ನಡೆಯುತ್ತಿದೆ “ಫ್ಯಾಮಿಲಿ ಟ್ಯಾಗಿಂಗ್’; ಒಂದೇ ಪಟ್ಟಿಗೆ ಮನೆಮಂದಿ
ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ
Team Udayavani, Dec 2, 2019, 5:00 AM IST
ಬಜಪೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಗಿಯುತ್ತ ಬಂದಿದ್ದು, ಈ ಬಾರಿ ಆ್ಯಪ್ ಮೂಲಕ ಬೂತ್ ಮಟ್ಟದಲ್ಲಿ ಫ್ಯಾಮಿಲಿ ಟ್ಯಾಗಿಂಗ್ ನಡೆಸಲಾಗುತ್ತಿದೆ. ಒಂದು ಕುಟುಂಬದ ಮತದಾರ ರನ್ನು ಮತದಾರರ ಪಟ್ಟಿಯಲ್ಲಿ ಒಂದೆಡೆ ತರುವ ಉದ್ದೇಶ ಈ “ಫ್ಯಾಮಿಲಿ ಟ್ಯಾಗಿಂಗ್’ನದ್ದು.
ಪಟ್ಟಿ ಪರಿಷ್ಕರಣೆಯನ್ನು ಬಿಎಲ್‌ಒಗಳು ಮತ್ತು ಸಾರ್ವಜನಿಕರು ಆ್ಯಪ್ ಮೂಲಕ ಸ್ವತಃ ಮಾಡಲು ಅವಕಾಶ ಇದೆ. ಆದರೆ ಫ್ಯಾಮಿಲಿ ಟ್ಯಾಗಿಂಗ್ ಬಿಎಲ್‌ಒಗಳು ಮಾತ್ರ ಮಾಡಲು ಸಾಧ್ಯ. ಇವೆರಡಕ್ಕೂ ನ. 30 ಕೊನೆಯ ದಿನ.
ಫ್ಯಾಮಿಲಿ ಟ್ಯಾಗಿಂಗ್‌ಗೆ ಹೆಚ್ಚು ವಿವರಗಳನ್ನು ಆ್ಯಪ್‌ಗೆ ಲಿಂಕ್ ಮಾಡ ಬೇಕಿದ್ದು, ಕೆಲಸದ ಒತ್ತಡ ದಿಂದಾಗಿ ಬಿಎಲ್‌ಒಗಳಿಗೆ ಅವಧಿಯೊಳಗೆ ಪೂರ್ಣ ಸಾಧ್ಯವಾಗಿಲ್ಲ.
ದ.ಕ.ದ ಒಟ್ಟು 17,09,923 ಮತದಾರರಲ್ಲಿ 12,78,941 ಮತದಾರರ ಕುಟುಂಬ ಟ್ಯಾಗಿಂಗ್ ಬಾಕಿ ಉಳಿದಿದ್ದು, 1,23,786 ಕುಟುಂಬಗಳ 4,30,982 ಸದಸ್ಯರ ಟ್ಯಾಗಿಂಗ್ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯ ಒಟ್ಟು 10,02,880 ಮತದಾರರಲ್ಲಿ 5,36,096 ಮಂದಿಯ ಟ್ಯಾಗಿಂಗ್ ಬಾಕಿ ಇದೆ. 1,22,288 ಕುಟುಂಬಗಳ 4,66,784 ಕುಟುಂಬ ಸದಸ್ಯ ಮತದಾರರ ಟ್ಯಾಗಿಂಗ್ ಪೂರ್ಣಗೊಂಡಿದೆ.
ಫ್ಯಾಮಿಲಿ ಟ್ಯಾಗಿಂಗ್ ಎಂದರೇನು?
ಪಟ್ಟಿಯಲ್ಲಿ ಕುಟುಂಬದ ಯಜಮಾನ ಮತ್ತು ಸದಸ್ಯ ಮತದಾರರ ಹೆಸರು ಕ್ರಮಸಂಖ್ಯಾನು ಗತವಾಗಿ ಜತೆಯಾಗಿ ಬರುವಂತೆ ಮಾಡುವುದು ಫ್ಯಾಮಿಲಿ ಟ್ಯಾಗಿಂಗ್ ಉದ್ದೇಶ. ಮುಂದೆ ಮತ ದಾರರ ಸಂಖ್ಯೆ ಹೆಚ್ಚಿ ಬೂತ್ ವಿಭಾಗವಾದರೆ ಯಜಮಾನ ಮತ್ತು ಸದಸ್ಯರು ಬೇರೆಬೇರೆ ಬೂತ್‌ಗಳಲ್ಲಿ ಹಂಚಿಹೋಗುವ ಸಾಧ್ಯತೆ ಇದೆ. ಆದರೆ ಫ್ಯಾಮಿಲಿ ಟ್ಯಾಗಿಂಗ್‌ನಿಂದ ಬೂತ್ ವಿಭಾಗವಾದರೂ ಮನೆಮಂದಿಯೆಲ್ಲ ಒಂದೇ ಬೂತ್‌ನ ಲ್ಲಿರಲು ಸಾಧ್ಯವಾಗುತ್ತದೆ. ಮತದಾನ ಕೇಂದ್ರದಲ್ಲಿ ಪ್ರಥಮ ಮತದಾನ ಅಧಿಕಾರಿಗೆ ಪಟ್ಟಿಯಲ್ಲಿ ಹೆಸರನ್ನು ಹುಡುಕುವುದಕ್ಕೂ ಸುಲಭವಾಗಿ ಮತದಾನ ಪ್ರಕ್ರಿಯೆ ವೇಗವಾಗಬಹುದು.
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಫ್ಯಾಮಿಲಿ ಟ್ಯಾಗಿಂಗ್ ಮಾಡಲಾಗುತ್ತಿದೆ. ಬಿಎಲ್‌ಒಗಳು ಆ್ಯಪ್‌ನಲ್ಲಿ ಲಿಂಕ್ ಮಾಡುತ್ತಿದ್ದಾರೆ. ಒಂದು ಹಂತದ ಕಾರ್ಯ ನ. 30ರಂದು ಪೂರ್ಣಗೊಂಡಿದ್ದು, ಮುಂದುವರಿಯಲಿದೆ.
- ರವಿಚಂದ್ರ ನಾಯಕ್ ಮಂಗಳೂರು ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಾವಣೆ ಅಧಿಕಾರಿ
-ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.