ಇನ್ನು ಮಾತನಾಡುವುದೂ ದುಬಾರಿ
ದರ ಏರಿಸಿದ ಟೆಲಿಕಾಂ ಕಂಪೆನಿಗಳು; ಕರೆ, ಡಾಟಾ ದರಗಳಲ್ಲಿ ಶೇ.42ರಷ್ಟು ಏರಿಕೆ
Team Udayavani, Dec 4, 2019, 4:42 AM IST
ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ವೊಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಇನ್ನು ದುಬಾರಿಯಾಗಲಿದೆ. ಡಿಸೆಂಬರ್ 3ರಿಂದ ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸಿವೆ. ಅದರಂತೆ ಶೇ.42ರಷ್ಟರವರೆಗೆ ದರ ಏರಿಕೆಯಾಗಲಿದೆ. ಸದ್ಯ ಬಿಎಸ್‌ಎನ್‌ಎಲ್ ಮಾತ್ರ ದರ ಏರಿಕೆಯನ್ನು ಘೋಷಿಸಿಲ್ಲ.
ದರ ಏರಿಕೆ ಯಾಕೆ?
ಭಾರತದಲ್ಲಿ ಮೊಬೈಲ್ ಕರೆ, ಡೇಟಾ ಶುಲ್ಕಗಳು ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಆದರೆ ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಏರ್‌ಟೆಲ…, ವೊಡಾಫೋನ್-ಐಡಿಯಾ ಮತ್ತು ಇತರ ಟೆಲಿಕಾಂ ಆಪರೇಟ್ ಕಂಪೆನಿಗಳು ಒಟ್ಟು ಸರಿ ಹೊಂದಿಸಿದ ಆದಾಯ (ಎಜಿಆರ್) ಪ್ರಕಾರ ಸರಕಾರಕ್ಕೆ 1.4 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ಈ ಮೊತ್ತವನ್ನು ಗ್ರಾಹಕರಿಂದಲೇ ಭರಿಸಬೇಕಾದ ಅನಿವಾವಾರ್ಯತೆಯಿಂದ ಸಂಸ್ಥೆಗಳದ್ದು.
ಗ್ರಾಹಕರ ಮೇಲೆ ಬರೆ
ಟೆಲಿಕಾಂ ಕಂಪೆನಿಗಳ ವಾರ್ಷಿಕ ಒಟ್ಟು ಸರಿ ಹೊಂದಿಸಿದ ಆದಾಯ (ಎಜಿಆರ್) ಪ್ರಕಾರ ಭಾರ್ತಿ ಏರ್ಟೆಲ್ 21,682 ಕೋಟಿ ಹಾಗೂ ವೋಡಾಫೋನ್ ಐಡಿಯಾ 19,823 ಕೋಟಿ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ಹಣವನ್ನು ಟೆಲಿಕಾಂ ಇಲಾಖೆಗೆ ಪಾವತಿಸಬೇಕಿದೆ. ಈ ಹಿನ್ನಲೆಯಲ್ಲಿ ಕಟ್ಟಬೇಕಾದ ಮೊತ್ತವನ್ನು ಗ್ರಾಹಕರಿಂದ ವಸೂಲು ಮಾಡಲು ಟ್ಯಾರಿಫ್ ದರ ಹೆಚ್ಚಳಕ್ಕೆ ಮುಂದಾಗಿವೆ.
ಮಾತು ಕಟ್!
ಈಗ ಸೀಮಿತ ಪ್ಯಾಕ್‌ಗಳಲ್ಲಿ ಉಚಿತ ಕರೆಗಳನ್ನು ನೀಡಲಾಗುತ್ತದೆ. ಜಿಯೋ ಟು ಜಿಯೋ, ಏರ್‌ಟೆಲ್ ಟು ಏರ್‌ಟೆಲ್, ಐಡಿಯಾ-ವೊಡಾಪೋನ್ ಟು ಐಡಿಯಾ-ವೊಡಾಪೋನ್ ಮಾತ್ರ ಉಚಿತ ಕರೆ ಸೇವೆಗಳಿವೆ. ಉಳಿದಂತೆ ಉಳಿದ ನೆಟ್‌ವರ್ಕ್‌ಗಳಿಗೆ ಹಣ ಪಾವತಿಸಬೇಕು. 2016ರ ಬಳಿಕ ಇದೇ ಮೊದಲ ಬಾರಿ ಈ ಮಟ್ಟದ ಬದಲಾವಣೆರಗಳು ಟೆಲಿಕಾಂ ವಲಯದಲ್ಲಿ ದಾಖಲಾಗುತ್ತಿದೆ.
ಭಾರತದಲ್ಲಿ ಡಾಟಾ ಅಗ್ಗ
ಜಗತ್ತಿನಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಅತೀ ಕಡಿಮೆ ದರಗಳಿಗೆ 1 ಜಿಬಿ ಡಾಟಾ ಲಭ್ಯವಾಗುತ್ತಿದೆ. ಕೆಲವು ತಿಂಗಳ ಹಿಂದೆ 1 ಜಿಬಿ ಮೊಬೈಲ್ ಡಾಟಾ ಸರಾಸರಿ 18.22 ರೂ.ಗೆ ದೊರಕುತ್ತಿತ್ತು. ಇತ್ತೀಚೆಗೆ ಟೆಲಿಕಾಂ ಕ್ಷೇತ್ರದಲ್ಲಿ ಬದಲಾವಣೆಯಾಗಿದ್ದು, ಡಾಟಾ ದರಗಳು ಸ್ವಲ್ಪ ಹೆಚ್ಚಳವಾಗಿದೆ. ಆದರೆ ಇತರ ರಾಷ್ಟ್ರಗಳಿಗಿಂತ ಇನ್ನೂ ಕಡಿಮೆಯಿದೆ.
ಯಾವುದು ಎಷ್ಟೆಷ್ಟು?
ವೋಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ನ ನೂತನ ಟಾರಿಫ್Õನಲ್ಲಿ ಮೊಬೈಲ್ ಕರೆಗಳು, ಡೇಟಾ ಮೇಲಿನ ದರವನ್ನು ಶೇ. 15ರಿಂದ 47ರಷ್ಟು ಏರಿಕೆ ಮಾಡಲಾಗಿದೆ. ಇದು ಡಿಸೆಂಬರ್ 3ರಿಂದ (ನಿನ್ನೆಯಿಂದ)ಜಾರಿಗೆ ಬರಲಿದೆ. ಏರ್‌ಟೆಲ್ ಸೇವಾ ಶುಲ್ಕದಲ್ಲಿ ದಿನಕ್ಕೆ 50 ಪೈಸೆಯಿಂದ 2.85 ರೂ. ವರೆಗೆ ಏರಿಕೆಯಾಗಲಿದೆ.
1ಜಿಬಿ ಡೇಟಾ: ಸರಾಸರಿ ದರ
ಭಾರತ 18.22 ರೂ.
ಬ್ರಿಟನ್ 467.67 ರೂ.
ಅಮೆರಿಕ 866.77 ರೂ.
ಜಿಂಬಾಬ್ವೆ 5,268.66 ರೂ.
ಜಾಗತಿಕ ಮಟ್ಟ 600 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.