ಕಸ ವಿಲೇವಾರಿಗೆ ಇಂದೋರ್ ಮಾದರಿ
Team Udayavani, Dec 2, 2019, 11:36 AM IST
ಬೆಂಗಳೂರು: ನಗರದ ತ್ಯಾಜ್ಯ ವಿಲೇವಾರಿಗೆ ಮಧ್ಯ ಪ್ರದೇಶದ ಇಂದೋರ್ ಮಾದರಿ ಅಳವಡಿಸಿಕೊಳ್ಳಲುಬಿಬಿಎಂಪಿ ಸದ್ದಿಲ್ಲದೆ ಸಿದ್ಧತೆನಡೆಸಿಕೊಳ್ಳುತ್ತಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಇಂದೋರ್ ಕಳೆದ ನಾಲ್ಕು ವರ್ಷದಿಂದ ಸ್ವತ್ಛ ನಗರಿ ಪ್ರಶಸ್ತಿಗೆ ಪಾತ್ರವಾಗುತ್ತಿದ್ದು, ಈ ಮಾದರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಹೀಗಾಗಿ, ಅದೇಮಾದರಿ ಅಳವಡಿಕೆಗೆ ಬಿಬಿಎಂಪಿ ಮುಂದಾಗಿದೆ.
ಇಂದೋರ್ ಮಾದರಿ ಅಳವಡಿಸಿಕೆಗೆ ಈಗಾಗಲೇಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದ ವಿವಿಧೆಡೆಅಂದಾಜು 70ರಿಂದ 75 ಎಕರೆ ಭೂಮಿಯನ್ನು ವೇಸ್ಟ್ ಟು ಎನರ್ಜಿ ಘಟಕ ಸ್ಥಾಪನೆಗೆಂದು ಪಾಲಿಕೆ ನೀಡಿದೆ. ಅಲ್ಲದೆ, ಈ ಜಾಗದಲ್ಲಿ ವೇಸ್ಟು ಟು ಎನರ್ಜಿ ಸೇರಿ ವಿವಿಧ ಮಾದರಿಯ ಏಳು ಘಟಕಗಳನ್ನು ಸ್ಥಾಪಿಸುವ ಸಂಬಂಧ ಈಗಾಗಲೇ ಹಲವು ಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದಕ್ಕೆ ಸಹಿ ಹಾಕಿದೆ.
“ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಬೆಂಗಳೂರಿಗೆ ಕಡಿಮೆ ಅಂಕ ಬಂದಾಗ ಬಿಬಿಎಂಪಿ ಅಧಿಕಾರಿಗಳು ಇಂದೋರ್ ರೀತಿಯನಗರದೊಂದಿಗೆ ಬೆಂಗಳೂರನ್ನು ಹೋಲಿಕೆ ಮಾಡಿ ನೋಡಬಾರದು. ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ, ಇಂದೋರ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣಕ್ಕೂ ವ್ಯತ್ಯಾಸವಿದೆ. ಅಷ್ಟೇ ಅಲ್ಲ, ಬೆಂಗಳೂರಿನ ಜನಸಂಖ್ಯೆಗೆ ಹೋಲಿಸಿಕೊಂಡರೆ, ಇಂದೋರ್ ಏನೇನೂ ಅಲ್ಲ‘ ಎಂದು ಹಿಂದಿನ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಹಲವು ಅಧಿಕಾರಿಗಳು ಹೇಳಿದ್ದರು. ಆದರೆ, ಇದೀಗಬಿಬಿಎಂಪಿ ಇಂದೋರ್ ಮಾದರಿ ಅಳವಡಿಕೆಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಆದರೆ, ಇಂದೋರ್ ಹಾಗೂ ಬೆಂಗಳೂರಿನ ವಿಚಾರದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಯಲ್ಲಿ ಹಲವು ವ್ಯತ್ಯಾಸ ಇದೆ. ಇಂದೋರ್‌ನಲ್ಲಿ ಏಳು ವೇಸ್ಟ್ ಟು ಎನರ್ಜಿ ಘಟಕಗಳಿವೆ. ಇದರಿಂದ ಮಿಶ್ರ ತ್ಯಾಜ್ಯ ಸಾಗಿಸಿದರೂ ನಿಭಾಯಿಸುವ ಸಾಮರ್ಥ್ಯವಿದೆ. ಆದರೆ, ಬೆಂಗಳೂರಿನಲ್ಲಿ ಒಂದೇ ಒಂದು ವೇಸ್ಟ್ ಟು ಎನರ್ಜಿ ಘಟಕ ಕೂಡ ಇಲ್ಲ.
ಅಲ್ಲದೆ, ಇಂದೋರ್‌ಗೆ ಹೋಲಿಸಿದರೆ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಹೆಚ್ಚು. ಹೀಗಾಗಿ ಆ ಮಾದರಿ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.
ಆ ಮಾದರಿ ಮೇಲೆ ಒಲವೇಕೆ?: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಇದ್ದಾಗ ಹಸಿ ಮತ್ತು ಒಣ ಕಸಕ್ಕೆ ಪ್ರತ್ಯೇಕ ಟೆಂಡರ್ ಕರೆದು, ಗುತ್ತಿಗೆದಾರರನ್ನು ಅಂತಿಮಗೊಳಿಸಿತ್ತು. ಆದರೆ, ಟೆಂಡರ್ ಪ್ರಕ್ರಿಯಲ್ಲಿ ಮೀಸಲಾತಿ ನೀಡಿಲ್ಲ ಎಂದು ಕೆಲವು ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ, ಇಂದೋರ್ ಮಾದರಿ ಅಳವಡಿಕೆಗೆ ಒಲವು ತೋರಿಸುತ್ತಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್