ಬಟ್ಟೆಗಳು ಬಾಡಿಗೆಗೆ ದೊರೆಯುತ್ತವೆ!
Team Udayavani, Dec 4, 2019, 4:50 AM IST
ಫ್ಯಾಷನ್ ಉದ್ಯಮದ ಹೊಸ ಟ್ರೆಂಡ್
ಮುಖ ನೋಡಿ ಮಣೆ ಹಾಕಿದರು ಎಂಬ ಮಾತಿದೆ. ಆದರೆ, ಈಗ ಧರಿಸಿರುವ ಬಟ್ಟೆ ನೋಡಿ ವ್ಯಕ್ತಿಯ ಘನತೆ- ಗೌರವವನ್ನು ಅಳೆಯುವ ಕಾಲ. ಹಾಗಾಗಿಯೇ ಎಲ್ಲರೂ ದುಬಾರಿ ಬೆಲೆಯ ಬ್ರ್ಯಾಂಡೆಡ್ ಬಟ್ಟೆಗಳನ್ನು ಖರೀದಿಸುತ್ತಾರೆ. ಸಾಧ್ಯವಾಗದಿದ್ದರೆ ಅಂಥ ಬಟ್ಟೆಗಳನ್ನು ಬಾಡಿಗೆಗೆ ಪಡೆದಾದರೂ ಧರಿಸುತ್ತಿದ್ದಾರೆ…
ಯಾವೊªà ಇದು, ಓಬಿರಾಯನ ಕಾಲದ ಡ್ರೆಸ್ ಹಾಕ್ಕೊಂಡು ಬಂದಿದ್ದೀಯ? ಇದೇನೇ ಇದು, ಅಜ್ಜಿ ಸೀರೆ ಸೆಂಟಿಮೆಂಟಾ? ಹಳೇ ಸೀರೆ ಉಟ್ಕೊಂಡು ಬಂದಿದ್ದಿಯಲ್ಲೇ. ಹೀಗೆ, ಈಗಿನ ಯುವ ಸಮೂಹ ತಮ್ಮ ಗೆಳೆಯರ ಬಳಗದಲ್ಲಿ ಕಾಲೆಳೆಯುತ್ತಾ ಇದ್ದರೆ, ಮತ್ತೂಂದು ಕಡೆಯಿಂದ ಅದೇ ಈಗಿನ ಫ್ಯಾಷನ್ ಟ್ರೆಂಡ್ ಆಗಿಬಿಟ್ಟಿರುತ್ತದೆ. ಫ್ಯಾಷನ್ ಉದ್ಯಮ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತೆ. ಓಬಿರಾಯನ ಕಾಲದ ಟ್ರೆಂಡ್ ಅಂತ ಯಾವುದನ್ನ ಅಂದ್ಕೊಂತೀವೋ ಅದು ಚಕ್ಕಂತ ಎದ್ದು ಕೂತಿರುತ್ತೆ. ಫ್ಯಾಷನ್ ಗೂ ನಮ್ಮ ಸಂಸ್ಕೃತಿಗೂ ಭಾವನಾತ್ಮಕ ನಂಟಿರೋದೇ ಇದಕ್ಕೆ ಪ್ರಮುಖ ಕಾರಣ.
ಪತ್ರಿಕೆ, ನಿಯತಕಾಲಿಕ, ಟಿ.ವಿ. ಮಾಧ್ಯಮಗಳಲ್ಲಿ ಅದೆಷ್ಟೇ ಟ್ರೆಂಡ್ ಬದಲಾಗುತ್ತಿದ್ದರೂ, ಜನ ಅವರದ್ದೇ ಆದ ಔಟ್‌ಫಿಟ್ ಧರಿಸಿ, ಅದರೊಂದಿಗಿನ ಭಾವನೆಗಳನ್ನು ಜತನವಾಗಿ ಕಾಯ್ದುಕೊಂಡಿರ್ತಾರೆ. ನಮ್ಮ ದೇಶದ ವಿನ್ಯಾಸಗಳು ಯಾವತ್ತಿಗೂ ಯೌವನವನ್ನು ಕಾಯ್ದುಕೊಂಡು ಬಂದಿರೋದೇ ಅದಕ್ಕೆ ಕಾರಣ. ಕೇವಲ 20-25 ವರ್ಷಗಳ ಹಿಂದೆ ನಮ್ಮಲ್ಲಿ ಮೊದಲ ಪ್ರೊಫೆಷನಲ್ ಫ್ಯಾಷನ್ ಶೋ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಉಡುಪಿನ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳಾಗಿದ್ರೂ, ಜನ ಮಾತ್ರ ಹಳೆಯ ಜಮಾನದ ವಿನ್ಯಾಸಗಳಿಗೆ ಮಾರು ಹೋಗೋದು ನಡೆದೇ ಇದೆ.
ಸಿನಿಮಾ ಉದ್ಯಮದಲ್ಲೂ ಓಲ್ಡ್ ಈಸ್ ಗೋಲ್ಡ್!
ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್ ಹೀಗೆ ಆಯಾ ಪ್ರಾದೇಶಿಕತೆಯ ಸಿನಿಮಾ ಉದ್ಯಮದಲ್ಲಿ 60-70ರ ದಶಕದ ಸಾಧನಾ ಕಟ್, ಮೊಘಲ್-ಎ-ಅಝಾಮ್ ನ ಅನಾರ್ಕಲಿ, ಪೊಗದಸ್ತಾದ ಮೀಸೆ ಮಾಮಣ್ಣಗಳ ಸ್ಟೆçಲು, ಬೆಲ್ ಬಾಟಮ್ ಪ್ಯಾಂಟು, ಒಂದಲ್ಲ ಒಂದು ಟೈಮಲ್ಲಿ ರಾರಾಜಿಸುತ್ತದೆ. ಬೆಲ್ ಬಾಟಮ್ ಪ್ಯಾಂಟ್ ಈಗ ಪಲಾಝೊà ಅನ್ನೋ ಹೆಸರಲ್ಲಿ ಮಾರುಕಟ್ಟೆಯನ್ನು ಆಳುತ್ತಿವೆ. ಹಿಂದಿಯ ಬಾಬ್ಬಿ ಸಿನಿಮಾ ನಂತರ ಪೋಲ್ಕಾ ಪ್ರಿಂಟ್ಸ್, ಬಾಬ್ಬಿ ಪ್ರಿಂಟ್ ಅಂತ ಫೇಮಸ್ಸಾಗಿತ್ತು. ಈಗ ಅದು ಮತ್ತೆ ಮಾರ್ಕೆಟ್ ನಲ್ಲಿ ಯುವ ಜನರನ್ನು ಆಕರ್ಷಿಸುತ್ತಿದೆ. ಜೀನತ್ ಅಮಾನ್‌ಳ ಹಿಪ್ಪಿ ಚಿಕ್ ಲುಕ್, ಕ್ಯಾಟ್ ಐ ಮೇಕಪ್ ಈಗಲೂ ಬಹು ಬೇಡಿಕೆಯಲ್ಲಿವೆ! ಜಾಗತಿಕ ಫ್ಯಾಷನ್ ಮಾರುಕಟ್ಟೆಯ ಮೇಲೂ ಭಾರತೀಯ ಸಾಂಪ್ರದಾಯಿಕ ಉಡುಗೆ ವಿನ್ಯಾಸಗಳು ಪ್ರಭಾವ ಬೀರಿರುವುದು ಅನೇಕ ಕಡೆಗಳಲ್ಲಿ ಕಂಡು ಬರುತ್ತದೆ.
ಬಟ್ಟೆಯೂ ಬಾಡಿಗೆಗ ಸಿಗುತ್ತೆ
ಹೆಸರಾಂತ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಆದ್ರೆ, ಅವರು ವಿನ್ಯಾಸ ಮಾಡಿರುವ ಬಟ್ಟೆಗಳನ್ನು ಮದುವೆ-ರಿಸೆಪ್ಷನ್‌ಗೆ ಧರಿಸುವ ಕನಸು ಕಾಣೋದು ಕೂಡ ಅನೇಕರಿಗೆ ಮರೀಚಿಕೆಯೇ. ಯಾಕೆಂದರೆ, ಆತ ಡಿಸೈನ್ ಮಾಡುವ ಬಟ್ಟೆಗಳ ಬೆಲೆ ಲಕ್ಷಾಂತರ ರೂಪಾಯಿ ಇರುತ್ತದೆ. ಅಷ್ಟೊಂದು ಬೆಲೆ ಭರಿಸಲು ಸಾಧ್ಯವಿಲ್ಲ ಎಂಬುದು ಹಲವರ ಮಾತು. ಆದ್ರೆ ಈಗ ದುಬಾರಿ ಬೆಲೆಯ ಬಟ್ಟೆ ಹಾಗೂ ಆಭರಣಗಳನ್ನ ಸುಲಭವಾಗಿ, ಕೈಗೆಟಕುವ ಬೆಲೆಯಲ್ಲಿ ಕೊಂಡು ಧರಿಸಬಹುದು. ಆದ್ರೆ, ಇಲ್ಲಿ ಸಣ್ಣ ಬದಲಾವಣೆ ಅಂದ್ರೆ ಅದು ಕೊಳ್ಳೋದು ಬಾಡಿಗೆಗೆ..! ಸಬೀನಾ ಪುರಿ, ರೀನಾ ಢಾಕಾ ಹಾಗೂ ಸಂಚಿತ್ ಬಾವೇಜಾ ಎಂಬುವರು ಸೇರಿ ಶುರು ಮಾಡಿದ ಉದ್ಯಮ ಈಗ ಭಾರೀ ಜನಪ್ರಿಯತೆ ಪಡೆಯುತ್ತಿದೆ. ದುಬಾರಿ ಲೆಹೆಂಗಾ, ಗೌನ್, ಡಿಸೈನರ್ ಕುರ್ತಾ… ಹೀಗೆ, ಯಾವುದೇ ಕಾರ್ಯಕ್ರಮಗಳಿಗೆ ಉಡುಪು ಬೇಕಾದರೂ ಬಾಡಿಗೆಗೆ ಪಡೆಯುವ ವ್ಯವಸ್ಥೆ ಇದು. ಇದು ಈಗೀಗ ದೆಹಲಿ, ಮುಂಬೈ ಸೇರಿದಂತೆ ಬೆಂಗಳೂರಲ್ಲೂ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ವೀಕೆಂಡ್ ಪಾರ್ಟಿಗಳಿಗೂ ಈಗ ಬಾಡಿಗೆ ಬಟ್ಟೆ ಹಾಕ್ಕೊಂಡು ಹೋಗೋದು ಖಯಾಲಿಯಾಗಿದೆ.
ಬಟ್ಟೆ ನೋಡಿ ಗೌರವ ಕೊಡ್ತಾರೆ!
ಇತ್ತೀಚಿನ ದಿನಗಳಲ್ಲಿ ಧರಿಸಿರುವ ಬಟ್ಟೆ ನೋಡಿ ಮನ್ನಣೆ ಕೊಡುವುದು ರೂಢಿ. ದುಬಾರಿ ಬೆಲೆಯ ಬಟ್ಟೆ ಧರಿಸಿದರೆ, ಗೌರವವೂ ಹೆಚ್ಚು. ಅದು ಯಾವುದೇ ಮದುವೆಯಲ್ಲಿ ಇರಬಹುದು ಅಥವಾ ವೀಕೆಂಡ್ ಪಾರ್ಟಿಯಲ್ಲಿ ಇರಬಹುದು. ಜನ ಆಕರ್ಷಿತರಾಗೋದೇ ನಿಮ್ಮ ಬಟ್ಟೆ ನೋಡಿ. ಹಾಗಂತ ಹೆಚ್ಚು ದುಡ್ಡು ಕೊಟ್ಟು ಉಡುಪನ್ನು ಖರೀದಿ ಮಾಡಿದ್ರೆ ಎಷ್ಟು ಸಲ ಹಾಕೋಕಾಗುತ್ತದೆ? ಒಂದೆರಡು ಬಾರಿ ಹಾಕಿದ ತಕ್ಷಣ ಬೋರಾಗಿಬಿಡುತ್ತದೆ. ಹಾಗಾಗಿ ಉಡುಪುಗಳನ್ನು ಬಾಡಿಗೆಗೆ ಪಡೆಯುವುದು ಒಳ್ಳೆಯ ಆಯ್ಕೆ. ಅಯ್ಯೋ, ಇದೇನಪ್ಪಾ… ಹಾಕುವ ಬಟ್ಟೆಗಳನ್ನೂ ಬಾಡಿಗೆಗೆ ಪಡೆಯೋದಾ ಅನ್ನಬೇಡಿ. ಈಗ ಅದೇ ಹೊಸ ಟ್ರೆಂಡ್. ಎಲ್ಲಿಯವರೆಗೂ ದುಬಾರಿ ಉಡುಪುಗಳ ಬಗ್ಗೆ ಕ್ರೇಝ್ ಇರುತ್ತದೋ, ಅಲ್ಲಿವರೆಗೂ ಇಂಥ ಹೊಸ ಹೊಸ ವ್ಯವಹಾರಗಳು ಹುಟ್ಟು ಪಡೆದು ಮಾರುಕಟ್ಟೆಯನ್ನು ಆಳುತ್ತಿರುತ್ತವೆ.
ಕೈ ತುಂಬಾ ಲಾಭ
ಅಂದಹಾಗೆ, ಈ ಬಟ್ಟೆ ಬಾಡಿಗೆ ಉದ್ಯಮ ಈಗ ಲಾಭದಾಯಕವಾಗಿ ನಡೀತಿದೆ. ಬಟ್ಟೆಯನ್ನು ಬಾಡಿಗೆಗೆ ಕೊಡೋ ಮಾರ್ಕೆಟ್ 2017ರಲ್ಲಿ 1,013 ಮಿಲಿಯನ್ ಡಾಲರ್ ಬೆಲೆ ಹೊಂದಿದ್ರೆ, 2023ರ ಹೊತ್ತಿಗೆ 1,856 ಮಿಲಿಯ ಡಾಲರ್ ಲಾಭ ಮಾಡುವ ನಿರೀಕ್ಷೆ ಇದೆ. ಭಾರತದಲ್ಲಿ ಈಗಾಗಲೇ ಡಜನ್‌ಗಟ್ಟಲೆ ಬಾಡಿಗೆ ಉಡುಪುಗಳ ಸ್ಟಾರ್ಟ್‌ಅಪ್ ತಲೆ ಎತ್ತಿದೆ. ಅದರಲ್ಲಿ ಬಹಳಷ್ಟು ಕಂಪನಿಗಳು ರಾತ್ರೋರಾತ್ರಿ ಬೆಳೆದುಬಿಟ್ಟಿವೆ. ಬೆಂಗಳೂರಲ್ಲೂ ಸ್ಟೈಲ್ ಬ್ಯಾಂಕ್, ಫ್ಲೈ ರೋಬ್, ಕ್ಯಾಸ- ಹೀಗೆ ಅನೇಕ ಕಂಪನಿಗಳು ಹೆಸರುವಾಸಿಯಾಗಿವೆ. ಜೊತೆಗೆ ಈಗ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಅಂತ ಜನರಿಗೆ ಫೋಟೋ ಕ್ರೇಜ್ ಇರೋದರಿಂದ ಬಾಡಿಗೆ ಉಡುಪುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
-ಕ್ಷಮಾ ಭಾರದ್ವಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.