ಚೀನ ಆರ್ಸಿಇಪಿ ಕನಸಿಗೆ ಜಪಾನ್ ಬರೆ
Team Udayavani, Dec 1, 2019, 5:46 AM IST
ಹೊಸದಿಲ್ಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ)ಕ್ಕೆ ಭಾರತ ಸಹಿ ಹಾಕದಿದ್ದರೆ ತಾನೂ ಸಹಿ ಹಾಕುವುದಿಲ್ಲ ಎಂದು ಜಪಾನ್ ಸ್ಪಷ್ಟವಾಗಿ ಹೇಳಿದೆ.
ಆರ್ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕದಿದ್ದರೂ ಪರವಾಗಿಲ್ಲ, ಉಳಿದ 15 ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸಿ ಅಂಕಿತ ಹಾಕಿಸಿಕೊಳ್ಳಲು ಪ್ರಯತ್ನಿ ಸುತ್ತಿರುವ ಚೀನಕ್ಕೆ ಇದು ಅತ್ಯಂತ ದೊಡ್ಡ ಹೊಡೆತ. ಅಲ್ಲದೆ, ಆರ್ಸಿಇಪಿ ಹೆಸರಿನಲ್ಲಿ ಏಷ್ಯಾ ಮಾರುಕಟ್ಟೆ ಹಾಗೂ ಪಾಶ್ಚಾತ್ಯ ಮಾರುಕಟ್ಟೆಗಳಲ್ಲಿ ತನ್ನ ಆಧಿಪತ್ಯ ಸಾಧಿ ಸುವ ಕನಸು ಕಾಣುತ್ತಿರುವ ಚೀನಕ್ಕೆ ಹಿನ್ನಡೆಯಾದಂತಾಗಿದೆ.
ಜಪಾನ್ನ ನಿರ್ಧಾರ ಪ್ರಕಟಿಸಿರುವ ಅಲ್ಲಿನ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸಹಾಯಕ ಸಚಿವ ಹಿಡೆಕಿ ಮಕಿಹರ, ಚೀನ ಬೆಂಬಲಿತ ಆರ್ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಜಪಾನ್ ಇನ್ನೂ ನಿರ್ಧರಿಸಿಲ್ಲ. ಭಾರತವನ್ನು ಬದಿಗಿಟ್ಟು ನಾವು ಒಪ್ಪಂದಕ್ಕೆ ಸಹಿ ಹಾಕಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಚೀನಕ್ಕೆ ಕಸಿವಿಸಿ!
ಭಾರತ ಹಿಂದೆ ಸರಿದ ಕೂಡಲೇ ಭಾರತಕ್ಕೆ ಟಾಂಗ್ ನೀಡಿದ್ದ ಚೀನವು ಭಾರತ ತನ್ನ ನಿಲುವನ್ನು ಬದಲಿಸಿ ಯಾವಾಗ ಬೇಕಾದರೂ ಆರ್ಇಸಿಇಪಿಗೆ ಮರಳಬಹುದು. ಆದರೆ ಉಳಿದ 15 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕುವ ಕಡೆಗೆ ಮುಂದಡಿ ಇಡಲಿವೆ ಎಂದಿತ್ತು. ಈಗ ಜಪಾನ್ ಕೂಡ ಭಾರತವನ್ನು ಬಿಟ್ಟು ಆರ್ಸಿಇಪಿಗೆ ಸಹಿ ಹಾಕಲ್ಲ ಎಂದಿರುವುದು ಏಷ್ಯಾ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಆರ್ಸಿಇಪಿ
ಹೆಸರಿನ ಮೂಲಕ ತನ್ನ ಆಧಿಪತ್ಯ ಸ್ಥಾಪಿಸುವ ಕನಸು ಕಾಣುತ್ತಿದ್ದ ಚೀನಕ್ಕೆ ಮುಖಭಂಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.