ಚಂದಾದಾರರು ವ್ಯಾಪ್ತಿಯಿಂದ ಹೊರಗೆ!

ಕಂಪನಿಗಳ ಜಗಳದಲಿ ಮೊಬೈಲ್‌ ಕರೆಗಳು ದುಬಾರಿ

Team Udayavani, Dec 2, 2019, 5:15 AM IST

Calling

ಏರ್‌ಟೆಲ್‌ ಮತ್ತು ವೊಡಾಫೋನ್‌ ಮೊಬೈಲ್‌ ಕಂಪನಿಗಳು ಡಿಸೆಂಬರ್‌ ಮೊದಲ ವಾರದಿಂದ ತಮ್ಮ ಮೊಬೈಲ್‌ ಶುಲ್ಕವನ್ನು ಹೆಚ್ಚಿಸಲಿವೆ ಎಂಬುದು ಸದ್ಯದ ಸುದ್ದಿ. ಜಿಯೋ ಕಂಪನಿ ಕೂಡಾ ಇನ್ನು ಕೆಲವು ವಾರಗಳಲ್ಲಿ ಶುಲ್ಕವನ್ನು ಹೆಚ್ಚಿಸುವ ಸೂಚನೆಯನ್ನು ನೀಡಿದೆ. ಈ ಹೆಚ್ಚಳದ ರೂಪುರೇಷೆ ಮತ್ತು ಹೆಚ್ಚಳದ ಪ್ರಮಾಣ ಇನ್ನೂ ನಿರ್ಧಾರವಾಗಿಲ್ಲ. ವದಂತಿಗಳ (speculation) ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಮೊಬೈಲ್‌ ಶುಲ್ಕ ಏರಿಸದೇ ಇರುವುದರಿಂದ ಈ ಬಾರಿಯ ಹೆಚ್ಚಳ ಮೊಬೈಲ್‌ ಗ್ರಾಹಕರ ಕೈ ಕಚ್ಚಲಿದೆ ಮತ್ತು ಹೆಚ್ಚಳ ಕನಿಷ್ಟ 20% ವರೆಗೂ ಆಗಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಏಕೆ ಈ ಹೆಚ್ಚಳ?
ಕಳೆದ ಮೂರು ವರ್ಷಗಳಿಂದ ಮೊಬೈಲ್‌ ಕಂಪನಿಗಳು ಗ್ರಾಹಕರಿಗೆ ತಮ್ಮ ಶುಲ್ಕವನ್ನು (tariff) ಹೆಚ್ಚಿಸಿಲ್ಲ. ಟೆಲಿಕಾಂ ಉದ್ಯಮಕ್ಕೆ ಭಾರೀ ಬಂಡವಾಳ (capital intensie) ಬೇಕಾಗಿದೆ. ಟೆಕ್ನಾಲಜಿ ನಿರಂತರವಾಗಿ ಬದಲಾಗುತಿದ್ದು, ಅದರ upgradationಗೆ ಬಂಡವಾಳ ಪೂರೈಕೆಯಾಗಬೇಕಾಗುತ್ತದೆ. ಕಂಪನಿಗಳು ಹಣಕಾಸು ಒತ್ತಡದಲ್ಲಿದ್ದು low tariff ವ್ಯವಸ್ಥೆಯನ್ನು ಮುಂದುವರಿಸುವುದು ಕಷ್ಟ ಎನ್ನುತ್ತಿವೆ. ಕಂಪನಿಯ ಆದಾಯ ಹೆಚ್ಚಿಸಿ ಅದರ ಮೂಲಕ ನಿರ್ವಹಣಾ ವೆಚ್ಚವನ್ನು ತಗ್ಗಿಸುವ ಅನಿವಾರ್ಯತೆ ಎದುರಾಗಿದೆ. ಅದಕ್ಕೂ ಮೇಲಾಗಿ, ಏರ್‌ಟೆಲ್‌ ಕಂಪನಿ 23,045 ಕೋಟಿ ಮತ್ತು ವೊಡಾಫೋನ್‌ ಕಂಪನಿ 50,922 ಕೋಟಿ ನಷ್ಟವನ್ನು ಅನುಭವಿಸುತ್ತಿವೆ. ಬೇರೆ ಮೊಬೈಲ್‌ ಸೇವಾ ನೆಟ್‌ವರ್ಕ್‌ ಮೂಲಕ ಹೋಗುವ ತನ್ನ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್‌ ಮಾಡುವ ಮುಕೇಶ್‌ ಅಂಬಾನಿ ಒಡೆತನದ ಜಿಯೋ ಕಂಪನಿಯೊಂದೇ ಲಾಭ ಗಳಿಸುತ್ತಿದ್ದು, ಅದು ಕೂಡಾ ಕೇವಲ 683 ಕೋಟಿ. ನಷ್ಟದಿಂದ ಸಂಕಷ್ಟ ಅನುಭವಿಸುತ್ತಿರುವ ವೊಡಾಫೋನ್‌ ಸರ್ಕಾರ ನೆರವಿಗೆ ಬರದಿದ್ದರೆ ಭಾರತದಿಂದ ಕಾಲೆ¤ಗೆಯಬಹುದು ಎನ್ನುವ ವದಂತಿಗಳು ಟೆಲಿಕಾಂ ವಲಯದಲ್ಲಿ ಕೇಳುತ್ತಿದೆ. ಅಕಸ್ಮಾತ್‌ ಈ ಕಂಪನಿಗಳು ಮುಚ್ಚಿದರೆ, ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ.

ನಷ್ಟಕ್ಕೆ ಕಾರಣ?
ಏರುತ್ತಿರುವ ನಿರ್ವಹಣಾ ವೆಚ್ಚದೊಂದಿಗೆ, ಈ ಮೊಬೈಲ್‌ ಕಂಪನಿಗಳ ನಷ್ಟಕ್ಕೆ ಇತ್ತೀಚಿನ ಸುಪ್ರೀಂ ಕೋರ್ಟ್‌ ತೀರ್ಪು ಕಾರಣ ಎನ್ನಲಾಗುತ್ತಿದೆ. ಈ ಕಂಪನಿಗಳು ಹೊಂದಾಣಿಕೆ ಮಾಡಿದ ಒಟ್ಟೂ (adjusted gross revenue &AGR)) ವರಮಾನದ ಅಡಿಯಲ್ಲಿ, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತರಂಗಾಂತರ ಬಳಕೆ (spectrum use) ಮತ್ತು ದಂಡ ಶುಲ್ಕವನ್ನು ದಂಡ ಮತ್ತು ಬಡ್ಡಿ ಸಮೇತ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹಾಗಾಗಿ ತಮ್ಮ ಆದಾಯದ ಗಣನೀಯ ಪ್ರಮಾಣವನ್ನು ತೆರಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಏರ್‌ಟೆಲ…, ಎಂ.ಟಿ.ಎನ್‌.ಎಲ…, ಬಿ.ಎಸ್‌.ಎನ್‌.ಎಲ್‌, ವೊಡಾಫೋನ್‌ ಮತ್ತು ಇತರ ಕೆಲವು ಮುಖ್ಯ ಕಂಪನಿಗಳು ಲಕ್ಷ ಕೋಟಿಗೂ ಮೀರಿ ಬಾಕಿ ಇರಿಸಿಕೊಂಡಿದ್ದು, ಅದರಲ್ಲಿ ಏರ್‌ಟೆಲ್‌ನ 44,150 ಕೋಟಿ ಪಾಲು ಆಗಿದ್ದರೆ, ವೊಡಾಫೋನ್‌ನ ಪಾಲು 62,187 ಕೋಟಿ ರೂ. ಈ ಅನಿರೀಕ್ಷಿತ ಹೊರೆ ಟೆಲಿಕಾಂ ಕಂಪೆನಿಗಳನ್ನು ಬೆಚ್ಚಿ ಬೀಳಿಸಿದ್ದು, ಅವು ಬಿಜಿನೆಸ್‌ನಲ್ಲಿ ಉಳಿದು ಮುಂದುವರಿಯಲು ಶುಲ್ಕವನ್ನು ಏರಿಸುವ ಸಂದಿಗªತೆಯಲ್ಲಿ ಸಿಲುಕಿವೆ.

ಇದೇನಿದು ಹೊಂದಾಣಿಕೆ ಮಾಡಿದ ಒಟ್ಟು ಆದಾಯ (Adjusted Gross Revenue)?
ಕೇಂದ್ರ ಸರ್ಕಾರದ ಅನುಮತಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಟೆಲಿಕಾಂ ಕಂಪನಿಗಳು ತಮ್ಮ ಆದಾಯದಲ್ಲಿ ಕೆಲವು ನಿರ್ದಿಷ್ಟ ಭಾಗವನ್ನು ಲೈಸೆನ್ಸ್‌ ಫೀ ಹೆಸರಿನಲ್ಲಿ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಇದರಲ್ಲಿ ಸ್ಪೆಕ್ಟ್ರಂ ಬಳಕೆ ಮಾಡಿದ್ದಕ್ಕೆ ಶುಲ್ಕ, ಬಾಡಿಗೆ ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಅದಾಯ ಮುಂತಾದವುಗಳು ಸೇರಿರುತ್ತವೆ. ಈ ಶುಲ್ಕದ ಬಗೆಗಿನ ವಿವಾದ ಕೋರ್ಟ್‌ನಲ್ಲಿ ಈಗ ಬಗೆಹರಿದಿದೆ. ಟೆಲಿಕಾಂ ಕಂಪನಿಗಳು ಈ ಶುಲ್ಕವನ್ನು ನೀಡಬೇಕಾಗಿ ಬಂದಿದೆ. ಟೆಲಿಕಾಂ ಸೇವೆಯಿಂದ ಅದಾಯವನ್ನಷ್ಟೇ ಕಂಪನಿಯ ಅದಾಯವೆಂದು ಪರಿಗಣಿಸಬೇಕು ಎನ್ನುವ ಕಂಪನಿಗಳ ವಾದವನ್ನು ಕೋರ್ಟ್‌ ತಳ್ಳಿ ಹಾಕಿದೆ. ಈ ಬಾಕಿಯನ್ನು ಪಾವತಿಸಿ ತಮ್ಮ ಬಿಜಿನೆಸ್‌ಅನ್ನು ಈ ಕಂಪನಿಗಳು ಮುಂದುವರಿಸುವುದು ಸಂದೇಹ ಎನಿಸುತ್ತದೆ. ವೊಡಾಫೋನ್‌ ಭಾರತದಿಂದ ಹೊರಹೋಗುವ ಇಂಗಿತವನ್ನು ವ್ಯಕ್ತ ಪಡಿಸಿದೆಯಂತೆ. ಐಡಿಯಾ ಕಂಪನಿ ಈಗಾಗಲೇ ವೊಡಾಫೋನ್‌ನಲ್ಲಿ ವಿಲೀನವಾಗಿದೆ. ಟಾಟಾ ಡೊಕೊಮಾ ಹೆಚ್ಚಾಗಿ ಕಾಣುತ್ತಿಲ್ಲ. ಮೈದಾನದಲ್ಲಿ ಕೆಲವೇ ಕಂಪನಿಗಳು ಉಳಿದು, ಸ್ಪರ್ಧೆಗಳು ನಶಿಸಿ ಮೊಬೈಲ್‌ ಸೇವೆ ಏಕಸ್ವಾಮ್ಯದತ್ತ ಸರಿಯುವುದನ್ನು ತಳ್ಳಿಹಾಕಲಾಗದು.

ಅತಿ ಹೆಚ್ಚಿನ ಚಂದಾದಾರರು
ಭಾರತದಲ್ಲಿ ಮೊಬೈಲ್‌ ಸಂಪರ್ಕ ಪಡೆದವರ ಸಂಖ್ಯೆ ಸುಮಾರು 1.010 ಬಿಲಿಯನ್‌. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಪ್ರಕಾರ 1.30 ಬಿಲಿಯನ್‌ ಜನಸಂಖ್ಯೆಗೆ 1.16 ಬಿಲಿಯನ್‌ ಮೊಬೈಲ್‌ ಚಂದಾದಾರರಿದ್ದು, saturation point ತಲುಪಿದೆ. ಬಾಸ್ಕೆಟ್‌, ಪೂರ್ಣ ತುಂಬಿದರೂ ಟೆಲಿಕಾಂ ಕಂಪನಿಗಳು ನಷ್ಟ ಅನುಭವಿಸುತ್ತಿರುವುದೇಕೆ ಎನ್ನುವ ಜಿಜ್ಞಾಸೆ ವಿಶ್ಲೇಷಕರನ್ನು ಕಜ್ಞಡುತ್ತಿದೆ

– ರಮಾನಂದ ಶರ್ಮಾ

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.