ಶಿಥಿಲಾವಸ್ಥೆಗೆ ಐತಿಹಾಸಿಕ ಕಮಾನು: ಆತಂಕ
ರಾಜಾ ಲಕ್ಷ್ಮಣಪ್ಪ ದೊರೆ ಆಡಳಿತದಲ್ಲಿ ಕಮಾನು ನಿರ್ಮಾಣ ಈಗಾಗಲೇ ನಾಲ್ಕು ನೆಲಸಮ
Team Udayavani, Nov 30, 2019, 12:20 PM IST
ಚೆನ್ನಕೇಶವುಲು ಗೌಡ
ಗುರುಮಠಕಲ್: ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿದ್ದು, ಜನರಿಗೆ ಆತಂಕ ಎದುರಾಗಿದೆ. ಎರಡು ಶತಮಾನಗಳ ಹಿಂದೆ ಗುರುಮಠಕಲ್ ಪಟ್ಟಣ ಆಳಿದ ರಾಜಾ ಲಕ್ಷ್ಮಣಪ್ಪ ದೊರೆ ಸೌಂದರ್ಯ ಹೆಚ್ಚಿಸಲು ಪ್ರಮುಖ ಬಡಾವಣೆಗಳಲ್ಲಿ ಕಾಮನುಗಳು ಕಟ್ಟಿಸಿದ್ದರು. ಪಟ್ಟಣದ ಗಡಿ ಮೊಹಲ್ಲಾ, ನಾರಾಯಣಪುರ, ಬಿಡಿಕೆ ಕಟ್ಟೆ ಬಡಾವಣೆಗಳಲ್ಲಿ ಒಟ್ಟು ಎಂಟು ಸುಂದರವಾದ ಕಾಮಾನುಗಳಿದ್ದವು. ಇವುಗಳಲ್ಲಿ ಈಗಾಗಲೇ 4 ಕಮಾನುಗಳು ನೆಲ ಸಮವಾಗಿವೆ. ನಾರಾಯಣಪುರ ಮತ್ತು ಗಡಿ ಮೊಹಲ್ಲಾದಲ್ಲಿರುವ ಎರಡು ಕಮಾನುಗಳು ಶಿಥಿಲಾವ್ಯವಸ್ಥೆಗೆ ತಲುಪಿವೆ.
ಎತ್ತಿನ ಗಾಣದಲ್ಲಿ ಸುಣ್ಣದ ಕಲ್ಲು, ಬೆಲ್ಲ, ಮರಳು ಮತ್ತಿತರ ಕಚ್ಛಾ ವಸ್ತು ಹಾಕಿ ಸಿದ್ಧಪಡಿಸಿದ ಗಚ್ಚು ಕಲ್ಲುಗಳನ್ನು ಬಳಸಿ ಪರ್ಷಿಯನ್ ಮಾದರಿಯಲ್ಲಿ ಕಮಾನು ನಿರ್ಮಿಸಲಾಗಿದೆ. ಕಮಾನುಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂಬಂತೆ ಕಾಣುತ್ತಿವೆ. ಹಾಗಾಗಿ ಶಿಥಿಲಾವ್ಯಸ್ಥೆಗೆ ತಲುಪಿವೆ. ಜೋರಾಗಿ ಸುರಿದ ಮಳೆಗೆ ಕಾಮಾನಿನ ಅರ್ಧ ಭಾಗ ಕುಸಿದಿದೆ. ಇನ್ನುಳಿದ ಅರ್ಧ ಭಾಗ ಬೀಳುವ ಹಂತಕ್ಕೆ ತಲುಪಿದೆ.
ಕಮಾನು ಮೂಲಕವೇ ಪ್ರತಿದಿನ ಲಘು ವಾಹನಗಳು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅಲ್ಲದೇ ಜನರು ತೆರಳುತ್ತಾರೆ. ಆದರೆ ಕಾಮಾನುಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಜೀವ ಭಯ ಉಂಟಾಗಿದೆ. ಅಲ್ಲದೆ ಪಕ್ಕದಲ್ಲೆ ಸಾವಿರಕ್ಕೂ ಹೆಚ್ಚು ಮಕ್ಕಳಿರುವ ಖಾಸಗಿ ಶಾಲೆ ಇದೆ. ವಿದ್ಯಾರ್ಥಿಗಳು ವಿಶ್ರಾಂತಿ ಸಮಯದಲ್ಲಿ ಕಮಾನು ಹತ್ತಿರ ಬರುತ್ತಾರೆ. ಶಿಥಿಲವಾದ ಕಮಾನಿನಿಂದ ಪುಡಿ, ಕಲ್ಲು ಬೀಳುತ್ತಿದೆ. ಇದು ಅಪಾಯದ ಮುನ್ಸೂಚನೆ ಆಗಿರಬಹುದು. ಈ ರಸ್ತೆ ತುಂಬಾ ಚಿಕ್ಕದಾಗಿದೆ. ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.