ಗುತ್ತಿಗಾರು: ಅತ್ತೆ-ಸೊಸೆಗೆ ಒಂದೇ ಆಧಾರ್!
Team Udayavani, Nov 29, 2019, 5:25 AM IST
ಗುತ್ತಿಗಾರು: ದೇಶದ ಪ್ರತಿಯೊಬ್ಬರಿಗೂ ಅವರದೇ ಆದ ಆಧಾರ್ ನಂಬರ್ ಇದ್ದರೆ ಇಲ್ಲಿನ ಮಹಿಳೆಯರಿಬ್ಬರಿಗೆ ಮಾತ್ರ ಒಂದೇ ಆಧಾರ್ ನಂಬರ್ ಲಭಿಸಿದೆ!
ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳಾದ ಹೊನ್ನಮ್ಮ (70) ಮತ್ತು ಸೊಸೆ ಕೆಂಚಮ್ಮ (50) ಅವರಿಗೆ ಒಂದೇ ನಂಬರನ್ನು ಆಧಾರ್ ಪ್ರಾಧಿಕಾರ ದಯಪಾಲಿಸಿದೆ. ಇದರಿಂದಾಗಿ ಅವರಿಗೆ ಸರಕಾರದ ಯಾವುದೇ ಯೋಜನೆಗಳನ್ನೂ ಬಳಸಿಕೊಳ್ಳಲಾಗುತ್ತಿಲ್ಲ.
ಇತ್ತೀಚೆಗೆ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡಲು ಹೋದಾಗ ಇವರಿಬ್ಬರಿಗೆ ಒಂದೇ ಆಧಾರ್ ನಂಬರ್ ಸಿಕ್ಕಿರುವುದು ಅರಿವಿಗೆ ಬಂದಿದೆ. ಅನಂತರ 6 ಬಾರಿ ಆಧಾರ್ ಕೇಂದ್ರಕ್ಕೆ ತೆರಳಿ ಸರಿಪಡಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಅದೇ ನಂಬರಿನ ಹೊಸ ಆಧಾರ್ ಕಾರ್ಡ್ ಬರುತ್ತಿದೆ ವಿನಾ ತಿದ್ದುಪಡಿ ಆಗಿಲ್ಲ. ಹಲವು ಬಾರಿ ಅಲೆದಾಡಿ ಸುಸ್ತಾಗಿರುವ ಹಿರಿಯ ಜೀವಗಳು ಈ ಅವ್ಯವಸ್ಥೆಯಿಂದ ನೊಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.