ಹಾಸ್ಟೆಲ್‌ನಲ್ಲಿ ಸೌಲಭ್ಯವಿಲ್ಲದೇ ಸಮಸ್ಯೆ
Team Udayavani, Dec 1, 2019, 12:33 PM IST
ಹುಮನಾಬಾದ: ಪಟ್ಟಣದ ಆರ್‌ಟಿಒ ಚೆಕ್‌ಪೋಸ್ಟ್ ಪಕ್ಕದ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮೂಲಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ವಿದ್ಯಾರ್ಥಿ ವಸತಿ ನಿಲಯದಲ್ಲಿ ಬೇಡಿಕೆಗೆ ತಕ್ಕಂತೆ ಸೌಲಭ್ಯವಿಲ್ಲದೇ ಬಡ ವಿದ್ಯಾರ್ಥಿಗಳುಅನುಭವಿಸುತಿದ್ದ ಸಮಸ್ಯೆ ಅರಿತು ಶಾಸಕ ರಾಜಶೇಖರ ಪಾಟೀಲ ಅವರು ಸರ್ಕಾರದಮೇಲೆ ಒತ್ತಡ ಹೇರಿ 6 ವರ್ಷಗಳ ಹಿಂದೆಯಷ್ಟೇ 2 ಕೋಟಿಗೂ ಅ ಧಿಕ ಅನುದಾನ ತಂದು ಕಟ್ಟಡವನ್ನೇನೋ ನಿರ್ಮಿಸಲಾಯಿತು. ಆದರೆಹಲವು ಮೂಲಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ.
ಸ್ನಾನಕ್ಕೆ ತಣ್ಣೀರು: ವಿದ್ಯಾರ್ಥಿಗಳ ಸ್ನಾನಕ್ಕಾಗಿ ಬಿಸಿನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 6ತಿಂಗಳ ಹಿಂದೆಯೇ ಸೋಲಾರ್ ಯಂತ್ರಗಳನ್ನುಅಳವಡಿಸಲಾಗಿದೆ. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಸಂಪರ್ಕ ಕೊಡದಿರುವ ಕಾರಣವಿದ್ಯಾರ್ಥಿಗಳು ನಡುಗುವ ಚಳಿಯನ್ನು ಲೆಕ್ಕಿಸದೇ ಪ್ರತಿನಿತ್ಯ ತಣ್ಣೀರಿನ ಸ್ನಾನ ಮಾಡುತ್ತಿರುವ ಕಾರಣ ಅದೆಷ್ಟೋ ವಿದ್ಯಾರ್ಥಿಗಳು ಶೀತ ಮತ್ತು ಜ್ವರದ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕೊಳವೆಬಾವಿ ನೀರು: ಲಕ್ಷಾಂತರ ವೆಚ್ಚ ಮಾಡಿ ಹಲವು ತಿಂಗಳ ಹಿಂದೆಯೇ ವಸತಿ ನಿಲಯದಲ್ಲಿ ಶುದ್ಧ ಕುಡಿಯುವನೀರಿನ ಯಂತ್ರ ತಂದಿಟ್ಟಿದ್ದಾರೆ. ಅದಕ್ಕೂಸಂಪರ್ಕ ಕೊಡದಿರುವ ಕಾರಣ ವಿದ್ಯಾರ್ಥಿಗಳುಪರ್ಯಾಯ ವ್ಯವಸ್ಥೆ ಇಲ್ಲದೇ ಅನಿವಾರ್ಯವಾಗಿ ಕೊಳವೆಬಾವಿ ನೀರನ್ನೇ ಕುಡಿಯುತ್ತಿದ್ದು, ಇದರಿಂದಲೂ ವಿವಿಧ ಕಾಯಿಲೆಗಳು ಬರುತ್ತಿವೆಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಬಿಸಿ ನೀರು, ಶುದ್ಧ ಕುಡಿಯುವ ನೀರು ಕೊಡುವುದು ಬಿಟ್ಟರೆ ಊಟ, ಉಪಹಾರ ಚಹಾ ಸೇರಿದಂತೆ ಉಳಿದೆಲ್ಲ ಆಹಾರ ಪದಾರ್ಥ ಳನ್ನುಸರ್ಕಾರದ ನಿಯಮಾನುಸಾರ ವಿತರಿಸುತ್ತಿದ್ದಾರೆ. ಆದರೆ ಓದಿಗೆ ತೊಂದರೆ ಆಗದ ರೀತಿಯಲ್ಲಿ ಸಕಾಲಕ್ಕೆ ವಿತರಿಸಿದರೇ ಇನ್ನೂ ಹೆಚ್ಚು ಅನುಕೂಲ ಆಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಆಹಾರದ ಜೊತೆಗೆ ಅತ್ಯಂತ ಅವಶ್ಯವಿರುವ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಸ್ನಾನಕ್ಕೆ ಬೇಸಿಗೆಯಲ್ಲಿ ತಣ್ಣೀದಾರೆ ಓಕೆ ಅಡ್ಜಸ್ಟ್ ಮಾಡಿಕೊಳ್ಳುತ್ತೇವೆ. ಆದರೇ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೇಗೆ ತಾನೆ ಹೊಂದಿಕೊಳ್ಳಲು ಸಾಧ್ಯ. ಚಳಿ ಸಹಿಸಲಾಗದೇ ಏಳುವುದಕ್ಕೆ ವಿಳಂಬ ಆಗುತ್ತಿರುವ ಕಾರಣಸಕಾಲಕ್ಕೆ ಕಾಲೇಜಿಗೆ ತೆರಳಲು ಸಾಧ್ಯವಾಗದೇಪಾಠ ಪ್ರವಚನದಿಂದ ವಂಚಿತರಾಗುತ್ತಿದ್ದೇವೆ. ಈಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿಗಳು. ಇನ್ನಾದರೂ ಅನಗತ್ಯವಾಗಿ ವಿಳಂಬಿಸದೇಅಳವಡಿಸಿದ ಯಂತ್ರಗಳು ಹಾಳಾಗುವ ಮುನ್ನಸಂಬಂಧಪಟ್ಟ ಅಧಿ ಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಶೀಘ್ರ ಬಗೆಹರಿಸಬೇಕೆಂಬ ವಿದ್ಯಾರ್ಥಿ,ಪಾಲಕರ ಬೇಡಿಕೆ ಯಾವಾಗ ಬಗೆಹರಿಸುತ್ತಾರೋ ಕಾದು ನೋಡಬೇಕು.
-ಶಶಿಕಾಂತ ಕೆ.ಭಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.