ಕುಗ್ರಾಮದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಜ್ಞಾನ ದೇಗುಲಕ್ಕೆ 121ವರ್ಷ
ಶಿರ್ವ ಡೊನ್ ಬೊಸ್ಕೊ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
Team Udayavani, Nov 29, 2019, 5:07 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಶಿರ್ವ: ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಭ್ಯಾಸವು ಕೆಲವೇ ವರ್ಗದವರಿಗೆ ಮೀಸಲಾಗಿದ್ದ ಸಂದರ್ಭ ಕುಗ್ರಾಮವಾಗಿದ್ದ ಶಿರ್ವ ಪರಿಸರದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಸುಮಾರು 100 ಮಕ್ಕಳೊಂದಿಗೆ 1 ರಿಂದ 4ನೇ ತರಗತಿಗಳುಳ್ಳ ‡ ಶಿರ್ವ ಚರ್ಚ್ ಎಲಿಮೆಂಟರಿ ಶಾಲೆ ಶಿರ್ವ ಆರೋಗ್ಯ ಮಾತಾ ದೇವಾಲಯದ ಬಳಿಯ ಕಟ್ಟಡದಲ್ಲಿ 1898ರಲ್ಲಿ ಪೂಜ್ಯ ನಿಕೊಲಸ್ ಕರ್ನಿರೋ ಅವರಿಂದ ಸ್ಥಾಪನೆಗೊಂಡಿತು. ಮದ್ರಾಸು ಸರಕಾರದಿಂದ 1919ರಲ್ಲಿ 8ನೇ ತರಗತಿಯವರೆಗೆ ಖಾಯಂ ಮಾನ್ಯತೆಯನ್ನು ಪಡೆದುಕೊಂಡ ಶಾಲೆಯು 1968ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿತು. ಪವಾಡಗಳ ಫಾದರ್ ಎಂದೇ ಖ್ಯಾತರಾದ ವಿದ್ಯಾಸಂಸ್ಥೆಯ ಮಾಹಾನ್ ಶಿಲ್ಪಿ ವಂಣಮೊಣ ಹಿಲಾರಿ ಗೊನ್ಸಾಲೀÌಸ್ ಅವರ ಸಂಚಾಲಕತ್ವದಲ್ಲಿ ಮುಖ್ಯ ಶಿಕ್ಷಕ ಪೂಜ್ಯ ವಲೇರಿಯನ್ ಕುಲಾಸೋ ಅವರ ನೇತೃತ್ವದಲ್ಲಿ 1937ರಲ್ಲಿ ಹೊಸ ಕಟ್ಟಡದೊಂದಿಗೆ ಡೊನ್ ಬೊಸ್ಕೊ ಹಿ.ಪ್ರಾ. ಶಾಲೆಯಾಗಿ ನಾಮಕರಣಗೊಂಡಿತು. ಒಂದು ಕಾಲದಲ್ಲಿ 27 ಶಿಕ್ಷಕರಿದ್ದು, 24 ವಿಭಾಗಗಳೊಂದಿಗೆ 940 ವಿದ್ಯಾರ್ಥಿಗಳು ವಾಸಂಗ ಮಾಡುತ್ತಿದ್ದರು. ಇಲ್ಲಿ ಶಿಕ್ಷಕರಿಗೆ ಉದ್ಯೋಗ ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ದೊರಕುವುದು ಅಭಿಮಾನದ ಸಂಗತಿಯಾಗಿತ್ತು.
218 ವಿದ್ಯಾರ್ಥಿಗಳು
ಶಾಲೆಯಲ್ಲಿ ಪ್ರಸ್ತುತ 218 ವಿದ್ಯಾರ್ಥಿಗಳಿದ್ದು , ಇಬ್ಬರು ಅನುದಾನಿತ ಶಿಕ್ಷಕಿಯರು ಹಾಗೂ 6ಗೌರವ ಶಿಕ್ಷಕರಿದ್ದಾರೆ. ಶಾಲಾಡಳಿತ ಮಂಡಳಿ ಗೌರವ ಶಿಕ್ಷಕರನ್ನು ನೇಮಿಸಿ ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದೆ.
2000ರ ನ. 21ರಂದು ಶಾಲಾ ಶತಮಾನೋತ್ಸವದ ಆಚರಿಸಿದ ಸಂಸ್ಥೆಯು ಶತಮಾನೋತ್ಸವದ ಸವಿ ನೆನಪಿಗಾಗಿ ಹಳೆವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳ ಸಹಕಾರ ದೊಂದಿಗೆ ಶಾಲಾ ಕಟ್ಟಡ ನಿರ್ಮಿಸಿದೆ. ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಾಣ, ಕಂಪ್ಯೂಟರ್ ಕಲಿಕಾ ವ್ಯವಸ್ಥೆ, ಬಯಲು ರಂಗ ಮಂದಿರ, ಪುಸ್ತಕ ಭಂಡಾರ, ನಲ್ಲಿ ನೀರಿನ ವ್ಯವಸ್ಥೆ, ವಿಶಾಲ ಮೈದಾನದ ವ್ಯವಸ್ಥೆ, ಅಕ್ಷರ ದಾಸೋಹ, ಮಧ್ಯಾಹ್ನದ ಊಟ, ಗೌರವ ಶಿಕ್ಷಕರ ವೇತನದ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಅಳವಡಿಸಿ ಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
ಹೆಮ್ಮೆಯ ಹಳೆವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆರ್ಚ್ ಬಿಷಪ್ ಆಗಿದ್ದ ರೈಣರೆಣಡಾಣ ಆಲೋ#ನ್ಸಸ್ ಮತಾಯಸ್, ಬರೇಲಿಯಲ್ಲಿ ಬಿಷಪರಾಗಿದ್ದ ರೆಣ ಅಂತೋನಿ ಫೆರ್ನಾಂಡಿಸ್, ಅಲ್ಲಹಾಬಾದ್ ಬಿಷಪರಾಗಿದ್ದ ರೆಣ ಇಜಿಡೋರ್ ಫೆರ್ನಾಂಡಿಸ್,ಪುಣೆ ಪಾಪಾಲ್ ಸೆಮಿನರಿಯ ರೆಕ್ಟರ್ ಫಾಣ ಜೋ ಮಥಾಯಸ್ ಎಸ್.ಜೆ.,ಉಡುಪಿ ಡಯಾಸಿಸ್‌ನ ವಿಕಾರ್ ಜನರಲ್ ರೆಣಡಾಣ ಬ್ಯಾಪ್ಟಿಸ್ಟ್ ಮೆನೇಜಸ್, ಇಟಲಿಯ ರೋಮ್‌ನಲ್ಲಿದ್ದ ಫಾಣ ಜೂಲಿಯಾನ್ ಫೆರ್ನಾಂಡಿಸ್, ರಾಷ್ಟ್ರ ಪ್ರಶಸ್ತಿ ಪುರಸðತ ಶಿಕ್ಷಕ ಎಲ್. ಮೆಂಡೋನ್ಸಾ, ರಾಷ್ಟ್ರಪತಿ ಪದಕ ವಿಜೇತ ಕೇಂದ್ರ ಗೃಹ ಇಲಾಖೆಯ ಡೆಪ್ಯುಟಿ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್ ಪಾದೂರು ಕೊಲ್ಲಬೆಟ್ಟುಗುತ್ತು ಸುಂದರ ಹೆಗ್ಡೆ, ದೆಹಲಿಯ ಜೆಎನ್‌ಯುನಲ್ಲಿ ಉಪನ್ಯಾಸಕರಾಗಿದ್ದ ಪ್ರಸ್ತುತ ದೆಹಲಿಯ ಅಮೇರಿಕನ್ ರಾಯಭಾರ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿರುವ ದಡ್ಡಿನ ಹಿತ್ಲು ಎಡ್ವರ್ಡ್ ಮತಾಯಸ್ , ಡಾಣ ನೋರ್ಮನ್ ಮೆಂಡೋನ್ಸಾ ಸೇರಿದಂತೆ ಭಾರತೀಯ ಸೇನೆ, ದೇಶ ವಿದೇಶಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್,ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಹಳೆವಿದ್ಯಾರ್ಥಿಗಳನ್ನು ಸಂಸ್ಥೆ ನೀಡಿದೆ.
ಹೊರ ಜಿಲ್ಲೆಯ ಕೂಲಿ ಕಾರ್ಮಿಕರ ಮತ್ತು ವಲಸೆ ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುವ ಶಾಲೆಯಲ್ಲಿ ಆಂಗ್ಲ ಭಾಷೆಯನ್ನೂ ಬೋಧಿಸಲಾಗುತ್ತಿದೆ. ಉನ್ನತ ಹುದ್ದೆಯಲ್ಲಿರುವ ಹಳೆವಿದ್ಯಾರ್ಥಿಗಳು ಮತ್ತು ಶಾಲಾಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ..
- ಪೌಲಿನ್ ಲೋಬೋ, ಮುಖ್ಯ ಶಿಕ್ಷಕರು
ನೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ವಿದ್ಯಾ ದೇಗುಲವು ಘನತೆಯನ್ನು ಕಳೆದುಕೊಳ್ಳದೆ ಶಿರ್ವ ಪರಿಸರದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಸತ್ಪಜೆಗಳನ್ನಾಗಿ ರೂಪಿಸುವುದರ ಮೂಲಕ ಸ್ಥಾಪಕರ ಭರವಸೆ ಮತ್ತು ನಿರೀಕ್ಷೆಗಳು ಹುಸಿಯಾಗದಂತೆ ಉಳಿಸಿಕೊಂಡಿದೆ.
– ವಿಲ್ಸನ್ ರೊಡ್ರಿಗಸ್,
ಹಳೆವಿದ್ಯಾರ್ಥಿ
-ಸತೀಶ್ಚಂದ್ರ ಶೆಟ್ಟಿ, ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್ ಪ್ರೌಢಶಾಲೆಗೆ 121ರ ಸಂಭ್ರಮ
ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ
ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ
112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.