ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
Team Udayavani, Dec 3, 2019, 4:25 PM IST
ತಾಳಿಕೋಟೆ: ಪಟ್ಟಣದ ಸರಕಾರಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿಯ ಅವ್ಯವಸ್ಥೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ದೇವರಹಿಪ್ಪರಗಿ ರಸ್ತೆಯಲ್ಲಿರುವ ಜಿಪಂ, ಸಮಾಜ ಕಲ್ಯಾಣಇಲಾಖೆ ಸರಕಾರಿ ಮೆಟ್ರಿಕ್ ನಂತರ ಹಾಸ್ಟೆಲ್ ನಲ್ಲಿರುವ ನೂರಾರು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆಗಿಳಿದರು. ಹಾಸ್ಟೆಲ್ ನಲ್ಲಿಯ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳುನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ ಅವರಿಗೆ ದೂರವಾಣಿ ಮೂಲಕಹಾಸ್ಟೆಲ್‌ನಲ್ಲಿಯ ಅವ್ಯವಸ್ಥೆ ಬಿಚ್ಚಿಟ್ಟರು. ಸ್ಥಳಕ್ಕೆ ಆಗಮಿಸಿದ ಕಟ್ಟಿಮನಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಆರ್. ಉಂಡಿಗೇರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ವಿವರಿಸಿ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾ ವಿಷಯ ಅರಿತ ಅಧಿಕಾರಿ ಉಂಡಿಗೇರಿ ಹಾಸ್ಟೆಲ್‌ಗೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಲಿಸಿದರು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗುವ ಆಹಾರ ಧಾನ್ಯಗಳು ಹಾಸ್ಟೆಲ್ ವಾರ್ಡನ್ ನಮಗೆ ನೀಡುತ್ತಿಲ್ಲ. ದಿನನಿತ್ಯ ಒಂದು ಹೊತ್ತು ಊಟ ಸಿಗುವುದೇ ದುಸ್ಥರವೆಂಬಂತಾಗಿದೆ. ಪ್ರತಿದಿನ ಕೇವಲ ಅನ್ನ ಬೇಯಿಸಿ ಹಾಕಲಾಗುತ್ತಿದೆ ಎಂದರು.
ಶುದ್ಧ ಕುಡಿಯುವ ನೀರು ಇರದಿದ್ದಕ್ಕೆ ಸುಮಾರು ವಾರ ಶೇಖರಿಸಿಟ್ಟ ನೀರಿನಲ್ಲಿ ಹುಳಗಳು ಆಗಿರುತ್ತವೆ. ಅಂತಹ ನೀರನ್ನು ಸೇವಿಸಬೇಕಾಗಿದೆ. ಹಾಸ್ಟೆಲ್‌ನಲ್ಲಿಯ ಇಕ್ಕಟ್ಟಿನ ಜಾಗದಿಂದ ಶೌಚಾಲಯದಲ್ಲಿ, ಸ್ನಾನ ಕೊಣೆಯಲ್ಲಿ ಮಲಗುತ್ತ ಓದುತ್ತದ್ದೇವೆ. ವಾರ್ಡನ್ ಎಸ್.ಎಂ. ಬಾಸಗಿ ಅವರನ್ನು ಬದಲಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಎನ್.ಆರ್. ಉಂಡಿಗೇರಿ, ವಾರ್ಡನ್ ಎಸ್.ಎಂ. ಬಾಸಗಿ ನಡೆದುಕೊಳ್ಳುತ್ತಿರುವ ರೀತಿ ಮತ್ತು ದಿನನಿತ್ಯ ಊಟಕ್ಕಾಗಿ ನೀಡುತ್ತಿರುವದೇನು ಎಂಬ ಕುರಿತು ಲಿಖೀತವಾಗಿ ನನಗೆ ಕೊಡಿ, ವಾರ್ಡನ್ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.