ಜ. 1ರಿಂದ ಸರಕಾರಿ ಕಚೇರಿಗಳೆಲ್ಲ “ಪೇಪರ್‌ಲೆಸ್’
Team Udayavani, Dec 1, 2019, 5:32 AM IST
ಮಂಗಳೂರು: ಕರಾವಳಿಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಾರ್ವಜನಿಕರು ಕಾಗದರಹಿತವಾಗಿ ಸೇವೆ ಪಡೆದುಕೊಳ್ಳಬಹುದು; ಯಾಕೆಂದರೆ 2020ರ ಜ. 1ರಿಂದ ದಕ್ಷಿಣ ಕನ್ನಡ, ಉಡುಪಿಯ ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳಲ್ಲಿ ಕಡತಗಳನ್ನು ಇ-ಕಚೇರಿ ತಂತ್ರಾಂಶದಲ್ಲಿಯೇ ತೆರೆದು ನಿರ್ವಹಿಸಲು ಸರಕಾರ ಸೂಚಿಸಿದೆ.
ಪರಿಸರ ಸಂರಕ್ಷಣೆ, ಪಾರದರ್ಶಕತೆ ಹಾಗೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಿನ್ನೆಲೆಯಲ್ಲಿ ಸರಕಾರಿ ಇಲಾಖೆಗಳನ್ನು ಕಾಗದ ರಹಿತ ಇಲಾಖೆಯನ್ನಾಗಿಸಲು ರಾಜ್ಯ ಸರಕಾರ ವರ್ಷದ ಹಿಂದೆಯೇ ನಿರ್ದೇಶಿಸಿತ್ತು. ಕೆಲವು ಇಲಾಖೆಗಳಲ್ಲಿ ಮಾತ್ರ ಭಾಗಶಃ ಅನುಷ್ಠಾನವಾಗಿದ್ದರೆ, ಕೆಲವು ಕಡೆ ನಿಧಾನವಾಗಿತ್ತು. ಇದೀಗ ಕೊನೆಯದಾಗಿ ಸೂಚನೆ ನೀಡಿರುವ ಸರಕಾರ ಜ. 1ರಿಂದ ಜಿಲ್ಲಾ ಮಟ್ಟದ ಸರಕಾರಿ ಕಚೇರಿಯನ್ನು ಕಾಗದರಹಿತ ಮಾಡಲೇಬೇಕು ಎಂದಿದೆ.
ದ.ಕ. ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಕಚೇರಿ ಬಹುತೇಕ ಪೇಪರ್‌ಲೆಸ್ ಆಗಿವೆ. ಡಿಜಿಟಲ್ ಸಹಿ ಪ್ರಕ್ರಿಯೆ ಅನುಷ್ಠಾನ ಹಂತದಲ್ಲಿದೆ. ಉಡುಪಿಯಲ್ಲಿಯೂ ಇದೇ ರೀತಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿ.ಪಂ. ಕಚೇರಿ ಬಹುತೇಕ ಪೇಪರ್‌ಲೆಸ್ ಆಗಿದ್ದು, ಪೂರ್ಣ ಅನುಷ್ಠಾನ ಬಾಕಿಯಿದೆ. ಉಳಿದಂತೆ ಜಿಲ್ಲಾ ಮಟ್ಟದ ಆಹಾರ ಇಲಾಖೆ, ಮುಜರಾಯಿ ಇಲಾಖೆ, ಚುನಾವಣಾ ಇಲಾಖೆ ಪೇಪರ್‌ಲೆಸ್ ಆಗಿವೆ. ಬೆಳ್ತಂಗಡಿ ತಾ.ಪಂ. ಪೇಪರ್‌ಲೆಸ್ ಆಗಿದ್ದು, ಉಳಿದ ಎರಡೂ ಜಿಲ್ಲೆಗಳ ತಾ.ಪಂ.ಕಚೇರಿಗಳು ಆ ಹಾದಿಯಲ್ಲಿವೆ.
ಅಧಿಕಾರಿ, ಸಿಬಂದಿಗೆ ತರಬೇತಿ
ಬಾಕಿಯಾಗಿರುವ ಎಲ್ಲ ಸರಕಾರಿ ಇಲಾಖೆಗಳಲ್ಲಿ ಇ-ಕಚೇರಿ ವ್ಯವಸ್ಥೆ ಅನುಷ್ಠಾನಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಇ-ಕಚೇರಿ ಅನುಷ್ಠಾನ ಸಮಿತಿ ನಿರ್ದೇಶನ ನೀಡಿದೆ. ಆದರೆ, ಇಲಾಖೆಯಲ್ಲಿ ಸಿಬಂದಿ ಕೊರತೆ, ಕಾರ್ಯದ ಒತ್ತಡದ ನೆಪದಲ್ಲಿ ಅನುಷ್ಠಾನ ಆಗಿಲ್ಲ. ಈ ಮಧ್ಯೆ ಈಗಾಗಲೇ ಅನುಷ್ಠಾನವಾದ ಜಿಲ್ಲಾಧಿಕಾರಿ ಕಚೇರಿ/ಜಿ.ಪಂ. ಕಚೇರಿಯಲ್ಲಿ ಕಾಗದ ರಹಿತವಾಗಿ ಇಲಾಖಾ ವ್ಯವಹಾರ ನಡೆಯುತ್ತಿದ್ದರೂ ಉನ್ನತಾಧಿಕಾರಿಗಳಿಗೆ ಹಾಗೂ ಇಲಾಖೆಯ ಸಚಿವರಿಗೆ, ಇತರ ಅಧಿಕಾರಿಗಳಿಗೆ ಕಾಗದ ರೂಪದಲ್ಲಿಯೇ ಕಡತ ನೀಡುವ ಪರಿಸ್ಥಿತಿ ಇರುವುದರಿಂದ ಅನುಷ್ಠಾನ ಪೂರ್ಣ ಮಟ್ಟದಲ್ಲಿ ಆಗಲೇ ಇಲ್ಲ. ಇದೀಗ ಪ್ರತೀ ಜಿಲ್ಲೆಯ ತರಬೇತಿ ಕೇಂದ್ರಗಳ ಪ್ರಾಂಶುಪಾಲರ ಸಹಕಾರದೊಂದಿಗೆ ವಾರಕ್ಕೆ ಕನಿಷ್ಠ 1 ದಿನದ ಅವಧಿಯಲ್ಲಿ ಎಲ್ಲ ಅಧಿಕಾರಿ-ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ.
ಮೊಬೈಲ್‌ನಲ್ಲೇ ಅಪ್‌ಡೇಟ್!
ಎಲ್ಲ ಇಲಾಖೆಗಳಲ್ಲಿ ಪೂರ್ಣ ಮಟ್ಟದಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೆ ಬಂದರೆ ಸಾರ್ವಜನಿಕರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಕೊಟ್ಟಿರುವ ಅರ್ಜಿ ಯಾವ ಹಂತದಲ್ಲಿದೆ ಎಂದು ಮೊಬೈಲ್/ಆನ್‌ಲೈನ್ ಮೂಲಕವೇ ಪರಿಶೀಲಿಸಬಹುದು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ 1695 ಹಾಗೂ ಜಿ.ಪಂ.ನಲ್ಲಿ 759 ಅರ್ಜಿಗಳು ಇ-ಕಚೇರಿ ಮೂಲಕ ಸ್ವೀಕೃತಿಯಾಗಿವೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 1,895 ಅರ್ಜಿ ಹಾಗೂ ಜಿ.ಪಂ.ನಲ್ಲಿ 412 ಅರ್ಜಿಗಳು ಸ್ವೀಕೃತಗೊಂಡಿವೆ. ಇದು ಇತ್ತೀಚಿನ 15 ದಿನಗಳ ಲೆಕ್ಕಾಚಾರ.
ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಹಾಗೂ ಇತರ ಇಲಾಖೆಗಳಲ್ಲಿ ಈಗಾಗಲೇ ಪೇಪರ್‌ಲೆಸ್ ಅನುಷ್ಠಾನ ಜಾರಿಯಲ್ಲಿದೆ. ಜನವರಿ 1ರಿಂದ ಎಲ್ಲ ಜಿಲ್ಲಾ ಮಟ್ಟದ ಸರಕಾರಿ ಕಚೇರಿಯಲ್ಲಿ ಪೂರ್ಣಮಟ್ಟದಲ್ಲಿ ಅನುಷ್ಠಾನಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಅಧಿಕಾರಿ- ಸಿಬಂದಿ ತರಬೇತಿ ಕೂಡ ಪಡೆಯುತ್ತಿದ್ದಾರೆ.
– ಸಿಂಧೂ ಬಿ. ರೂಪೇಶ್,
ಜಿ. ಜಗದೀಶ್
ದ.ಕ., ಉಡುಪಿ ಜಿಲ್ಲಾಧಿಕಾರಿಗಳು
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.