“ಸಹಕಾರಿ ಸಂಘಗಳು ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು’
Team Udayavani, Nov 29, 2019, 5:31 AM IST
ಕುಂಬಳೆ: ಸಹಕಾರಿ ಸಂಘಗಳು,ಬ್ಯಾಂಕ್‌ಗಳು ಕ್ರಿಯಾತ್ಮಕವಾಗಿ ಜನರೊಂದಿಗೆ ಇನಷ್ಟು ನಿಕಟ ಸಂಪರ್ಕ ಹೊಂದಿರಬೇಕು.ಆಡಳಿತಮಂಡಳಿ,ಸದಸ್ಯರು,ನೌಕರರು ಮತ್ತು ಗ್ರಾಹಕರು ಪರಸ್ಪರ ಧನಾತ್ಮಕವಾಗಿ ಚಿಂತಿಸಿ ಸ್ವಸಾಮರ್ಥಯದಿಂದ ಉನ್ನತ ಮೌಲ್ಯಗಳನ್ನು ಅಳವಡಿಸಿ ಪ್ರವರ್ತಿಸಿದಲ್ಲಿ ಸಹಕಾರಿ ಸಂಘಗಳಿಗೆ ಉಜ್ವಲ ಭವಿಷ್ಯವಿರುವುದಾಗಿ ಸಹಕಾರಿ ಜೋಯಿಂಟ್ ರಿಜಿಸ್ಟಾರ್ ವಿ.ಮಹಮ್ಮದ್ ನೌಷಾದ್ ಹೇಳಿದರು.
ಮಜಿಬೈಲು ಸಹಕಾರಿ ಸಂಘದ ಸಭಾಭವನದಲ್ಲಿ ಜರಗಿದ ಸಹಕಾರಿ ಸಪ್ತಾಹದ ಸೆಮಿನಾರ್‌ನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ಜನರ ಹೃದಯದಲ್ಲಿ ಭದ್ರವಾಗಿರಬೇಕು.ಮಹಿಳೆಯರು ಸಹಕಾರಿ ರಂಗಗಳಲ್ಲಿ ಸ್ವಯಂಸ್ಫೂರ್ತಿಯಿಂದ ತೊಡಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಮುಂದುವರಿಯುವ ಕಾಲ ಸನ್ನಿಹಿತವಾಗಿರುವುದಾಗಿ ಅವರು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ಮಮ್ಮುಂಞಿ ಹಾಜಿ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಸಹಕಾರಿ ರಂಗದ ನಾಯಕರಾದ ಕೆ.ಮುರಳೀಧರನ್, ಜಯಚಂದ್ರನ್, ಎಸ್.ಜೆ.ಪ್ರಸಾದ್,ಬಿ.ವಿ.ರಾಜನ್,ದಿವಾಕರ್ ಎಸ್‌ಜೆ,ಎಂ.ಸಂಜೀವ ಶೆಟ್ಟಿ,ಸುನಿಲ್ ಕುಮಾರ್ ಮತ್ತು ಶ್ರೀಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದ ಬಳಿಕ ಯುವಕರು,ಯುವತಿಯರು,ಮತ್ತು ದುರ್ಬಲ ಜನವಿಭಾಗದವರಿಗಿರುವ ಸಹಕಾರಿ ಸಂಸ್ಥೆಗಳು ಎಂಬ ವಿಚಾರದ ಕುರಿತು ವಿಚಾರಗೋಷ್ಠಿ ಜರಗಿತು. ದಿವಾಕರ್ ಎಸ್‌ಜೆ ವಿಷಯ ಮಂಡಿಸಿದರು.ಸಹಾಯಕ ರಿಜಿಸ್ಟಾರ್ ಅಬ್ದುಲ್ ಅಸೀಸ್ ಪಿ ನಿರೂಪಕರಾಗಿ ಕಾರ್ಯನಿರ್ವಹಿಸಿದರು.ಚರ್ಚೆಯಲ್ಲಿ ಸಹಕಾರಿ ಧುರೀಣರಾದ ಕುಮಾರ್,ಗೀತಾ ಸಾಮಾನಿ,ಪ್ರದೀಪ್ ಕುಮಾರ್,ವಿಠಲ ರೈ ಮತ್ತು ಜಯಶ್ರೀ ಭಾಗವಹಿಸಿದರು.
ಮಂಜೇಶ್ವರ ಅಸಿಸ್ಟೆಂಟ್ ರಿಜಿಸ್ಟಾರ್ ಸ್ವಾಗತಿಸಿದರು.ಬ್ಯಾಂಕ್ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
EVM ರದ್ದು ಆಗ್ರಹಿಸಿ ಜೋಡೋ ಮಾದರಿ ಯಾತ್ರೆ: ಎಐಸಿಸಿ ಅಧ್ಯಕ್ಷ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.