ಮಂಗಳೂರು-ವಿಜಯಪುರ ರೈಲಿಗೆ ಉತ್ತಮ ಸ್ಪಂದನೆ


Team Udayavani, Nov 29, 2019, 5:56 AM IST

dd-53

ತಾತ್ಕಾಲಿಕ ನೆಲೆಯ ರೈಲು ಸೇವೆ ಆರಂಭವಾಗಿ 17 ದಿನಗಳು
ಶಾಶ್ವತಗೊಳಿಸಲು ರೈಲ್ವೇ ಇಲಾಖೆಯಿಂದ ಬೇಕಿವೆ ಪೂರಕ ಕ್ರಮಗಳು

ಮಂಗಳೂರು: ಮಂಗಳೂರು ಜಂಕ್ಷನ್‌-ವಿಜಯಪುರ ನಡುವೆ ಆರಂಭಗೊಂಡಿರುವ ತಾತ್ಕಾಲಿಕ ರೈಲಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಾಮಾನ್ಯ ದರ್ಜೆಯ ಎಲ್ಲ ಬೋಗಿಗಳು ಭರ್ತಿಯಾಗುತ್ತಿವೆ. ರೈಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಪೂರಕ ಕ್ರಮ ಕೈಗೊಳ್ಳುವ ಮೂಲಕ ಖಾಯಂಗೊಳಿಸಲು ನೈಋತ್ಯ ರೈಲ್ವೇ ಶ್ರಮಿಸಬೇಕಿದೆ.

ಕರಾವಳಿಯಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಈ ರೈಲನ್ನು ನ. 11ರಂದು ಆರಂಭಿ ಸಿದ್ದು, ಮೂರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆ ಯಲ್ಲಿ ಪ್ರತಿದಿನ ಓಡಾಡುತ್ತಿದೆ. ಜನಪ್ರಿಯಗೊಳ್ಳು ತ್ತಿರುವುದರ ಸೂಚನೆಯಾಗಿ ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬೇಡಿಕೆ ವ್ಯಕ್ತವಾಗಿದೆ.

ಸದ್ಯ ಒಂದು ಎಸಿ ಟು-ಟೈರ್‌ ಮತ್ತು ಎಸಿ ತ್ರಿ ಟೈರ್‌, ಆರು ದ್ವಿತೀಯ ದರ್ಜೆ ಸ್ಲಿàಪರ್‌ ಮತ್ತು ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿ ಅಳವಡಿಸಲಾಗಿದೆ. ಎಸಿ ಟು-ಟೈರ್‌ ಮತ್ತು ತ್ರಿ ಟೈರ್‌ಗೆ ಹೆಚ್ಚಿನ ಇಲ್ಲ. ದ್ವಿತೀಯ ದರ್ಜೆ ಸ್ಲಿಪರ್‌ಗೂ ಸಾಮಾನ್ಯ ಸ್ಪಂದನೆಯಿದ್ದು, ನಿರೀಕ್ಷಿತ ಮಟ್ಟಕ್ಕೆ ತಲುಪಿಲ್ಲ. ಆದರೆ ಸಾಮಾನ್ಯ ದರ್ಜೆಯ 4 ಬೋಗಿಗಳು ಭರ್ತಿಯಾಗುತ್ತಿವೆ.

ಕಡಿಮೆ ಯಾನ ದರ
ಮಂಗಳೂರು-ವಿಜಯಪುರ ನಡುವೆ ಎಸಿ ಟು-ಟೈರ್‌ಗೆ 2,045 ರೂ. ಎಸಿ ತ್ರಿ ಟೈರ್‌ಗೆ 1,450 ರೂ., ದ್ವಿತೀಯ ದರ್ಜೆ ಸ್ಲಿಪರ್‌ಗೆ 530 ರೂ. ಮತ್ತು ಸಾಮಾನ್ಯಕ್ಕೆ 214 ರೂ. ದರ ಇದೆ. ದ್ವಿತೀಯ ದರ್ಜೆ ಸ್ಲಿàಪರ್‌ ಮತ್ತು ಸಾಮಾನ್ಯ ದರ್ಜೆ ದರಗಳು ಬಸ್‌ ಯಾನ ದರಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ. ಬಸ್‌ ದರ 800ರಿಂದ 1,000 ರೂ. ವರೆಗೆ ಇರುತ್ತದೆ. ಪ್ರಸ್ತುತ ಈ ರೈಲಿಗೆ ಬಿ.ಸಿ. ರೋಡ್‌, ಪುತ್ತೂರು, ಸುಬ್ರಹ್ಮಣ್ಯದಲ್ಲಿ ನಿಲುಗಡೆಯೂ ಇದೆ.

ಪೂರಕ ಪ್ರಯತ್ನ ಅಗತ್ಯ
ಉತ್ತರ ಕರ್ನಾಟಕದಿಂದ ಕರಾವಳಿಗೆ ಶಿಕ್ಷಣ, ವ್ಯವಹಾರ, ಉದ್ಯೋಗ, ಚಿಕಿತ್ಸೆ ನಿಮಿತ್ತ ಗಣನೀಯ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಸಾಮಾನ್ಯ ಜನತೆ ಹೆಚ್ಚಾಗಿ ಜನರಲ್‌ ಅಥವಾ ದ್ವಿತೀಯ ದರ್ಜೆ ಸ್ಲಿàಪರ್‌ ಬೋಗಿ ಆಯ್ದುಕೊಳ್ಳುತ್ತಾರೆ. ಆದುದರಿಂದ ಜನರಲ್‌ ಬೋಗಿಗಳನ್ನು ಹೆಚ್ಚಿಸುವ ಅಗತ್ಯವಿದೆ. ತಾತ್ಕಾಲಿಕ ನೆಲೆಯ ರೈಲನ್ನು ಖಾಯಂಗೊಳಿಸಲು ರೈಲ್ವೇ ಮಂಡಳಿ ಒಪ್ಪಿಗೆ ಸೂಚಿಸಬೇಕಿದ್ದರೆ ತಾತ್ಕಾಲಿಕ ಸಂಚಾರ ಅವಧಿಯಲ್ಲಿ ಉತ್ತಮ ನಿರ್ವಹಣೆ, ಲಾಭ ದಾಖಲಾಗಿರಬೇಕು. ಆದ್ದರಿಂದ 3 ತಿಂಗಳ ಅವಧಿಯಲ್ಲಿ ಉತ್ತಮ ನಿರ್ವಹಣೆ ತೋರುವುದಕ್ಕಾಗಿ ಪ್ರಚಾರ, ಮಾಹಿತಿಯಂತಹ ಪೂರಕ ಕ್ರಮಗಳು ಅವಶ್ಯ.

ವೇಳಾಪಟ್ಟಿ ಬದಲಿಸಿ
ರೈಲು ಪ್ರಸ್ತುತ ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಇದ್ದು, ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವುದು ಅಗತ್ಯ. ಸಮಯದಲ್ಲೂ ಬದಲಾವಣೆ ಮಾಡಿದರೆ ಅನುಕೂಲ. ಪ್ರಸ್ತುತ ರೈಲು ಸಂಜೆ 6.40ಕ್ಕೆ ವಿಜಯಪುರದಿಂದ ಹೊರಟು ರಾತ್ರಿ 12.30ಕ್ಕೆ ಹುಬ್ಬಳ್ಳಿಗೆ ಬರುತ್ತದೆ. ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ. ಇದನ್ನು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವಂತೆ ಬದಲಾಯಿಸಬೇಕು. ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಹೊರಟು ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬಂದು, ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ತಲುಪುವಂತೆ ಮತ್ತು ಮಂಗಳೂರಿನಿಂದ ಸಂಜೆ 4.30ರ ಬದಲು ರಾತ್ರಿ 7 ಗಂಟೆಗೆ ಹೊರಟು ಮರುದಿನ 8 ಗಂಟೆಗೆ ಹುಬ್ಬಳ್ಳಿ ತಲುಪುವಂತೆ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎಂದು ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ತಾಂತ್ರಿಕ ಸಲಹೆಗಾರ ಅನಿಲ್‌ ಹೆಗ್ಡೆ “ಉದಯವಾಣಿ’ಗೆ ತಿಳಿಸಿದ್ದಾರೆ.

ಮಂಗಳೂರು ಜಂಕ್ಷನ್‌-ವಿಜಯಪುರ ರೈಲನ್ನು ಖಾಯಂಗೊಳಿಸುವ ಕುರಿತು 2 ತಿಂಗಳ ಅನಂತರ ನಿರ್ಧರಿಸಲಾಗುವುದು. ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಸೇವೆ ಪಡೆದು ರೈಲು ಜನಪ್ರಿಯ ಆಗುವ ಸಾಧ್ಯತೆ ಇದೆ.
– ಇ. ವಿಜಯಾ, ನೈಋತ್ಯ ರೈಲ್ವೇ ಮುಖ್ಯ ಪಿಆರ್‌ಒ

ವಿಜಯಪುರ-ಮಂಗಳೂರು ರೈಲು ಸಂಚಾರದಿಂದ ಉತ್ತರ ಕರ್ನಾಟಕ ಮತ್ತು ಕರಾವಳಿಯ ಜನರಿಗೆ ಅನುಕೂಲವಾಗಿದೆ. 4 ಜನರಲ್‌ ಬೋಗಿಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಬೋಗಿಗಳಿಗೆ ಬೇಡಿಕೆ ಇದೆ. ಹೆಚ್ಚುವರಿಯಾಗಿ 4 ಜನರಲ್‌ ಬೋಗಿ ಜೋಡಿಸುವಂತೆ ಸಚಿವ ಸುರೇಶ್‌ ಅಂಗಡಿಯವರಿಗೆ ಬೇಡಿಕೆ ಸಲ್ಲಿಸಲಾಗಿದೆ.
-ಕುತ್ಬದ್ದೀನ್‌ ಖಾಜಿ, 

ಅಧ್ಯಕ್ಷರು, ಕರ್ನಾಟಕ ರೈಲ್ವೇ ಅಭಿವೃದ್ಧಿ ಹೋರಾಟ ಸಮಿತಿ – ಹುಬ್ಬಳ್ಳಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.