ನು ಸಿನಿಮಾ ಮಂದಿರದಲ್ಲಿ ಗಟ್ಟಿಯಾಗಿ ನಿಲ್ಲಿsಸಿದ್ದವು. ಇದು ಅತ್ಯಂತ ವಿರಳ ಶೈಲಿಯ ಚಿತ್ರ. ಕುಟುಂಬ ಸಮೇತರಾಗಿ ಕೂತು ನೋಡುವಂತಿರೋ ಈ ಚಿತ್ರ ನೋಡೋದನ್ನು ಮಿಸ್ ಮಾಡಿಕೊಂಡವರು ಮರುಗದೆ ಅಮೇಜಾನ್ ಪ್ರೈಮ್‌ನಲ್ಲಿ ಕಣ್ತುಂಬಿಕೊಳ್ಳಲಡ್ಡಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.