ಪೋಲನ್‌ ಫಿಲ್ಟರ್‌ ನಿರ್ವಹಣೆ ಹೇಗೆ?

ಕಾರು ಕ್ಯಾಬಿನ್‌ ಒಳಗೆ ಶುದ್ಧ ಗಾಳಿಯ ಅಗತ್ಯ

Team Udayavani, Nov 29, 2019, 4:10 AM IST

dd-38

ಕಾರಿನ ಒಳಗೆ ಕೂತು, ಗ್ಲಾಸ್‌ ಏರಿಸಿ ಎ.ಸಿ. ಹಾಕಿದರೆ ಧೂಳನ್ನೇ ಉಸಿರಾಡಿದ ಅನುಭವ, ಕೆಲವೊಮ್ಮೆ ಕೆಟ್ಟ ವಾಸನೆ ಬೇರೆ! ಇದ್ಯಾಕೆ ಹೀಗೆ ಎಂಬ ಪ್ರಶ್ನೆ ನಿಮ್ಮದಾ ಗಿರಬಹುದು. ಇದಕ್ಕೆ ಪ್ರಮುಖ ಕಾರಣ ಪೋಲನ್‌ ಫಿಲ್ಟರ್‌ ಅಥವಾ ಕ್ಯಾಬಿನ್‌ ಏರ್‌ ಫಿಲ್ಟರ್‌.

ಕಾರಿನ ಕ್ಯಾಬಿನ್‌ ಒಳಗೆ ಶುದ್ಧಗಾಳಿಯನ್ನು ಬಿಟ್ಟು, ಹೊರ ಗಿನ ಧೂಳಿನ ಕಣಗಳನ್ನು ನಿಯಂತ್ರಿಸಿ ಫಿಲ್ಟರ್‌ ಮಾಡುತ್ತದೆ. ಫಿಲ್ಟರ್‌ ಹಾಳಾದಾಗ ಅಥವಾ ಹೆಚ್ಚು ಧೂಳು ಕೂತಾಗ ಅದು ಶುದ್ಧಗಾಳಿಯನ್ನು ಕೊಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಫಿಲ್ಟರ್‌ನ್ನು ನಿಯಮಿತವಾಗಿ ಶುಚಿಗೊಳಿಸುವುದರಿಂದ ಉತ್ತಮ ಗಾಳಿ ಕ್ಯಾಬಿನ್‌ ಒಳಗೆ ಬರುತ್ತದೆ. ಕ್ಯಾಬಿನ್‌ ಒಳಗೆ ಶುಚಿಯಾಗಿರದಿದ್ದರೆ ಚಾಲಕ, ಪ್ರಯಾಣಿಕರಿಗೆ ಅಲರ್ಜಿ, ಕೆಮ್ಮು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪೋಲನ್‌ ಫಿಲ್ಟರ್‌ ಎಲ್ಲಿದೆ?
ಕಾರಿನ ಡ್ಯಾಶ್‌ಬೋರ್ಡ್‌ ಕೆಳಭಾಗದಲ್ಲಿ (ಎಡಭಾಗದಲ್ಲಿ) ಚೌಕಾಕಾರದ ಬಾಕ್ಸ್‌ ಅನ್ನು ಪತ್ತೆ ಮಾಡಿ. ಇದರ ಒಳಭಾಗದಲ್ಲಿ ಪೋಲನ್‌ ಫಿಲ್ಟರ್‌ ಇರುತ್ತದೆ. ಇದು ಕೆಲವು ಕಾರುಗಳಲ್ಲಿ ದಪ್ಪ ಕಾಗದದಿಂದ ಮಾಡಿದ್ದು ಅಥವಾ ನೈಲಾನ್‌ ಮೆಶ್‌ನಿಂದ ಮಾಡಿದ್ದೂ ಆಗಿರಬಹುದು. ಫಿಲ್ಟರ್‌ ಬಾಕ್ಸ್‌ನ ಸೂಗಳನ್ನು ತೆಗೆದು ಈ ಫಿಲ್ಟರನ್ನು ಜಾಗ್ರತೆಯಾಗಿ ಹೊರತೆಗೆಯಿರಿ ಶುಚಿಗೊಳಿಸುವ ವಿಧಾನ ಪೋಲನ್‌ ಫಿಲ್ಟರ್‌ ತೆಗೆದು ನೀರಿ ನಲ್ಲಿ ಚೆನ್ನಾಗಿ ತೊಳೆಯಿರಿ. ಬಳಿಕ ಡೀಸೆಲ್‌, ಶ್ಯಾಂಪೂ ಹಾಕಿ ತೊಳೆಯಿರಿ. ದಪ್ಪನೆಯ ಬ್ರಷ್‌ ಇದಕ್ಕೆ ಉಪಯೋಗಿಸಬೇಡಿ. ಹಲ್ಲು ಜ್ಜುವ ಬ್ರಷ್‌ ಬಳಸಿ ಶುಚಿ ಗೊಳಿಸಬಹುದು. ಬಳಿಕ ಚೆನ್ನಾಗಿ ಒಣಗಿಸಿ. ಉತ್ತಮ ಬಟ್ಟೆಯಲ್ಲಿ ಶುಚಿಗೊಳಿಸಿ ಮೊದಲಿನಂತೆಯೇ ಮರುಸ್ಥಾಪಿಸಿ.

ಎಷ್ಟು ಅವಧಿಗೆ ಫಿಲ್ಟರ್‌ ಬದಲಾಯಿ ಸಬೇಕು?
ಪೋಲನ್‌ ಫಿಲ್ಟರ್‌ನ್ನು ನಿಯಮಿತವಾಗಿ ಬದಲಾವಣೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಕಾರು ಸರ್ವೀಸ್‌ ವೇಳೆ ಮೆಕ್ಯಾನಿಕ್‌ಗಳು ಇದನ್ನು ಗಮನಿಸುತ್ತಾರೆ. ಒಂದು ವೇಳೆ ಅವರು ಅದರ ಬಗ್ಗೆ ಗಮನ ಹರಿಸದಿದ್ದರೆ ನೀವೇ ಇದನ್ನು ನಿರ್ವಹಣೆ ಮಾಡಬಹುದು. ಕಾರಿನ ಮಾಡೆಲ್‌, ಕಂಪೆನಿಗೆ ಅನುಗುಣವಾಗಿ ಫಿಲ್ಟರ್‌ಗಳ ಮಾದರಿಗಳು ಭಿನ್ನವಾಗಿರುತ್ತವೆ. ಇವುಗಳ ಬಾಳಿಕೆ ಸುಮಾರು 30 ಸಾವಿರ ಕಿ.ಮೀ.ಗಳು. ನೀವು ಡ್ರೈವ್‌ ಮಾಡುವ ರಸ್ತೆ ಹೇಗಿದೆ? ಧೂಳಿನಿಂದ ಕೂಡಿದೆಯೇ ಎಂಬುದರ ಮೇಲೆ ಇದರ ಬಾಳಿಕೆಯೂ ನಿರ್ಧಾರವಾಗುತ್ತದೆ.

ಪೋಲನ್‌ ಫಿಲ್ಟರ್‌ ಸಮಸ್ಯೆ ಹೀಗೆ ಗುರುತಿಸಿ
ಕಡಿಮೆ ಏರ್‌ಫ್ಲೋ: ಕ್ಯಾಬಿನ್‌ನಲ್ಲಿ ಎ.ಸಿ. ಹಾಕಿದರೂ ಕಡಿಮೆ ಏರ್‌ಫ್ಲೋ ಆಗು ತ್ತಿರಬಹುದು. ಇದಕ್ಕೆ ಕಾರಣ ಪೋಲನ್‌ ಫಿಲ್ಟರ್‌ನಲ್ಲಿ ಧೂಳು ಕೂತಿರುವುದು.
ಕೆಟ್ಟ ವಾಸನೆ: ಕೆಟ್ಟ ವಾಸನೆ, ಧೂಳು ವಾಸನೆ ಹೊಡೆಯಬಹುದು. ಪೋಲನ್‌ ಫಿಲ್ಟರ್‌ ಸರಿಯಾಗಿಲ್ಲದಿದ್ದರೆ ಕ್ಯಾಬಿನ್‌ ಒಳಗೆ ಬ್ಯಾಕ್ಟೀರಿಯಾಗಳು ಹೆಚ್ಚು ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ.

ಕರ್ರರ್ರರ್ರ ಶಬ್ದ:
ಪೋಲನ್‌ ಫಿಲ್ಟರ್‌ ಹರಿದು ಹೋದ ಸಂದರ್ಭದಲ್ಲಿ ಫ‌ುಲ್‌ ಎ.ಸಿ. ಹಾಕಿಕೊಂಡಿದ್ದರೆ ಸಣ್ಣದಾಗಿ ಕರ್ರರ್ರರ್ರ ಶಬ್ದ ಕೇಳಿಸುವ ಸಾಧ್ಯವಿರುತ್ತದೆ. ಎ.ಸಿ. ಅಥವಾ ಏರ್‌ ಫ್ಲೋ ಫ್ಯಾನ್‌ ಬಂದ್‌ ಮಾಡಿದಾಗ ಈ ಶಬ್ದ ನಿಲ್ಲುತ್ತದೆ ಎಂದಾದರೆ ಅದು ಫಿಲ್ಟರ್‌ನ ಸಮಸ್ಯೆಯಾಗಿದ್ದು ಫಿಲ್ಟರ್‌ ಬಾಕ್ಸ್‌ ತೆರೆದು ನೋಡಬೇಕು.

ಫಿಲ್ಟರ್‌ ಹಾಳಾಗಿದ್ದು ಗೊತ್ತಾಗೋದು ಹೇಗೆ?
ಫಿಲ್ಟರ್‌ ಅನ್ನು ಶುಚಿಗೊಳಿಸಲು ತೆಗೆಯುವ ವೇಳೆ ಅದರ ಒಂದು ಬದಿ ಹರಿದಿರುವುದು ಅಥವಾ ಫಿಲ್ಟರ್‌ನ ಜಾಲರಿಗಳ ಮಧ್ಯೆ ಜಾಗ ಸೃಷ್ಟಿಯಾಗಿದ್ದರೆ ಫಿಲ್ಟರ್‌ ಉಪಯೋಗಕ್ಕೆ ಬಾರದು. ಇಂತಹ ಫಿಲ್ಟರ್‌ಗಳನ್ನು ಶುಚಿಗೊಳಿಸಿ ಹಾಕಿದರೂ ಪ್ರಯೋಜನಕಾರಿಯಲ್ಲ. ಹೊಸತೇ ಹಾಕುವುದು ಉತ್ತಮ.

- ಈಶ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.