ಆಸ್ಪತ್ರೆ ಅವ್ಯವಸ್ಥೆಗೆ ಶಾಸಕ ಕೆಂಡಾಮಂಡಲ
Team Udayavani, Dec 1, 2019, 3:30 PM IST
ಬೆಳಗಾವಿ: ಆಸ್ಪತ್ರೆಯ ತುಂಬೆಲ್ಲ ಹೊಲಸು-ಕೆಸರು, ನೀರಿಲ್ಲದ ಶೌಚಾಲಯ-ಹೆರಿಗೆ ವಾರ್ಡ್, ವಾರ್ಡ್ ಗಳಲ್ಲಿ ಗಬ್ಬು ವಾಸನೆ, ಆಸನದ ವ್ಯವಸ್ಥೆ ಇಲ್ಲದೇ ಒದ್ದಾಡುತ್ತಿರುವ ರೋಗಿಗಳು, ನಿಗದಿತ ಸಮಯಕ್ಕೆ ಬಾರದ ವೈದ್ಯರು.
ಇಲ್ಲಿಯ ಜಿಲ್ಲಾಸ್ಪತ್ರೆಗೆ ಶನಿವಾರ ಹಠಾತ್ ಭೇಟಿ ನೀಡಿದ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಕಂಡ ಅವ್ಯವಸ್ಥೆಯ ದೃಶ್ಯಗಳಿವು.ಇದನ್ನು ಕಂಡು ಕೆಂಡಾಮಂಡಲರಾಗಿ ಅವರ ತಾಪ ನೆತ್ತಿಗೇರಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಎರಡು ದಿನಗಳಿಂದ ಸಂಘ-ಸಂಸ್ಥೆಗಳು ನಡೆಸಿದಪ್ರತಿಭಟನೆ ಬಳಿಕ ಶನಿವಾರ ಭೇಟಿ ನೀಡಿದ ಶಾಸಕರು ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.
ಹೆರಿಗೆ ವಾರ್ಡ್‌ಗೆ ತೆರಳಿದ ಶಾಸಕರಿಗೆ ನರಕದ ಅನಾವರಣಆಯಿತು. ಹೆರಿಗೆ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿಕೆಸರು, ಹೊಲಸು ಕಂಡು ಬಂತು. ಸರಿಯಾದ ನೀರಿನ ವ್ಯವಸ್ಥೆ ಇರಲಿಲ್ಲ. ತೊಟ್ಟಿಗಳಲ್ಲಿ ಬಾರದ ನೀರಿನಿಂದ ಬಾಣಂತಿಯರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವವರು ಯಾರು ಎಂದು ಪ್ರಶ್ನಿಸಿದರು. ನೀರು ಮತ್ತು ವಿದ್ಯುತ್ ಇಲ್ಲದ ಶೌಚಾಲಯಗಳು,ಹೆರಿಗೆ ಬಳಿಕ ಸ್ನಾನಕ್ಕೆ ಬಿಸಿ ನೀರು ಇಲ್ಲದ ಸ್ಥಿತಿ ಇಲ್ಲಿದೆ. ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಸ್ವತ್ಛತೆ ಇಲ್ಲದೇ ದುರ್ವಾಸನೆ ಬರುತ್ತಿದೆ. ಸರಿಯಾದ ಔಷಧ ವ್ಯವಸ್ಥೆಯೂ ಇಲ್ಲವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಅನೇಕ ದಿನಗಳು ಕಳೆದರೂ ಯಾರೂ ಗಮನಹರಿಸುತ್ತಿಲ್ಲ. ರೋಗಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸದ ದಾದಿಗಳ ದರ್ಪದ ಮಾತುಗಳು, ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯನಿರ್ವಹಣೆ ಹಾಗೂ ಸರಿಯಾದ ಸಮಯಕ್ಕೆ ಹಾಜರಾಗದ ವೈದ್ಯರ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಅನುದಾನದ ಕೊರತೆ ಇಲ್ಲ: ಜಿಲ್ಲಾಸ್ಪತ್ರೆಗೆ ಕೇಂದ್ರರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬರುತ್ತಿದ್ದರೂ ಸದ್ಬಳಕೆ ಆಗುತ್ತಿಲ್ಲ. ಆಸ್ಪತ್ರೆ ವಿಷಯದಲ್ಲಿಯಾವುದೇ ಹಣದ ಕೊರತೆ ಇಲ್ಲ. ಬಿಮ್ಸ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಕಂಡು ಬರುತ್ತಿದೆ. ನಾಳೆಯೊಳಗೆ ಇಲ್ಲಿಯ ಅವ್ಯವಸ್ಥೆ ಸರಿಯಾಗದಿದ್ದರೆ ಅಧಿ ಕಾರಿಗಳ ಅಮಾನತಿಗೆ ಶಿಫಾರಸು ಮಾಡುವುದಾಗಿ ಶಾಸಕ ಅನಿಲ ಬೆನಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಅನೇಕ ಸಲ ಸೂಚನೆಗಳನ್ನು ಕೊಟ್ಟರೂ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಿಲ್ಲ. ಹೀಗಾಗಿ ಆಸ್ಪತ್ರೆಯ ಬಗ್ಗೆನಿಗಾ ವಹಿಸುವ ನಿಟ್ಟಿನಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದಶಾಸಕರು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು,ಹೋರಾಟಗಾರರು, ಸಮಾಜ ಸೇವಕರು, ಜವಾಬ್ದಾರಿಯುತ ಎನ್‌ಜಿಒಗಳನ್ನು ಒಳಗೊಂಡಮೇಲ್ವಿಚಾರಣಾ ಸಮಿತಿ ರಚಿಸುವುದಾಗಿ ಹೇಳಿದರು.
ಪ್ರಶ್ನೆಗೆ ಅಧಿಕಾರಿಗಳು ನಿರುತ್ತರ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಸರಿಯಾಗಿಬಳಕೆ ಮಾಡದಿರಲು ಅಧಿಕಾರಿಗಳ ಅಸಡ್ಡೆಯೇ ಮುಖ್ಯ ಕಾರಣ. ಈ ಹಣ ಬಳಕೆಯಾಗದೇ ಎಲ್ಲಿಗೆ ಹೋಯಿತು ಎಂಬ ಶಾಸಕರ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ವೈದ್ಯಾಧಿ ಕಾರಿಗಳು ಹಾಗೂ ಮುಖ್ಯ ಶುಶ್ರೂಷಕ ಅಧಿಧೀಕ್ಷಕರು ಸಮಂಜಸ ಉತ್ತರ ನೀಡಲಿಲ್ಲ. ಇದರಿಂದ ಕೆಂಡಾಮಂಡಲರಾದ ಶಾಸಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಶಾಸಕರ ಬಳಿ ನೋವು ತೋಡಿಕೊಂಡ ರೋಗಿಗಳು, ಸಾಮಾಜಿಕ ಹೋರಾಟಗಾರರು, ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಡಿ.1 ರಂದು ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ.ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸಾಮಾಜಿಕ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾಜಿ ಕಾಗಣೀಕರ, ನ್ಯಾಯವಾದಿಎನ್.ಆರ್. ಲಾತೂರ, ಹೋರಾಟಗಾರ ಕಿರಣಕುಮಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.