mAadhaar ಆಧಾರ್‌ ಮೊಬೈಲ್‌ ಆ್ಯಪ್‌ ; ಹೊಸ ಆಯ್ಕೆಯೊಂದಿಗೆ ಬಳಕೆಗೆ ಮುಕ್ತ


Team Udayavani, Dec 1, 2019, 9:50 PM IST

Aadhaar-App-730

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಐಒಎಸ್‌ ಮತ್ತು ಆ್ಯಂಡ್ರಾಯ್ಡ ಸ್ಮಾರ್ಟ್‌ಫೋನ್‌ಗಳಿಗೆ ತನ್ನ ಎಂಆಧಾರ್‌ (mAadhaar) ಆ್ಯಪ್‌ ಅನ್ನು ಪರಿಷ್ಕರಿಸಿ ಬಿಡುಗಡೆಗೊಳಿಸಿದೆ. ಇದು ತನ್ನ ಬಳಕೆದಾರರಿಗೆ ಕೆಲವೊಂದು ಹೊಸ ಫೀಚರ್‌ಗಳನ್ನು ಪರಿಚಯಿಸಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಿಂದ ಅಥವಾ ಐಫೋನ್‌ಗಳಿಗೆ ಆ್ಯಪಲ್‌ ಸ್ಟೋರ್‌ನಿಂದ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಇಲ್ಲಿ ನೂತನ ಆ್ಯಪನಲ್ಲಿ ಲಭ್ಯವಿರುವ ಸೇವೆಗಳನ್ನು ನೀಡಲಾಗಿದೆ.

ಬಳಕೆ ಹೇಗೆ?
ಈ ಆಪ್‌ಗೆ ಲಾಗ್‌ಇನ್‌ ಆಗಬೇಕು ಮತ್ತು ನಿಮ್ಮ ಮೊಬೈಲ್‌ ನಂಬರ್‌ನ ವೆರಿಫಿಕೇಷನ್‌ ಗೊಳ್ಳಬೇಕು. ಇದನ್ನು ಮಾಡುವುದಕ್ಕಾಗಿ ನೀವು ಮೇಲ್ಬಾಗದ ಬ್ಯಾನರ್‌ ನಲ್ಲಿರುವ Register your Aadaar ನ್ನು ಕ್ಲಿಕ್ಕಿಸಬೇಕು. ಬಳಿಕ ಇದು ನಿಮ್ಮನ್ನು ಹೊಸ ಪೇಜ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದು ಮಾಡಬೇಕು. ಬಳಿಕ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಬಂದ ನಂತರ, ಅದನ್ನು ಆಪ್‌ನಲ್ಲಿ ಎಂಟರ್‌ ಮಾಡಬೇಕು. ಇದು ಪೂರ್ಣಗೊಂಡ ಬಳಿಕ ಆಪ್‌ ಲಿಂಕ್‌ ಕೆಲಸ ಪೂರ್ಣವಾಗುತ್ತದೆ. ಇದು ಪೂರ್ಣಗೊಂಡಿದೆ ಎಂಬುದನ್ನು ದೃಢೀಕರಿಸಲು ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಆಧಾರ್‌ ಕಾರ್ಡ್‌ನ ಅಧಿಕೃತ ಪ್ರತಿಯೊಂದು ಲಭ್ಯವಿರುತ್ತದೆ.

ಬಹುಭಾಷಿಕ ಆ್ಯಪ್‌
ಇಂಗ್ಲಿಷ್‌, ಹಿಂದಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ, ಒಡಿಯಾ, ಅಸ್ಸಾಮೀಸ್‌ ಮತ್ತು ಬೆಂಗಾಲಿ ಹೀಗೆ 13 ಭಾಷೆಗಳು ಈ ಆ್ಯಪ್‌ನಲ್ಲಿ ಉಪಲಬ್ಧವಿವೆ. ನಿಮ್ಮ ಇಚ್ಚೆಯ ಭಾಷೆಯನ್ನು ನೀವು ಆಯ್ದುಕೊಳ್ಳಬಹುದಾಗಿದೆ. ನೀವು ಕನ್ನಡ ಭಾಷೆಯನ್ನು ಆಯ್ದುಕೊಂಡು ಬಳಿಕ ಬೇರೆ ಭಾಷೆಗೆ ಬದಲಾಯಿಸಬಹುದಾಗಿದೆ.

ಆಧಾರ್‌ ಕಳೆದ ಹೋದರೆ ಇಲ್ಲಿದೆ ಪರಿಹಾರ
ಒಂದು ವೇಳೆ ನಿಮ್ಮ ಆಧಾರ್‌ ಕಾರ್ಡ್‌ ಎಲ್ಲೋ ಕಳೆದುಹೋದರೆ ಈ ಹೊಸ ಎಂಆಧಾರ್‌ ಆಪ್‌ನಲ್ಲಿ ಹೊಸ ಆಧಾರ್‌ ಕಾರ್ಡ್‌ನ ಪ್ರತಿಗೆ ಮನವಿ ಮಾಡಬಹುದಾಗಿದೆ. ಆಪ್‌ನ ಮೊದಲ ಪೇಜ್‌ನಲ್ಲಿ Order Aadhaar Reprint ಆಯ್ಕೆ ಇದ್ದು, ಹೊಸ ಆರ್ಧಾ ಕಾರ್ಡ್‌ ಪ್ರಿಂಟ್‌ ಮಾಡಿಸಿಕೊಳ್ಳಬಹುದು.

ನಿಮ್ಮ ಆಧಾರ್‌ ವಿವರಗಳನ್ನು ಇಲ್ಲಿ ನಮೂದು ಮಾಡಬೇಕು. ಇದಾದ ಅನಂತರ ನೀವು ಉಳಿದೆಲ್ಲಾ ವಿವರಗಳನ್ನು ಎಂಟರ್‌ ಮಾಡಬೇಕು. ಇದಕ್ಕೆ 50 ರೂ. ಮೊತ್ತವನ್ನು ಪಾವತಿಸಬೇಕಾಗಿದೆ. ಇದರಲ್ಲಿ ಸ್ಪೀಡ್‌ ಪೋಸ್ಟ್‌ ಚಾರ್ಜ್‌ ಮತ್ತು ಜಿಎಸ್‌ಟಿ ಒಳಗೊಂಡಿರುತ್ತದೆ. UIDAI ಪ್ರಿಂಟ್‌ ಆಗಿರುವ ಪ್ರತಿಯನ್ನು ನಿಮಗೆ ಪ್ರಿಂಟ್‌ ಮಾಡಿ ಸ್ಪೀಡ್‌ ಪೋಸ್ಟ್‌ ಮೂಲಕ ಕಳುಹಿಸಿಕೊಡಲಾಗುತ್ತದೆ. ಇದು ಸುಮಾರು ಐದು ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.

ತಿದ್ದುಪಡಿಗೆ ಅವಕಾಶ
ಈಗಾಗಲೇ ನೀಡಲಾದ ಆಧಾರ್‌ ಕಾರ್ಡ್‌ನಲ್ಲಿ ಏನಾದರೂ ಮಾಹಿತಿಗಳು ಅಪ್‌ಡೇಟ್‌ ಆಗದೇ ಇದ್ದರೆ ಅಥವ ತಪ್ಪಾಗಿ ಮುದ್ರಣವಾಗಿದ್ದರೆ, ನೀವು ಈ ನೂತನ mAadhaar  ಆ್ಯಪ್‌ನಲ್ಲಿ ತಿದ್ದಪಡಿಗೊಳಿಸುವುದಕ್ಕೆ ಅವಕಾಶ ನೀಡಲಾಗಿದೆ. ಉದಾ: ನಿಮ್ಮ ವಿಳಾಸ, ಮೇಲ್‌ ಮೊದಲಾದವುಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಬಯೋ ಮೆಟ್ರಿಕ್‌ ಲಾಕ್‌
ಪ್ರೈವೆಸಿ/ಖಾಸಗಿತನಕ್ಕಾಗಿ ಬಯೋಮೆಟ್ರಿಕ್ಸ್‌ ಭದ್ರತೆಯನ್ನು ಒದಗಿಸಲಾಗುತ್ತದೆ. ನಿಮ್ಮ ಆಧಾರ್‌ ವಿವರವನ್ನು ಯಾರಿಗೂ ನೀಡಲು ಬಯಸದೇ ಇದ್ದಲ್ಲಿ ನೀವು ಸರಳವಾಗಿ ಆಪ್‌ನ ಮೈ ಆಧಾರ್‌ ವಿಭಾಗದಲ್ಲಿ ನಿಮ್ಮ ಆಧಾರ್‌ ವಿವರವನ್ನು ತಾತ್ಕಾಲಿಕವಾಗಿ ಲಾಕ್‌ ಮತ್ತು ಅನ್‌ಲಾಕ್‌ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.

ದೃಢೀಕರಣ ಮಾಹಿತಿ
ಒಂದು ವೇಳೆ ನಿಮ್ಮ ಆಧಾರ್‌ ವಿವರಗಳು ನಿಮ್ಮ ಕಣ್ತಪ್ಪಿನಿಂದ ಅಥವ ನಿಮಗೆ ಅರಿವಿಲ್ಲದೇ ಎಲ್ಲೋ ಬಳಕೆಯಾಗಿದೆ ಎಂದು ನಿಮ್ಮಲ್ಲಿ ಅನಿಸಿದರೆ ನೀವು ಎಂಆಧಾರ್‌ ಆಪ್‌ ತೆರಳಿ ಮತ್ತು ಮೈ ಆಧಾರ್‌ ವಿಭಾಗದಲ್ಲಿ ಅuಠಿಜಛಿnಠಿಜಿcಚಠಿಜಿಟn ಏಜಿsಠಿಟ್ಟy’ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು. ಇಲ್ಲಿ ನಿಮ್ಮ ರಿಜಿಸ್ಟರ್‌ ಮೊಬೈಲ್‌ ನಂಬರಿಗೆ ಓಟಿಪಿ ಬರುತ್ತದೆ. ನೀವು ಯಾವೆಲ್ಲಾ ದಿನಾಂಕದಂದು ನಿವು ಆಧಾರ್‌ ವಿವರಗಳನ್ನು ತೆರೆದು ನೋಡಿದ್ದೀರಿ ಎಂಬ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

3 ಪ್ರೊಫೈಲ್‌ ಸೇರಿಸಬಹುದು
ಮಲ್ಟಿ-ಪ್ರೊಫೈಲ್‌ ಸೇವೆಯು ಎಂಆಧಾರ್‌ನಲ್ಲಿ ಲಭ್ಯವುದೆ. ಒಂದೇ ಮೊಬೈಲ್‌ ಸಂಖ್ಯೆಯಲ್ಲಿ 3 ಆಧಾರ್‌ ಕಾರ್ಡ್‌ಗಳನ್ನು ತೆರೆಯಲಾಗಿದ್ದರೆ ಆ ಮೂರು ಆಧಾರ್‌ ಕಾರ್ಡ್‌ಗಳನ್ನು ಈ ಒಂದೇ ಆ್ಯಪ್‌ನಲ್ಲಿ ದಾಖಲಿಸಬಹುದು. ಆದರೆ ಗರಿಷ್ಠ 3 ಕಾರ್ಡ್‌ಗಳನ್ನು ಮಾತ್ರ ಇಟ್ಟುಕೊಳ್ಳಬಹುದಾಗಿದೆ.

ಗುರುತಾಗಿ ಬಳಸಿ
ರೈಲುಗಳಲ್ಲಿ ಅಥವ ಇತರ ಪ್ರಯಾಣಗಳಲ್ಲಿ ಗುರುತಿನ ಚೀಟಿಯನ್ನು ನಮ್ಮಿಂದ ದಾಖಲೆಯ ಸಲುವಾಗಿ ಅಪೇಕ್ಷಿಸಲಾಗುತ್ತದೆ. ಇಂತಹ ಕಡೆ ಎಂಆಧಾರ್‌ ಆ್ಯಪ್‌ ಅನ್ನು ಬಳಸಬಹುದಾಗಿದೆ.

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

voter

Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು

stalin

DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್‌ ವಿರುದ್ಧ ಸ್ಟಾಲಿನ್‌ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.