ಫಾಸ್ಟಾಗ್ ಗಡಿಬಿಡಿಗೆ 15 ದಿನ ಗಡುವು
Team Udayavani, Dec 1, 2019, 9:20 AM IST
ಬೆಂಗಳೂರು: ಫಾಸ್ಟಾಗ್ ಕಡ್ಡಾಯ ಜಾರಿ ದಿನಾಂಕ ವನ್ನು ಡಿ.15ರವರೆಗೆ ವಿಸ್ತರಣೆ ಮಾಡಿರುವುದರಿಂದ ವಾಹನ ಮಾಲೀಕರು ಕೊಂಚ ನಿರಾಳರಾಗಿದ್ದಾರೆ. ಡಿ.1ರಿಂದಲೇ ಫಾಸ್ಟಾಗ್ ಕಡ್ಡಾಯ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ವಾರದಿಂದ ಟೋಲ್, ಬ್ಯಾಂಕ್, ಈ ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಫಾಸ್ಟಾಗ್ ಖರೀದಿಗೆ ವಾಹನ ಮಾಲಿಕರು ಮುಗಿಬಿದ್ದಿದ್ದರು.
ಪ್ರಸ್ತುತ ಅವಧಿ ವಿಸ್ತರಿಸಿರುವುದು ವಾಹನ ಮಾಲೀಕರನ್ನು ನಿರಾಳವಾಗಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಮಯ ಉಳಿತಾಯ ಮತ್ತು ಮಾಲಿನ್ಯ ನಿಯಂತ್ರಣ ಉದ್ದೇಶದಿಂದ ಟೋಲ್‌ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಿಲು ವಾಹನ ನಿಲ್ಲಿಸದೆ ಆನ್ ಲೈನ್‌ನಲ್ಲಿ ಶುಲ್ಕ ಪಾವತಿಸುವ ಫಾಸ್ಟಾಗ್ ತಂತ್ರಜ್ಞಾನವನ್ನು ಕೇಂದ್ರ
ಸರ್ಕಾರ ಕಡ್ಡಾಯಗೊಳಿಸಿದೆ. ಇನ್ನು ರಾಜ್ಯದಲ್ಲಿನರಾಷ್ಟೀಯ ಹೆದ್ದಾರಿಗಳಲ್ಲಿ ಒಟ್ಟು 39 ಟೋಲ್ ಪ್ಲಾಜಾಗಳಿದ್ದು, 34ರಲ್ಲಿ ಈಗಾಗಲೇ ಫಾಸ್ಟಾಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಡಿ.15ರ ಬಳಿಕ ಫಾಸ್ಟಾಗ್ ಇಲ್ಲದೆ ಟೋಲ್ ಪ್ಲಾಜಾ ಪ್ರವೇಶಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಹೀಗಾಗಿ, ಫಾಸ್ಟಾಗ್ ಖರೀದಿಸದ ವಾಹನ ಸವಾರರು ಕೂಡಲೇ ಖರೀದಿಸುವುದು ಸೂಕ್ತ. ಇನ್ನು ಡಿ.15ರ ಬಳಿಕ ಪ್ರತಿ ಟೋಲ್ ಫ್ಲಾಜಾದಲ್ಲಿ ಕೇವಲ ಒಂದು ಲೈನ್‌ನಲ್ಲಿ ಮಾತ್ರ ನಗದು ಸ್ವೀಕರಿಸಲಿದ್ದು, ಇನ್ನುಳಿದ ಫ್ಲಾಜಾಗಳು ಫಾಸ್ಟಾಗ್ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸಲಿವೆ.
ಫಾಸ್ಟಾಗ್ ಎಂದರೇನು?: ಹೆದ್ದಾರಿಗಳಲ್ಲಿ ಸ್ವಯಂ ಚಾಲಿತವಾಗಿ ಟೋಲ್ ಶುಲ್ಕ ಸಂಗ್ರಹಿಸುವ ವ್ಯವಸ್ಥೆಫಾಸ್ಟಾಗ್. ಇದರ ಜಾರಿಯಿಂದ ಟೋಲ್ ಪ್ಲಾಜಾಗಳಲ್ಲಿ ನಿಂತು ಕಾಯುವುದು ತಪ್ಪಲಿದೆ. ಫಾಸ್ಟಾಗ್ ಕಾರ್ಡನ್ನು ವಾಹನದ ಮುಂಭಾಗದಗಾಜಿನ ಮೇಲೆ ಅಂಟಿಸಿದಾಗ ವಾಹನ ಟೋಲ್ ಬಳಿ ತೆರಳುತ್ತಿದ್ದಂತೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಟಿ (ಆರ್ ಎಫ್ಐಡಿ) ತಂತ್ರಜ್ಞಾನದ ಮೂಲಕ ಸ್ವಯಂ ಚಾಲಿತವಾಗಿ ಶುಲ್ಕ ಸ್ವೀಕೃತವಾಗುತ್ತದೆ. ಈ ಫಾಸ್ಟಾಗ್ ಕಾರ್ಡ್‌ಗೆ ಮುಂಚಿತವಾಗಿ ರೀಚಾರ್ಜ್ ಮಾಡಿಸಬೇಕು. ಪ್ರತಿ ಟೋಲ್‌ನಲ್ಲಿ ನಿಗದಿಪಡಿಸಿರುವಶುಲ್ಕ ಪಾವತಿಯಾಗುತ್ತಿದ್ದಂತೆ ಹಣ ಪಾವತಿಸಿದಮೆಸೇಜ್ ಗ್ರಾಹಕರಿಗೆ ಬರುತ್ತದೆ. ಈ ಕಾರ್ಡ್‌ಗೆ ಎಕ್ಸ್‌ಪೈರಿ ಡೇಟ್ ಇಲ್ಲ.
ಕಾರ್ಡ್ ವಿತರಿಸಲು ನೆರವಾಗುತ್ತಿರುವ ಸಿಬ್ಬಂದಿ: ಎನ್‌ಎಚ್‌ಎಐ ಸಿಬ್ಬಂದಿ ಕಳೆದ 1ತಿಂಗಳಿನಿಂದ ಫಾಸ್ಟಾಗ್ ವಿತರಿಸುತ್ತಿದ್ದಾರೆ. ಫಾಸ್ಟಾಗ್ ಪಡೆಯಲುತಿಳಿಯದ ವಾಹನ ಸವಾರರಿಗೆ ಖುದ್ದು ಸಿಬ್ಬಂದಿಯೇಅರ್ಜಿ ತುಂಬುತ್ತಿದ್ದಾರೆ. ಇನ್ನು ಫಾಸ್ಟಾಗ್ ಹೊಂದಿರದ ವಾಹನಗಳು ಫಾಸ್ಟಾಗ್ ಲೈನ್ ಪ್ರವೇಶಿಸದಂತೆ ನೋಡಿಕೊಳ್ಳುತಿದ್ದಾರೆ.
ಕಾರ್ಡ್ ಪಡೆಯುವುದು ಹೇಗೆ?: ಫಾಸ್ಟಾಗ್ ಪಡೆಯಲು ಗ್ರಾಹಕರು ತಮ್ಮ ವಾಹನದಫೋಟೋ, ನೋಂದಣಿ ಪ್ರಮಾಣಪತ್ರ (ಆರ್‌ಸಿ),ಚಾಲನಾ ಪರವಾನಗಿ, ವಿಮೆ ಖಾತೆ ಹೊಂದಿರುವಬ್ಯಾಂಕ್ ವಿವರಗಳ ಜತೆ ಫಾಸ್ಟಾಗ್ ಅರ್ಜಿ ಸಲ್ಲಿಸಬೇಕು. ಕಾರ್ಡ್ ಖರೀದಿಸಲು ಗರಿಷ್ಠ 100 ರೂ. ಶುಲ್ಕ, 200 ರೂ., ಠೇವಣಿ ಮತ್ತು ಮೊದಲ ಬಾರಿ 100 ರೂ. ಚಾರ್ಜ್ ಸೇರಿ ಕನಿಷ್ಠ 400 ರೂ. ನಿಗದಿಪಡಿಸಲಾ ಗಿದೆ.ಫಾಸ್ಟಾಗ್ ಕಾರ್ಡ್ ಪ್ರಮಾಣೀಕರಿಸಿದ 22 ಬ್ಯಾಂಕ್‌ಗಳಲ್ಲಿ, ಪ್ರತಿ ಟೋಲ್ ಪ್ಲಾಜಾ ಬಳಿ ಇರುವ 68 ಪಾಯಿಂಟ್ ಆಫ್ಸೇಲ್‌ಕೇಂದ್ರ, ಅಮೇಜಾನ್ ಸೇರಿ ಹಲವು ಇ-ಕಾಮರ್ಸ್‌ವೇದಿಕೆಗಳಲ್ಲಿ ವಿತರಿಸಲಾಗುತ್ತಿದೆ. ಇದಲ್ಲದೆ ಗ್ರಾಹಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಫಾಸ್ಟಾಗ್ ಆ್ಯಪ್ ಡೌನ್ ಲೋಡ್ ಮಾಡಿ ವಿವರ ಸಲ್ಲಿಸಿ ಕಾರ್ಡ್ ಪಡೆಯಬಹುದು.
ರೀಚಾರ್ಜ್ ಹೇಗೆ?: ಒಂದು ಫಾಸ್ಟಾಗ್‌ಗೆ ಒಂದು ತಿಂಗಳಿಗೆ ಗರಿಷ್ಠ 20 ಸಾವಿರ ರೂ. ರೀಚಾರ್ಜ್‌ಮಾಡಿಸಬಹುದು. ಗ್ರಾಹಕ ತಮ್ಮಫಾಸ್ಟಾಗ್ ಅಕೌಂಟ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ,ರೀಚಾರ್ಜ್ ಮಾಡಿಸುವ ಅಗತ್ಯವಿಲ್ಲ.ಉಳಿದಂತೆ ಪ್ರತ್ಯೇಕ ವ್ಯಾಲೆಟ್‌ಹೊಂದಿರುವ ಗ್ರಾಹಕರು ಚೆಕ್, ಎನ್‌ಇಎಫ್ಟಿ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್,ಫಾಸ್ಟಾಗ್ ಸರ್ವಿಸ್ ಸೆಂಟರ್‌ಗಳಲ್ಲಿ ರೀಚಾರ್ಜ್ ಮಾಡಿಸಬಹುದು.
ಉಚಿತ ಫಾಸ್ಟಾಗ್ ವಿತರಣೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಕಚೇರಿಯಲ್ಲಿ ಉಚಿತವಾಗಿ ಕಾರ್ಡ್ ವಿತರಿಸಲಾಗುತ್ತಿದೆ. ದೇಶಾದ್ಯಂತ 1.5ಲಕ್ಷ ಉಚಿತ ಫಾಸ್ಟಾಗ್ ವಿತರಣೆಗೆ ರಾಷ್ಟ್ರೀಯ ರಸ್ತೆ ಸಾರಿಗೆ ಇಲಾಖೆತೀರ್ಮಾನಿಸಿದ್ದು, ರಾಜ್ಯಾದ್ಯಂತ 40ಸಾವಿರಕಾರ್ಡ್ ವಿತರಿಸಲು ಉದ್ದೇಶಿಸಿದೆ. ಈಗಾಗಲೇ6ಸಾವಿರ ಕಾರ್ಡ್‌ಗಳನ್ನು ಉಚಿತವಾಗಿ ನೀಡಿದೆ. ಪ್ರಸ್ತುತ 15ಸಾವಿರ ಕಾರ್ಡ್ ಎನ್‌ಎಚ್‌ಎಐ ಬಳಿಯಿದ್ದು, ಇನ್ನುಳಿದ 25ಸಾವಿರ ಕಾರ್ಡ್‌ಗಳಿಗಾಗಿ ಕೇಂದ್ರ ಸರ್ಕಾರದ ಬಳಿ ಮನವಿ ಸಲ್ಲಿಸಿದೆ.
ಸ್ಥಳೀಯರಿಗೆ ಶುಲ್ಕ ವಿನಾಯ್ತಿ : ಟೋಲ್ ಪ್ಲಾಜಾದ 10 ಕಿ.ಮೀ. ವ್ಯಾಪ್ತಿಯಲ್ಲಿವಾಸವಿರುವ ಸ್ಥಳೀಯರಿಗೆ ಎಂದಿನಂತೆ ಶುಲ್ಕ ವಿನಾಯ್ತಿ ನೀಡಲಾಗುತ್ತದೆ. ಇದಕ್ಕಾಗಿ ವಾಹನಮಾಲಿಕರು ತಮ್ಮ ನಿವಾಸದ ಪ್ರಮಾಣ ಪತ್ರವನ್ನುಫಾಸ್ಟಾಗ್ ಪಡೆಯುವ ಬ್ಯಾಂಕ್ ಅಥವಾ ಸೇವಾ ಕೇಂದ್ರಕ್ಕೆ (ಪಿಒಎಸ್) ನೀಡಬೇಕು. ವಿಳಾಸಪರಿಶೀಲಿಸಿ ಎನ್‌ಎಚ್‌ಎಐ ಅಧಿಕಾರಿಗಳು ದೃಢೀಕರಿಸಿದ ಬಳಿಕ ರಿಯಾಯ್ತಿ ಫಾಸ್ಟಾಗ್ ನೀಡಲಾಗುತ್ತದೆ.
-ಲೋಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.