ಚೊಚ್ಚಲ ಗರ್ಭಿಣಿಯರಿಗೆ ಮಾತೃವಂದನ ಯೋಜನೆ
Team Udayavani, Dec 3, 2019, 5:00 AM IST
ಸಾಂದರ್ಭಿಕ ಚಿತ್ರ
ಉಡುಪಿ/ ಮಂಗಳೂರು: ಚೊಚ್ಚಲ ಬಾರಿಗೆ ಗರ್ಭಿಣಿಯಾಗುವ ಮಹಿಳೆ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಪ್ರೋತ್ಸಾಹ ಧನ ರೂಪದಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಮಾತೃವಂದನ ಯೋಜನೆ ಜಾರಿಗೆ ತಂದಿದೆ. ಅರ್ಹ ತಾಯಂದಿರಿಗೆ ಮೂರು ಕಂತುಗಳಲ್ಲಿ 5 ಸಾವಿರ ರೂ.ಗಳನ್ನು ನೇರ ವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರೂ ಯೋಜನೆಯ ಪ್ರಯೋಜನ ಪಡೆಯಬಹುದು. ಕೇಂದ್ರ/ರಾಜ್ಯ ಸರಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಅವಕಾಶವಿಲ್ಲ.
ನೋಂದಣಿ ವಿಧಾನ
ಗರ್ಭಿಣಿಯರು ಸಮೀಪದ ಅಂಗನವಾಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೊದಲನೇ ಕಂತಿನ ಅನುದಾನ ಪಡೆಯಲು ತನ್ನ ಮತ್ತು ಪತಿಯ ಆಧಾರ್ ಪ್ರತಿ, ಮೊಬೈಲ್ ಸಂಖ್ಯೆ, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ, ಬ್ಯಾಂಕ್/ಅಂಚೆ ಕಚೇರಿಯ ವಿವರ ಗಳೊಂದಿಗೆ ನಿಗದಿತ ಅರ್ಜಿ ಭರ್ತಿ ಮಾಡಿ ನೀಡಬೇಕು. ಮೊದಲ ಹಂತ ದಲ್ಲಿ 1 ಸಾವಿರ ರೂ. ಪ್ರೋತ್ಸಾಹಧನ ಮಹಿಳೆಯ ಖಾತೆಗೆ ಜಮೆ ಆಗಲಿದೆ. ಗರ್ಭಿಣಿ ಆದ 150 ದಿನಗಳಲ್ಲಿ ಈ ಪ್ರೋತ್ಸಾಹ ಧನ ದೊರೆಯುತ್ತದೆ.
2ನೇ ಕಂತಿನ ಪ್ರೋತ್ಸಾಹ ಧನ ಪಡೆಯಲು ಕನಿಷ್ಠ ಒಂದು ಬಾರಿ ಆರೋಗ್ಯ ತಪಾಸಣೆ ನಡೆಸಿರಬೇಕು, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ ನೀಡಬೇಕು. ಗರ್ಭಿಣಿ ಆದ 180 ದಿನದಲ್ಲಿ 2 ಸಾವಿರ ಪ್ರೋತ್ಸಾಹಧನ ಜಮೆ ಆಗಲಿದೆ. 3ನೇ ಮತ್ತು ಕೊನೆಯ ಹಂತದ ಅನುದಾನ ಪಡೆಯಲು ಮಗುವಿನ ಜನನ ಪ್ರಮಾಣಪತ್ರ ಮತ್ತು ಮಗುವಿಗೆ ಚುಚ್ಚುಮದ್ದು ನೀಡಿರುವ ಮಾಹಿತಿಯೊಂದಿಗೆ ತಾಯಿ ಮತ್ತು
ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ ನೀಡಬೇಕು. 2 ಸಾವಿರ ರೂ. ಪ್ರೋತ್ಸಾಹ ಧನ ಲಭಿಸಲಿದೆ. ಜನನಿ
ಸುರಕ್ಷಾ ಯೋಜನೆಯಡಿ 1 ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹ ಧನವೂ ದೊರೆಯಲಿದೆ.
ಡಿ. 2ರಿಂದ 8ರ ವರೆಗೆ ಮಾತೃ ವಂದನ ಸಪ್ತಾಹ ನಡೆಯುತ್ತಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಗರ್ಭಿಣಿಯರ ನೋಂದಣಿ ಕಾರ್ಯ ನಡೆಯುತ್ತಿದೆ. ಗರ್ಭಿಣಿಯರು ತಮ್ಮ ಸಮೀಪದ ಅಂಗನವಾಡಿಗಳಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.