ನಾನ್ಸೆನ್ಸ್ ಏಜಿನ ಸುತ್ತಾ ಫ್ಯಾಮಿಲಿ ಕಥನ!
Team Udayavani, Nov 1, 2019, 12:00 AM IST
19 ಏಜ್ ಈಸ್ ನಾನ್ಸೆನ್ಸ್ ಎಂಬ ಶೀರ್ಷಿಕೆ ಕೇಳುತ್ತಿದ್ದಂತೆಯೇ ಇದೊಂದು ಯೂಥ್‌ಫುಲ್ ಕಥೆಯನ್ನೊಳಗೊಂಡಿರುವ ಚಿತ್ರವೆಂಬ ಅನಿಸಿಕೆ ಯಾರಲ್ಲಿಯಾದರೂ ಮೂಡಿಕೊಳ್ಳುತ್ತದೆ. ಆದರೆ ಅದು ಅರ್ಧ ಸತ್ಯ ಎಂಬ ವಿಚಾರವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಸಾಬೀತುಗೊಳಿಸಿದೆ. ಇದು ಹತ್ತೊಂಬತ್ತರ ಹರೆಯದ ಸುತ್ತ ಮೈ ಚಾಚಿಕೊಂಡಿರುವ ಸಮೃದ್ಧವಾದ ಫ್ಯಾಮಿಲಿ ಕಥಾನಕದ ಚಿತ್ರ ಎಂಬ ವಿಚಾರವೀಗ ಎಲ್ಲ ಪ್ರೇಕ್ಷಕರಿಗೂ ಮನದಟ್ಟಾಗಿದೆ. ಇಂಥಾ ಸಕಾರಾತ್ಮಕ ವಾತಾವರಣದೊಂದಿಗೆ ಈ ಚಿತ್ರ ಇದೇ ಡಿಸೆಂಬರ್ 6ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಲೋಕೇಶ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಮನುಷ್ ಎಂಬ ಹತ್ತೊಂಬತ್ತರ ಹರೆಯದ ಹುಡುಗನೇ ಇಲ್ಲಿ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಮಧುಮಿತಾ ಹಾಗೂ ಲಕ್ಷಿö್ಮ ಮಂಡ್ಯ ನಾಯಕಿಯರಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಹತ್ತೊಂಬತ್ತರ ವಯಸ್ಸಿನಲ್ಲಿ, ಆ ಹುಮ್ಮಸ್ಸಿನ ಕಾರಣಗಳಿಂದ ಯಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳೋದೇ ಜಾಸ್ತಿ ಎಂಬ ಮಾತಿದೆ. ಆದ್ದರಿಂದಲೇ ಈ ವಯಸ್ಸನ್ನು ನಾನ್ಸೆನ್ಸ್ ಅಂತ ಅನುಭವಿಗಳು ಹೇಳುತ್ತಾರೆ. ಇಂಥಾ ನಾನ್ಸೆನ್ಸ್ ನಿರ್ಧಾರಗಳು ಕೇವಲ ಆ ಏಜಿನವರಿಗೆ ಮಾತ್ರವೇ ಸೀಮಿತವಾಗಿರೋದಿಲ್ಲ. ಆ ಕಾರಣದಿಂದಲೇ ಇಲ್ಲಿನ ಕಥೆ ಫ್ಯಾಮಿಲಿ ಅಂಶಗಳನ್ನೆ ಪ್ಗರಧಾನವಾಗಿಟ್ಟುಕೊಂಡಿದೆ. ಕೌಟುಂಬಿಕ ಚಿತ್ರವಾಗಿಯೂ ಹೊರ ಹೊಮ್ಮುವಂತಿದೆ.
ಹೀಗೆ ಹತ್ತೊಂಬತ್ತರ ಹುಡುಗನ ಏಳು ಬೀಳುಗಳು ಮತ್ತು ನಿರ್ಧಾರಗಳು, ಪ್ರೀತಿ ಪ್ರೇಮ, ದ್ವೇಷಗಳೆಲ್ಲವೂ ಫ್ಯಾಮಿಲೆ ಕಥನದ ಹಿನ್ನೆಲೆಯಲ್ಲಿಯೇ ತೆರೆದುಕೊಳ್ಳುತ್ತವೆ. ಇದರಲ್ಲಿ ಅನುಭವಿ ನಟರೂ ಕೂಡಾ ವಿಶೇಷವಾದ ಪಾತ್ರಗಳ ಮೂಲಕ ಹತ್ತೊಂಬತ್ತರ ಹರೆಯದ ಆವೇಗಕ್ಕೆ ಸಾಥ್ ನೀಡಿದ್ದಾರೆ. ಸಾಹಸ ಸನ್ನಿವೇಶಗಳೂ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆಯೇ ಈ ಚಿತ್ರವನ್ನು ಕಟ್ಟಿ ಕೊಡಲಾಗಿದೆ ಎಂಬುದು ಚಿತ್ರ ತಂಡದ ಅಭಿಪ್ರಾಯ. ಈ ಎಲ್ಲ ಅಂಶಗಳೊಂದಿಗೆ ಅತ್ಯಂತ ಅಪರೂಪದ ಚಹರೆ ಹೊಂದಿರೋ ಕಥೆಯನ್ನಿಲ್ಲಿ ಹೇಳಲಾಗಿದೆ. ಟ್ರೇಲರ್‌ಗೆ ಸಿಕ್ಕಿರೋ ಪ್ರತಿಕ್ರಿಯೆಗಳೇ ಈ ಸಿನಿಮಾಗೆ ಭರಪೂರ ಗೆಲುವು ದಕ್ಕೋದು ಗ್ಯಾರೆಂಟಿ ಎಂಬ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.