ಉಳ್ಳಾಗಡ್ಡಿ ಬೆಲೆ ಕೆಜಿಗೆ 80 ರೂ!
ಕ್ವಿಂಟಲ್‌ಗೆ 7 ಸಾವಿರ ರೂ. ಬಂಗಾರದಂತೆ ತೂಕ ಮಾಡುತ್ತಿದ್ದಾರೆ ವ್ಯಾಪಾರಸ್ಥರು
Team Udayavani, Nov 29, 2019, 12:13 PM IST
ಅನೀಲ ಬಸೂದೆ
ಯಾದಗಿರಿ: ಉಳ್ಳಾಗಡ್ಡಿ ಇಷ್ಟು ದಿನ ಮಹಿಳೆಯರಿಗೆ ಮಾತ್ರ ಕಣ್ಣೀರು ತರಿಸುತ್ತಿತ್ತು. ಈಗ ಖರೀದಿಸುವವರಿಗೂ ಕಣ್ಣೀರು ತರಿಸುವಂತಾಗಿದೆ. ನಿತ್ಯ ಅಡುಗೆಗೆ ಉಪಯೋಗಿಸಲಾಗುವ ಉಳ್ಳಾಗಡ್ಡಿ ಬೆಲೆ ಒಂದು ಕೆಜಿಗೆ ಕಿರುಕುಳ ಮಾರುಕಟ್ಟೆಯಲ್ಲಿ 80 ರೂ. ಕಳೆದ ಒಂದು ವಾರದ ಹಿಂದೆ 50 ರೂ. ಇದ್ದ ಉಳ್ಳಾಗಡ್ಡಿ ವಾರದಲ್ಲಿಯೇ 30 ರೂ. ಏರಿಕೆಯಾಗಿ ಗೃಹಿಣಿಯರಿಗೆ ಶಾಕ್ ನೀಡಿದೆ.
ಪ್ರತಿ ಮನೆಯಲ್ಲಿಯೂ ಎಲ್ಲ ಆಹಾರ ಪದಾರ್ಥಕ್ಕೆ ಉಳ್ಳಾಗಡ್ಡಿ ಬೇಕೆ ಬೇಕು. ಅಂತಹದ್ದರಲ್ಲಿ ಬೆಲೆ ಗಗನಕ್ಕೇರಿದ್ದು. ಬಳಕೆ ನಿಲ್ಲುಸುವ ಪರಿಸ್ಥಿತಿ ತಂದೊಡ್ಡಿದೆ. ತರಕಾರಿಗಳಿಗಿಂತಲೂ ಉಳ್ಳಾಗಡ್ಡಿ ಬಲು ದುಬಾರಿಯಾಗಿದ್ದು ಅಡುಗೆ ರುಚಿ ಕಳೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮುಂಗಾರಿನಲ್ಲಿ 89 ಹೆಕ್ಟೇರ್ ಉಳ್ಳಾಗಡ್ಡಿ ಬಿತ್ತನೆ ಗುರಿಯಲ್ಲಿ ರೈತರು 81 ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ. ಹಿಂಗಾರಿನಲ್ಲಿ ಈಗಷ್ಟೇ ಬಿತ್ತನೆ ಆರಂಭವಾಗುತ್ತಿದೆ. ಮಳೆಗಾಲದಲ್ಲಿ ಬೆಳೆದ ಕೆಂಪು ಉಳ್ಳಾಗಡ್ಡಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ಇದು ಹೆಚ್ಚು ದಿನ ಉಳಿಯದೇ ಬೇಗ ಕೊಳೆಯುವುದರಿಂದ ಇದನ್ನು ಖರೀದಿಸಲು ಜನ ಹಿಂಜರಿಯುತ್ತಿದ್ದು ತಾತ್ಕಾಲಿಕವಾಗಿ ಬೇಕಿರುವಷ್ಟು ಮಾತ್ರ ಖರೀದಿಸುತ್ತಿರುವುದು ಕಂಡು ಬರುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಉಳ್ಳಾಗಡ್ಡಿ ಬೆಲೆ 7 ಸಾವಿರ ರೂ. ಗಡಿಗೆ ತಲುಪಿದೆ. ಚಿಲ್ಲರೆ ಮಾರಾಟಗಾರರು ತಮ್ಮ ಲಾಭ ನೋಡಿಕೊಂಡು 80 ರೂ. ಕೆಜಿಯಂತೆ ಬಂಗಾರದಂತೆ ತೂಕ ಮಾಡುತ್ತಿದ್ದಾರೆ. ಒಂದು ಕೆಜಿ ಉಳ್ಳಾಗಡ್ಡಿ ಖರೀದಿಸಿದರೆ ಒಂದು ಕೂಡ ಹೆಚ್ಚು ನೀಡುತ್ತಿಲ್ಲ.
ಹೋಟೆಲ್‌ಗಳಲ್ಲಿ ಉಳ್ಳಾಗಡ್ಡಿ ಬಂದ್: ಸಾಮಾನ್ಯವಾಗಿ ರೆಸ್ಟೋರೆಂಟ್, ಹೋಟೆಲ್, ಧಾಬಾಗಳಲ್ಲಿ ಊಟಕ್ಕೆ ಹೋದಾಗ ಉಳ್ಳಾಗಡ್ಡಿ ಕೊಡುತ್ತಾರೆ. ಸದ್ಯ ಉಳ್ಳಾಗಡ್ಡಿ ಬೆಲೆ ಏರಿಕೆ ಬಿಸಿ ಹೋಟೆಲ್‌ಗಳಿಗೆ ತಟ್ಟಿದ್ದು, ಉಳ್ಳಾಗಡ್ಡಿ ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಹಳೆ ಉಳ್ಳಾಗಡ್ಡಿ ಸಂಗ್ರಹಿಸಿಟ್ಟು ಬೇಡಿಕೆ ಹೆಚ್ಚಾದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗ ಬಿತ್ತನೆ ಆರಂಭವಾಗಿದ್ದು, ಹೊಸ ಉಳ್ಳಾಗಡ್ಡಿ ಬರುವುದಕ್ಕೆ ಇನ್ನೂ ಕನಿಷ್ಠ ಒಂದೂವರೆ ತಿಂಗಳು ಬೇಕು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.