ಬಾಹುಬಲಿ ಕನ್ನಡ ರಥಕ್ಕೆ ಚಾಲನೆ
Team Udayavani, Dec 2, 2019, 4:06 PM IST
ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ಮೈಸೂರಿಗೆ ಹೊಸದಾಗಿ ಸಂಚಾರ ಪ್ರಾರಂಭಿಸಿದ ರಾಜ್ಯ ರಸ್ತೆ ಸಾರಿಗೆಯ “ಬಾಹುಬಲಿ ಕನ್ನಡ ರಥ‘ಕ್ಕೆ ಘಟಕದ ವ್ಯವಸ್ಥಾಪಕ ಪಿ.ಬಿ.ನಾಗರಾಜು ಚಾಲನೆ ನೀಡಿದರು.
ನಿತ್ಯ ಬೆಳಗ್ಗೆ 7.45ಕ್ಕೆ ಚನ್ನರಾಯ ಪಟ್ಟಣದಿಂದ ಹೊರಡುವ ಬಾಹುಬಲಿಕನ್ನಡ ರಥದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಓದಲು ಕನ್ನಡದಿನಪತ್ರಿಕೆಯನ್ನು ವ್ಯವಸ್ಥೆಮಾಡಲಾಗುತ್ತದೆ. ದಿನವಹಿ ನಾಲ್ಕುಬಾರಿ ಮೈಸೂರು–ಚನ್ನರಾಯಪಟ್ಟಣಸಂಚಾರ ಮಾಡಲಿದೆ. ಬಸ್‌ನ ಎಲ್ಲಾ ಕಿಟಕಿಗಳಿಗೆ ಕನ್ನಡ ಸಾಹಿತಿಗಳ ಭಾವ ಚಿತ್ರವನ್ನು ಹಾಕಲಾಗಿದ್ದು, ಕನ್ನಡ ಪ್ರೇಮವನ್ನು ಚಾಲಕ ಯೋಗೇಶ್ ಮತ್ತು ನಿರ್ವಾಹಕ ಗುರು ತೋರಿದ್ದಾರೆ.
ಈಗಾಗಲೇ ಏಳು ದಿನ ಪ್ರಯೋಗಿಕವಾಗಿ ಸಂಚಾರ ಮಾಡಿ ನಿತ್ಯ 13 ರಿಂದ 16 ಸಾವಿರ ಹಣ ಸಂಗ್ರಹವಾಗುತ್ತಿದೆ.ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಶಾಶ್ವತವಾಗಿ ಸಂಚಾರ ಮಾಡಲು ಘಟಕವು ತೀರ್ಮಾನ ಮಾಡಿದೆ.
ಬಾಹುಬಲಿ ನಾಡಿನಿಂದ ಚಾಮುಂಡಿ ಬೀಡಿಗೆ ಎಂಬ ವಾಕ್ಯವನ್ನು ಬಸ್ ಮೇಲೆ ಹಾಕಲಾಗಿದ್ದು, ಸಾಹಿತಿ ಎಸ್.ಎಲ್. ಭೈರಪ್ಪ, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪು.ತಿ. ನರಸಿಂಹಾಚಾರ್, ಯು.ಆರ್.ಅನಂತಮೂರ್ತಿ,ಗಿರೀಶ್ ಕಾರ್ನಾಡ್, ಕುವೆಂಪು, ಹರಿಹರ, ಬಸವಣ್ಣ, ರಾಘವಾಂಕ, ಕುಮಾರವ್ಯಾಸ, ರನ್ನ, ಜನ್ನ, ಪೊನ್ನ, ಕೆ.ಎಸ್. ನರಸಿಂಹಸ್ವಾಮಿ ಚಿತ್ರಗಳು ಬಸ್ಸಿನಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.