ಪುಟ್ಟಣ್ಣ ಕಣಗಾಲ್ ಕುಟುಂಬಕ್ಕೆ ಕಥಾ ಸಂಗಮ ಶೋ
Team Udayavani, Dec 3, 2019, 1:04 PM IST
ರಿಷಭ್ ಶೆಟ್ಟಿ ಅವರ ಹೊಸ ಕನಸು “ಕಥಾ ಸಂಗಮ‘ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್ 06 ರಂದು ತೆರೆಕಾಣುತ್ತಿದೆ. ಬಿಡುಗಡೆಗೂ ಮುನ್ನ ರಿಷಭ್ ಈ ಚಿತ್ರವನ್ನು ಕನ್ನಡ ಚಿತ್ರರಂಗದ “ಚಿತ್ರಬ್ರಹ್ಮ‘ ಖ್ಯಾತಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕುಟುಂಬ ಹಾಗೂ ಪುಟ್ಟಣ್ಣ ಅವರ ಜೊತೆ ಕೆಲಸ ಮಾಡಿದ ಕನ್ನಡ ಚಿತ್ರರಂಗದಹಿರಿಯ ಕಲಾವಿದರಿಗೆ ವಿಶೇಷ
ಪ್ರದರ್ಶನ ಆಯೋಜಿಸಿ, ಅವರ ಅನಿಸಿಕೆ, ಅಭಿಪ್ರಾಯ ಪಡೆದಿದ್ದಾರೆ.
ಭಾನುವಾರ ಸಂಜೆ ಆಯೋಜಿಸಿದ್ದ “ಕಥಾ ಸಂಗಮ‘ ಪ್ರದರ್ಶನಲ್ಲಿ ಪುಟ್ಟಣ್ಣ ಕಣಗಾಲ್ ಕುಟುಂಬ ಹಾಗೂ ಹಿರಿಯಕಲಾವಿದ ಶಿವರಾಂ, ಜೈ ಜಗದೀಶ್, ಭಗವಾನ್ ಸೇರಿದಂತೆ ಅನೇಕರು ಭಾಗವಹಿಸಿ, ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.ಅಂದಹಾಗೆ, ರಿಷಭ್ ಭಾನುವಾರ (ಡಿ.1) ರಂದು ಶೋ ಆಯೋಜಿಸಲು ಕಾರಣ ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ತಮ್ಮ ಸಿನಿಮಾ ಪ್ರದರ್ಶನ ಆಯೋಜಿಸಿದ್ದ ರಿಷಭ್‌ಗೆ ಪುಟ್ಟಣ್ಣ ಕುಟುಂಬದಿಂದ ಗಿಫ್ಟ್ವೊಂದು ಸಿಕ್ಕಿದೆ. ಅದು ಎಂದೂ ಮರೆಯದ ಉಡುಗೊರೆ. ಪುಟ್ಟಣ್ಣ ಕಣಗಾಲ್ ಅವರು ಧರಿಸುತ್ತಿದ್ದ ಟೈವೊಂದನ್ನು ರಿಷಭ್‌ಗೆ ಪುಟ್ಟಣ್ಣ ಕುಟುಂಬ ನೀಡಿದೆ. ಇದರಿಂದ ರಿಷಭ್‌ಖುಷಿಯಾಗಿದ್ದಾರೆ. “ನಾನು ಯಾವತ್ತೂ ಗಿಫ್ಟ್ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವನಲ್ಲ.ಆದರೆ, ಈ ಬಾರಿ ಸಿಕ್ಕಿರುವ ಗಿಫ್ಟ್ ನನ್ನಜೀವನದಲ್ಲಿ ಮರೆಯುವಂಥದ್ದಲ್ಲ‘ ಎಂದಿದ್ದಾರೆ.
ಇನ್ನು, “ಕಥಾಸಂಗಮ‘ ಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್. 1976 ರಲ್ಲಿಬಂದ ಈ ಚಿತ್ರ ಆ ದಿನಗಳಲ್ಲೇ ವಿಭಿನ್ನ ಪ್ರಯೋಗದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.ಮೂರು ಕಥೆ ಇಟ್ಟುಕೊಂಡು ಮಾಡಿದ ಆ ಚಿತ್ರ ಇಂದಿಗೂಎವರ್‌ಗ್ರೀನ್ ಎನಿಸಿಕೊಂಡಿದೆ. ಈಗ ರಿಷಭ್ ಶೆಟ್ಟಿ ಮತ್ತು ತಂಡ ಸೇರಿ “ಕಥಾಸಂಗಮ‘ ಹೆಸರಿನ ಮತ್ತೂಂದು ಹೊಸ ಚಿತ್ರಮಾಡಿದೆ. ಇಲ್ಲಿ ಏಳು ಕಥೆ ಇಟ್ಟುಕೊಂಡು ಪ್ರಯೋಗಮಾಡಿದ್ದಾರೆ. “ಕಥಾಸಂಗಮ‘ದ ಏಳು ಕಥೆಗಳಿಗೂ ಕಿರಣ್ ರಾಜ್. ಕೆ, ಶಶಿಕುಮಾರ್. ಪಿ, ಚಂದ್ರಜಿತ್ ಬೆಳ್ಳಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್. ಎ, ಕರಣ್ ಅನಂತ್, ಜಮದಗ್ನಿ ಮನೋಜ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ರಿಷಭ್ ಶೆಟ್ಟಿ, ಹರಿಪ್ರಿಯಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಕಿಶೋರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಬಾಲಾಜಿ ಮನೋಹರ್ ಇತರರು ಒಂದೊಂದು ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.