ಚಿತ್ರದುರ್ಗ: ಪಾರ್ದಿ ಗ್ಯಾಂಗ್ ನ ನಾಲ್ವರು ಅರೆಸ್ಟ್
Team Udayavani, Dec 3, 2019, 9:21 PM IST
ಚಿತ್ರದುರ್ಗ: ಮಹಾರಾಷ್ಟ್ರ ಮೂಲದ ಪಾರ್ದಿ ಗ್ಯಾಂಗ್ ಗೆ ಸೇರಿದ ನಾಲ್ವರು ಸುಲಿಗೆಕೋರರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ನ. 25 ರಂದು ಹೊಸದುರ್ಗ ತಾಲೂಕು ಯಲ್ಲಾಬೋವಿಹಟ್ಟಿ ಹಾಗೂ ವೀರವ್ವ ನಾಗತಿಹಳ್ಳಿ ಗ್ರಾಮಗಳಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಮನೆಯೊಂದರಲ್ಲಿ ದರೋಡೆ ಹಾಗೂ ಮನೆಗಳ್ಳತನ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದಾಗ ಸಿಕ್ಕಿಬಿದ್ದಿದ್ದಾರೆ. ಮಾಡದಕೆರೆ ಬಳಿ ಕೆಂಕೆರೆ ಕಡೆ ಹೋಗುವ ರಸ್ತೆಯಲ್ಲಿ ಗುಡ್ಡದ ಮೇಲೆ ಟೆಂಟ್ ಹಾಕಿಕೊಂಡು ವಾಸವಿದ್ದ ಮಹಾರಾಷ್ಟ್ರ ನಾಗಪುರ ಜಿಲ್ಲೆಯ ಅರ್ಜುನ, ಆದಿನಾಗನ ಬೋಸ್ಲೆ, ಪಾರವ್ವ ಹಾಗೂ ಕನಕ ಬಂಧಿತರು.
ಬಂಧಿತರಿಂದ ಕಳ್ಳತನ ಮಾಡಿದ್ದ 33 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಐದೂವರೆ ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಕಳ್ಳತನಕ್ಕೆ ಬಳಸುತ್ತಿದ್ದ ಹತಾರಗಳು, ಮಚ್ಚು, ಚೂರಿ ಮತ್ತಿತರೆ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಹೊಸದುರ್ಗ ಸಿಪಿಐ ಫೈಜುಲ್ಲಾ ನೇತೃತ್ವದಲ್ಲಿ, ಪಿಎಸ್ಐ ಶಿವಕುಮಾರ್, ಪ್ರೊಬೆಷನರಿ ಪಿಎಸ್ಐ ಗಾದ್ರಿಲಿಂಗಪ್ಪ ಹಾಗೂ ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.