ಶೇರು ಪೇಟೆ ಆಳ ಅಧ್ಯಯನ ಅಗತ್ಯ


Team Udayavani, Dec 2, 2019, 5:26 AM IST

shutterstock-03

ನಮ್ಮಲ್ಲಿ ಶೇರುಗಳನ್ನು ಕೊಂಡ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತುಕೊಂಡುಬಿಡುವವರ ಸಂಖ್ಯೆ ಹೆಚ್ಚು. ಆದರ ಬೆಳವಣಿಗೆಯ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಪರೀಕ್ಷಿಸಿ ಶೇರು ಬೆಲೆ ಕುಸಿದಿದ್ದರೆ ಗಾಬರಿ ಬೀಳುವ ಪ್ರವೃತ್ತಿಯವರು ಬಹಳ ಜನ ಇದ್ದಾರೆ. ಶೇರುಪೇಟೆಯ ವ್ಯವಹಾರದತ್ತ ನಮ್ಮ ಸ್ವಭಾವ ಹೇಗಿರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಶೇರುಪೇಟೆ ಅಪಾಯಭರಿತವಾದದ್ದು. ಅಲ್ಲಿ ಹೂಡಿದ ದುಡ್ಡು ಯಾವಾಗ ಬೇಕಾದರೂ ಕಳೆದುಹೋಗಬಹುದು ಎನ್ನುವ ಸರಳ ಸತ್ಯ ಎಲ್ಲರಿಗೂ ತಿಳಿದೇ ಇದೆ. ಆದರೂ, ಯಾಕೋ ಏನೋ ನಮ್ಮ ಮನಸ್ಸು ಅದರಿಂದ ಬರಬಹುದಾದ ಬೃಹತ್‌ ಪ್ರಮಾಣದ ಲಾಭಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಆಸೆಯ ಶಕ್ತಿಯೇ ಅಂಥದ್ದು! ಅದು ಅಪಾಯಗಳನ್ನು ಕಡೆಗಣಿಸಿ, ಸಿಗಬಹುದಾದ ಸಿರಿಯತ್ತ ಮಾತ್ರ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ.

ಶೇರು ಖರೀದಿಸುವಾಗ ಸಲಹೆ ನೀಡಲು ಹಲವಾರು ಜನರು ಇರುತ್ತಾರೆ. ದಿನ ಬೆಳಗಾದರೆ ದೃಶ್ಯ ಮಾಧ್ಯಮದಲ್ಲಿ, ವೃತ್ತ ಪತ್ರಿಕೆಗಳಲ್ಲಿ ಯಾವ ಶೇರನ್ನು ಯಾವ ಬೆಲೆಗೆ ಕೊಂಡುಕೊಳ್ಳಬಹುದು ಎನ್ನುವ ಸಲಹೆ ದಂಡಿಯಾಗಿ ದೊರೆಯುತ್ತದೆ. ಆದರೆ, ಶೇರನ್ನು ಕೊಂಡುಕೊಂಡ ನಂತರ ಏನು ಮಾಡಬೇಕು ಎನ್ನುವ ಸಲಹೆಯನ್ನು ಬಹುತೇಕರು ನೀಡುವುದಿಲ್ಲ. ಅದೇ ಶೇರನ್ನು ಯಾವಾಗ, ಯಾವ ಬೆಲೆಗೆ ಮಾರಿದರೆ ಲಾಭ ಗಳಿಸಬಹುದು ಎಂಬಿತ್ಯಾದಿ ಸಲಹೆ ಸಿಗುವುದೂ ದುರ್ಲಭ. ಹಾಗಾಗಿಯೇ, ಹಲವರ ಕೈಯಲ್ಲಿ ವರ್ಷಾನುಗಟ್ಟಲೆ ಶೇರುಗಳು ಹಾಗೆಯೇ ಖಾತೆಯಲ್ಲಿ ಕೊಳೆಯುತ್ತಿರುತ್ತವೆ. ಅವುಗಳಲ್ಲಿ ಹೆಚ್ಚಿನವುಗಳ ಬೆಲೆ ನೆಲಕಚ್ಚಿ ನಿಮ್ಮ ಹೂಡಿಕೆಯಲ್ಲಿ ಭಾರೀ ನಷ್ಟ ಉಂಟಾಗಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.

ಅಧ್ಯಯನ ಮುಖ್ಯ
ಯಾವುದೇ ಸಂಸ್ಥೆಯ ಶೇರನ್ನು ಯಾವಾಗ ಖರೀದಿಸಬೇಕು ಎನ್ನುವುದಕ್ಕೆ ನೀಡುವ ಮಹತ್ವವನ್ನು, ಯಾವಾಗ ಮಾರಾಟ ಮಾಡಬೇಕು ಎನ್ನುವುದಕ್ಕೂ ನೀಡಬೇಕು. ಮೊತ್ತ ಮೊದಲನೆಯದಾಗಿ, ಖರೀದಿದಾರರು ತಮ್ಮ ಶೇರಿನ ಗ್ರಹಗತಿಯನ್ನು ಸರಿಯಾಗಿ ಗಮನಿಸುತ್ತಾ ಇರಬೇಕು. ಆ ಕಂಪೆನಿಯ ಸಾಧನೆ ಮತ್ತು ಶೇರುಪೇಟೆಯಲ್ಲಿ ಅದರ ಬೆಲೆಯ ಏರಿಳಿತಗಳನ್ನು ಅಧ್ಯಯನ ಮಾಡುತ್ತಾ ಇರಬೇಕು. ಆ ಕಂಪೆನಿಯ ಸಾಧನೆ ಅಥವಾ ಭವಿಷ್ಯ ಕುಂಠಿತವಾಗುವ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಕೂಡಲೇ ಮಾರಿಬಿಡಿ. ಈ ಸಲುವಾಗಿ ಕಂಪೆನಿಗಳ ಮೂಲಭೂತ ಸಾಧನೆ (ಫ‌ಂಡಮೆಂಟಲ್‌) ಮತ್ತು ತಾಂತ್ರಿಕ ಅಂಶಗಳ ಕುರಿತು ಅಧ್ಯಯನ ಮಾಡುತ್ತಿರಬೇಕು.

ಚೈನ್‌ ರಿಯಾಕ್ಷನ್‌
ಒಂದು ಶೇರಿನ ಅಥವಾ ಮಾರುಕಟ್ಟೆಯ ಬೆಲೆ ಕುಸಿಯಲು ಆ ಕಂಪೆನಿಯ ಅಥವಾ ದೇಶದ ಪರಿಸ್ಥಿತಿಯೇ ಕಾರಣವಾಗಬೇಕು ಎಂದೇನೂ ಇಲ್ಲ. ಇಂದಿನ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲಾ ಮಾರುಕಟ್ಟೆಗಳೂ ಒಂದಕ್ಕೊಂದು ಥಳುಕು ಹಾಕಿಕೊಂಡಿವೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಘಟಿಸಿದ ಘಟನೆಯ ಪರಿಣಾಮ ಇನ್ಯಾವುದೋ ಮೂಲೆಯಲ್ಲಿರುವ ದೇಶದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು. ಇದರಿಂದಾಗಿ ನಮ್ಮ ದೇಶದ ಮಾರುಕಟ್ಟೆ ಹಾಗೂ ನಮ್ಮ ಶೇರುಗಳು ಕೂಡಾ ಬೆಲೆ ಕಳಕೊಳ್ಳಬಹುದು. ಹೀಗಾಗಿ, ಅಂತಾರಾಷ್ಟ್ರೀಯ ವಿದ್ಯಮಾನಗಳ ಮೇಲೂ ಗಮನವಿಡಬೇಕು.

ತಾಳ್ಮೆ ಇರಬೇಕು
ಯಾವುದೇ ಕಾರಣಕ್ಕೂ ಒಂದು ಶೇರಿನ ಬಗ್ಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಬಾರದು. ಶೇರು ಎನ್ನುವುದು ಹೂಡಿಕೆ ಮಾತ್ರ. ಅದು ಕೇವಲ ಲಾಭ ತಂದುಕೊಡುವ ಮಾರ್ಗ ಮಾತ್ರ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಕೇವಲ ಭಾವನಾತ್ಮಕ ಕಾರಣಕ್ಕಾಗಿ ಅನಿಲ್‌ ಅಂಬಾನಿ ಅವರ ಸಂಸ್ಥೆಯ ಶೇರುಗಳನ್ನು ಕಾಪಿಡುತ್ತಾ ಬಂದವರು ಇವತ್ತು ನಿರಾಶರಾಗಿದ್ದಾರೆ. ಶೇರು ಯಾವ ಉದ್ದಿಮೆ ಅಥವಾ ಕ್ಷೇತ್ರಕ್ಕೆ ಸೇರಿದ್ದು ಎನ್ನುವುದು ಬಹಳ ಮುಖ್ಯ. ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಬೇರೆ ಬೇರೆ ಉದ್ದಿಮೆಗಳ ಏರಿಳಿತ, ಒಂದು ಸಹಜ ಪ್ರಕ್ರಿಯೆ. ನಿಮ್ಮ ಶೇರು ಯಾವ ಉದ್ದಿಮೆಗೆ ಸೇರಿದೆಯೋ ಅದರ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾ ಇರಬೇಕು. ಯಾವುದೇ ರೀತಿಯ ಇಳಿತ ಕಂಡು ಬಂದಲ್ಲಿ ಶೇರನ್ನು ಮಾರಿ ಬಿಡುವುದು ಒಳ್ಳೆಯದು. ಆದರೆ, ತಾಳ್ಮೆ ಮುಖ್ಯವಾಗಿ ಇರಬೇಕಾದ ಅಂಶ. ಈ ದಿನ ಇಳಿದಿರುವ ಬೆಲೆ ನಾಳೆಯೇ ಏರಬಹುದು. ಹಾಗಾಗಿ ಮಾರುಕಟ್ಟೆಯ ಅಧ್ಯಯನದ ಮೂಲಕ ಆ ಶೇರಿನ ಸ್ವಭಾವವನ್ನು ಅರಿತಿದ್ದರೆ ಒಳ್ಳೆಯದು.

ಕುಸಿತದ ಸೂಚನೆ ಸಿಗಲಿ
ಗಮನಿಸಬೇಕಾದ ವಿಚಾರ ಎಂದರೆ ಸಮಗ್ರ ಆರ್ಥಿಕತೆಗೆ ಸಂಬಂಧಪಟ್ಟದ್ದು. ರಿಸೆಶನ್‌(ಆರ್ಥಿಕ ಹಿಂಜರಿಕೆ), ಡಿಪ್ರಶನ್‌ (ಆರ್ಥಿಕ ಕುಸಿತ)ನಂಥ ವಿದ್ಯಮಾನಗಳು ಇಡೀ ಶೇರು ಮಾರುಕಟ್ಟೆಯನ್ನೇ ಕುಸಿಯುವಂತೆ ಮಾಡುತ್ತವೆ. ಅಂಥ ಸಮಯ ಬರುವ ಮುನ್ನವೇ ಮುನ್ಸೂಚನೆಯನ್ನು ಅರಿತು, ಇರುವ ಶೇರುಗಳಲ್ಲಿ ಭಾಗಶಃ ಅಥವಾ ಪೂರ್ತಿ ಮಾರುವುದು ಒಳ್ಳೆಯದು.

-  ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.