ಗಡಿ ಗ್ರಾಮ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು


Team Udayavani, Nov 30, 2019, 4:40 PM IST

kolar-tdy-2

ಬೇತಮಂಗಲ: ಹೋಬಳಿಯ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ ಬಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಡಾಂಬರು ಕಾಣದ ಗಡಿ ಗ್ರಾಮಗಳ ರಸ್ತೆಯಲ್ಲೇ ನಿತ್ಯ ನರಕಯಾತನೆ ಪಡುತ್ತಾ, ಓಡಾಡುವ ಸ್ಥಿತಿ ವಾಹನ ಸವಾರರದ್ದಾಗಿದೆ. ಕ್ಯಾಸಂಬಳ್ಳಿ ಹೋಬಳಿಯ ಮೋಕತಪಲ್ಲಿ-ತೊಂಗಲ್‌ ಕುಪ್ಪ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಿ ದಶಕಗಳಲೇ ಕಳೆಯುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ರಸ್ತೆಗಳಿಗೆ ಗ್ರಹಣಹಿಡಿದಂತಾಗಿದೆ.

ರಸ್ತೆ ಉದ್ದಕ್ಕೂ ಗುಂಡಿಗಳು: ಗೊಲ್ಲಗುರುವೇನಹಳ್ಳಿಯವರೆಗೂ ರಸ್ತೆಗೆ ಡಾಂಬರೀಕರಣಗೊಳಿಸಿದ್ದು, ಮೋತಕಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆ ತಿರುವಿನಿಂದ ತೋಗಲ್‌ ಕುಪ್ಪ ಗ್ರಾಮದವರೆಗೂ 5 ಕಿ.ಮೀ. ಇದೆ. ಇಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಂಬರೂ ಕಿತ್ತು ಹೋಗಿ ಜೆಲ್ಲಿಕಲ್ಲು, ಮಣ್ಣು ಮೇಲೆ ಬಂದಿವೆ. ಈ ಜೆಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನಗಳು ಓಡಾಡಿದ್ರೆ ಆಯಾತಪ್ಪಿ ಬೀಳುವುದು ಗ್ಯಾರಂಟಿ. ಕೆಲವೊಮ್ಮೆವಾಹನದ ಚಕ್ರಗಳಿಂದ ಸಿಡಿದ ಕಲ್ಲು ಪಾದಚಾರಿಗಳಿಗೆ ತಲೆಗೆ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಇದರಿಂದ ಜನ ರಸ್ತೆಯಲ್ಲಿ ವಾಹನಗಳು ಬಂದರೆ ಮಾರು ದೂರ ಓಡುತ್ತಾರೆ.

ಬಸ್‌ ಸೌಕರ್ಯವೂ ಇಲ್ಲ: ಈ ಆಂಧ್ರಗಡಿಗೆ ಹೊಂದಿಕೊಂಡಿರುವ ಗ್ರಾಮಗಳಿಗೆ ಸಮರ್ಪಕ ಬಸ್‌ ಸೌಕರ್ಯವೂ ಇಲ್ಲ, ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಒಮ್ಮೆ ಬರುತ್ತವೆ ಎಂದು ಗ್ರಾಮದ ಸುರೇಶ್‌ ಹೇಳುತ್ತಾರೆ. ರಸ್ತೆಯಲ್ಲಂತೂ ಮೊಳಕಾಲುದದ್ದ ಗುಂಡಿಗಳು, ಕಿತ್ತು ಹೋದ ಡಾಂಬರೂ, ಜೆಲ್ಲಿ ಮಣ್ಣುನಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು, ಆಟೋಗಳು, ಪಾದಚಾರಿಗಳು ನಿತ್ಯ ನರಕಯಾತನೆ ಪಡುತ್ತಿದ್ದು, ಶಾಪ ಹಾಕುತ್ತಾ ಪ್ರಯಾಣಿಸುವಂತಾಗಿದೆ.

ರಸ್ತೆಯಲ್ಲೇ ಡಿಲಿವರಿ: ಈ ಹದಗೆಟ್ಟ ರಸ್ತೆಯಲ್ಲಿ ಗರ್ಭಿಣಿಯರನ್ನು ಆಸ್ಪತ್ರೆ ಕರೆದೊಯ್ದರೆ ಮಾರ್ಗ ಮಧ್ಯದಲ್ಲೇ ಡಿಲಿವರಿ ಆಗುತ್ತದೆ. ಅನಾರೋಗ್ಯ ಪೀಡಿತರನ್ನು ಈ ರಸ್ತೆಯಲ್ಲಿ ತುರ್ತಾಗಿ ಸಾಗಿಸಲು ಮುಂದಾದ್ರೆ ಅವರು ಇಹಲೋಕ ತ್ಯಜಿಸುತ್ತಾರೆ. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ಈ 5 ಕಿ.ಮೀ. ಪ್ರಯಾಣಕ್ಕೆ ಅರ್ಧಗಂಟೆ ಬೇಕು.

ಕೃಷಿ ಉತ್ಪನ್ನ ಸಾಗಿಸಲು ಕಷ್ಟ: ಈ ಭಾಗದಲ್ಲಿ ಹೆಚ್ಚಾಗಿ ರೈತರಿದ್ದು, ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆಸಾಗಿಸಲು ಸಮರ್ಪಕ ರಸ್ತೆಗಳಿಲ್ಲ. ಇದರಿಂದ ರಾಜ್ಯದ ಮಾರುಕಟ್ಟೆಗೆ ಕಷ್ಟಪಟ್ಟು ಬೆಳೆದ ಉತ್ಪನ್ನಗಳನ್ನು ಸಾಗಿಸಲು ಸಮಸ್ಯೆಯಾಗಿದೆ. ಪಕ್ಕದ ಆಂಧ್ರಕ್ಕೆ ಮಾರುಕಟ್ಟೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಬಸವರಾಜು ತಮ್ಮ ಅಳಲು ತೋಡಿಕೊಂಡರು.

ಸಂಬಂಧಿಕರು ಬರಲ್ಲ: ಈ ಅಸಮರ್ಪಕ ರಸ್ತೆಗಳಲ್ಲಿ ಆಟೋಗಳು ಸಂಚರಿಸಲು ಹಿಂದೇಟು ಹಾಕುತ್ತವೆ. ಆದ್ದರಿಂದ ಈ ಭಾಗದ ಜನ ಸ್ವಂತ ವಾಹನ ಹೊಂದುವುದು ಅನಿವಾರ್ಯವಾಗಿದೆ. ಒಂದು ಕಡೆ ಬಸ್‌ ಸೌಲಭ್ಯದ ಕೊರತೆ, ಮತ್ತೂಂದು ಕಡೆ ಆಟೋಗಳ ಸಂಚಾರವೂ ಇಲ್ಲ. ಇದರಿಂದ ಪರ ಊರಿನವರು, ಸಂಬಂಧಿಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇನ್ನು ಆಂಧ್ರಗಡಿಗೆ ಹೊಂದಿಕೊಂಡಿರುವ ಸೀತಂಪಲ್ಲಿ-ಪಂತನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ತೀರಾ ಹದಗೆಟ್ಟಿದೆ. ಈ ಕೂಡಲೇ ಶಾಸಕರು, ಅಧಿಕಾರಿಗಳು ಗಡಿ ಗ್ರಾಮಗಳ ಅಭಿವೃದ್ಧಿಗೆ ಪಣತೋಡಬೇಕಿದೆ, ನಮಗೆ ಮೂಲ ಸೌಕರ್ಯ ಒದಗಿಸಲು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬ ದೂರು ಗ್ರಾಮಸ್ಥರದ್ದಾಗಿದೆ.

ನಬಾರ್ಡ್‌ ನೆರವು: ಮೋತಕಲಪಲ್ಲು-ತೊಂಗಲ್‌ ಕುಪ್ಪ ಮತ್ತು ಸೀತಂಪಲ್ಲಿ-ಪಂತನಹಳ್ಳಿ ಗ್ರಾಮಗಳ ರಸ್ತೆಗಳು ಜಿಪಂ ವ್ಯಾಪ್ತಿಗೆ ಸಂಬಂಧಿಸಿದ್ದು, ದಶಕಗಳಿಂದ ಡಾಂಬರು ಹಾಕಿಲ್ಲ. ಗುಂಡಿಗಳು ಬಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ನಬಾರ್ಡ್‌ ಯೋಜನೆಯ ಮೂಲಕ ಲೊಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಪಡಿಸಲು ಶಾಸಕಿ ಎಂ.ರೂಪಕಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಪ್ರಸ್ತಾವನೆ ಮೂಲೆ ಸೇರಿದ್ದು, ಈ ಕೂಡಲೇ ಶಾಸಕರು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಕೂಡಲೇ ಟೆಂಡರ್‌ ಕರೆಯಬೇಕೆಂದು ಗಡಿ ಗ್ರಾಮಗಳ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

-ಆರ್‌.ಪುರುಷೋತ್ತಮರೆಡ್ಡಿ

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.