ಸರ್ಕಾರಿ ಸ್ವತ್ತು ಗಳ ಮೇಲೆ ಪ್ರಭಾವಿಗಳ ಕಣ್ಣು
Team Udayavani, Nov 30, 2019, 4:15 PM IST
ನೆಲಮಂಗಲ: ನಕಲಿ ದಾಖಲೆಗಳು ಸೃಷ್ಟಿಸಿ ಪಟ್ಟಣ ಪುರಸಭೆ ವ್ಯಾಪ್ತಿಯ ಸರ್ಕಾರಿ ಪಾರ್ಕ್‌ಗೆ ಸೇರಿದ 5200 ಚದರ ಅಡಿ ವಿಸ್ತೀರ್ಣದ ಜಾಗ ಕಬಳಿಸಿದ್ದ ಖದೀಮರಿಂದ ಸರ್ಕಾರಿ ಸ್ವತ್ತನ್ನು ವಶಕ್ಕೆ ಪಡೆದ ಪುರಸಭೆ ಅಧಿಕಾರಿಗಳು ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಪಟ್ಟಣದ ಕುಣಿಗಲ್ ಬೈಪಾಸ್ ಸಮೀಪದ ಕಂದಸ್ವಾಮಿ ಲೇಔಟ್ ನ ಆಸ್ತಿಯ ಸಂಖ್ಯೆ 5429ರಲ್ಲಿ ಪುರಸಭೆಗೆ ಕಾಯ್ದಿರಿಸಿದ ಉದ್ಯಾನವನ ಎಂದು ದಾಖಲಾತಿಗಳಲ್ಲಿ ನಮೂದಾಗಿದ್ದರೂ, 1993ರಲ್ಲಿ ಕಾರ್ಯದರ್ಶಿಯ ನಕಲು ಸಹಿ ಮಾಡಿ ಖಾತೆ ಸೃಷ್ಟಿಸಲಾಗಿದೆ.
ನಕಲಿ ದಾಖಲೆಯ ಮೂಲಕ ಖಾತೆ ವರ್ಗಾವಣೆ: ನಕಲಿ ದಾಖಲೆಯಿಂದ ಖಾತೆಯಾದ ನಂತರ 2002-03ರಲ್ಲಿ ಕಂದಸ್ವಾಮಿ ಲೇಔಟ್ ವ್ಯಾಪ್ತಿಯ ಸದಸ್ಯರು, ತಮ್ಮ ಹೆಸರಿಗೆ ಕ್ರಯಪತ್ರ ಪಡೆದು ಎನ್. ಮಂಗಳ ಎನ್ನುವವರಿಗೆ ಅಂದಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆದೇಶದಂತೆ ಖಾತೆ ವರ್ಗಾಯಿಸಿದ್ದಾರೆ. ಇದಕ್ಕೆಮುಖ್ಯಾಧಿಕಾರಿಗಳು ಸಹಿ ಕೂಡ ಮಾಡಿದ್ದಾರೆ. ಸರ್ಕಾರಿ ಉದ್ಯಾನವನದ ಆಸ್ತಿಗೆ ಲಪಟಾಯಿಸಲು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ಯೋಜನೆಯಂತೆ ಮೂರು ಜನರಿಗೆ ಖಾತೆ ವರ್ಗಾವಣೆ ಮಾಡುವುದರ ಜೊತೆಗೆ ಆಸ್ತಿ ತೆರಿಗೆ ಪಾವತಿಸಿದ್ದಾರೆ. ನಂತರ ಎನ್.ಎಂ ರವಿಕುಮಾರ್ ನಕಲಿ ದಾಖಲೆಯ ಅಕ್ರಮದ ಬಗ್ಗೆ ಮೇಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಾಗ ಅಕ್ರಮ ಬಯಲಾಗಿದ್ದು. ನಕಲಿದಾಖಲೆ ಸೃಷ್ಟಿಸಿ ಖಾತೆ ಮಾಡಲಾಗಿದ್ದ ಖಾತೆ ಹಾಗೂ ಆಸ್ತಿ ತೆರಿಗೆ ಪಾವತಿಸುವುದನ್ನು ರದ್ದು ಮಾಡಲಾಗಿದೆ. ಆದರೆಅಕ್ರಮ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ.
2.60ಕೋಟಿ ಆಸ್ತಿ: ಕಂದಸ್ವಾಮಿ ಲೇಔಟ್‌ನಲ್ಲಿ 1ಚ.ಅಡಿಗೆ 5000 ರೂ ಬೆಲೆ ಇದ್ದು, 5200 ಚ.ಅಡಿ ವಿಸ್ತೀರ್ಣ ಹೊಂದಿದೆ. ಒಟ್ಟು 2.60 ಕೋಟಿ ಬೆಲೆ ಬಾಳುವ ಸರಕಾರಿ ಉದ್ಯಾನವನದ ಆಸ್ತಿಯನ್ನು ಸದಸ್ಯರು, ಅಧ್ಯಕ್ಷರು, ಮುಖ್ಯಾಧಿಕಾರಿಗಳು ಸದ್ದಿಲ್ಲದೆ, ಖಾತೆಮಾಡಿಸಿಕೊಂಡು, ಸದಸ್ಯನ ಸಾಕ್ಷಿಯಲ್ಲಿ ಮೂರು ಜನರಿಗೆ ವರ್ಗಾವಣೆ ಮಾಡಿಕೊಂಡಿರುವ ಅಚ್ಚರಿ ವಿಷಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೋರಾಟ: ಕಂದಸ್ವಾಮಿ ಲೇಔಟ್‌ನ ಪಾರ್ಕ್ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಂಡು ಕ್ರಯಪತ್ರದ ಮೂಲಕ ಖಾತೆ ವರ್ಗಾವಣೆ ಮಾಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎನ್.ಎಂ ರವಿಕುಮಾರ್, ಪುರಸಭೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಲೋಕಾಯುಕ್ತ, ಎಸಿಬಿಗೆ ದೂರನೀಡಿದ್ದರು, ಇವರ ದೂರು ಆಧರಿಸಿ ದಾಖಲೆ ಪರಿಶೀಲಿಸಿದಾಗ ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದೆ. ಎನ್.ಎಂ ರವಿಕುಮಾರ್‌ರವರ ಅನೇಕ ವರ್ಷಗಳ ಹೋರಾಟಕ್ಕೆ ನ್ಯಾಯದೊರಕಿದೆ.
ತೆರವು: ಪುರಸಭೆಗೆ ಸೇರಿದ ಉದ್ಯಾನವನದ ಜಾಗವನ್ನು ಪ್ರಭಾರಿ ಮುಖ್ಯಾಧಿಕಾರಿ ಜಯಪ್ಪ ನೇತೃತ್ವದಲ್ಲಿ ವಶಕ್ಕೆ ಪಡೆದು ಜಾಗದಲ್ಲಿ ನಿರ್ಮಿಸಿದ್ದ ಗೋಡೆಗಳು, ವಾಹನಗಳ ಸರ್ವಿಸ್ ಗ್ಯಾರೇಜ್ ಜಾಗವನ್ನು ತೆರವುಗೊಳಿಸಿ ಕಲ್ಲುಕಂಬಗಳನ್ನು ಹಾಕಲಾಗಿದೆ. ಪಾರ್ಕ್‌ಜಾಗದಲ್ಲಿ ಗಿಡಗಳನ್ನು ಹಾಕುವ ಜೊತೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಮಾಡಿ ಪುರಸಭೆಯಿಂದ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಭಾವಿಗಳ ಕೆಂಗಣ್ಣು: ಪುರಸಭೆ ವ್ಯಾಪ್ತಿಯಲ್ಲಿನ ಸರ್ಕಾರಿ ಸ್ವತ್ತುಗಳ ಮೇಲೆ ಪ್ರಭಾವಿಗಳ ಕೆಂಗಣ್ಣಿದ್ದು, ಕೆಲವು ಅಧಿಕಾರಿಗಳ ಶಾಮೀಲಿನ ಮೂಲಕ ಸರ್ಕಾರಿ ಜಾಗಗಳನ್ನು ಮಾರಾಟ ಮಾಡುವ ಹಂತಕ್ಕೆ ಬಂದಿದ್ದಾರೆ.ಪಾರ್ಕ್ ಜಾಗಗಳು ಪ್ರಭಾವಿಗಳ ಪಾಲಾಗಿವೆ. ಈಗಲಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪುರಸಭೆ ಕಚೇರಿಯನ್ನು ಮಾರಾಟ ಮಾಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಅಕ್ರೋಶ ವ್ಯಕ್ತಪಡಿಸಿದರು.
ಪ್ರಭಾರ ಪುರಸಭೆ ಮುಖ್ಯಾಧಿಕಾರಿ ಜಯಪ್ಪ, ಇಂಜಿನೀಯರ್ ರವಿ, ಆರೋಗ್ಯಾಧಿಕಾರಿ ಬಸವರಾಜು, ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ಹಾಗೂ ಪುರಸಭೆ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.