“ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಿ’: ಹಾಕಿ ನಾಯಕಿ ರಾಣಿ ರಾಮ್‌ಪಾಲ್ ಒತ್ತಾಯ
Team Udayavani, Dec 3, 2019, 11:49 PM IST
ಬೆಂಗಳೂರು: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಂದು ಸುಟ್ಟು ಹಾಕಿದ ಪಾತಕಿಗಳ ವಿರುದ್ಧ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್ ಸಿಡಿದಿದ್ದಾರೆ. ಘೋರ ಕೃತ್ಯವನ್ನು ಖಂಡಿಸಿರುವ ಅವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ನೀಡಿ’ ಎಂದು ಒತ್ತಾಯಿಸಿದ್ದಾರೆ.
ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗಾಗಿ ರಾಣಿ ರಾಮ್‌ಪಾಲ್ ನೇತೃತ್ವದ ಭಾರತ ತಂಡ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಭಾರತ ತಂಡದ ಯಶಸ್ವಿ ನಾಯಕಿ ಮಾತನಾಡಿದರು. ಈ ವೇಳೆ ರಾಣಿ ಅವರು ತಮ್ಮ ವೃತ್ತಿ ಬದುಕು, ಒಲಿಂಪಿಕ್ಸ್ ತಯಾರಿ, ಬಾಲ್ಯದ ದಿನಗಳು, ತಂದೆಯ ತ್ಯಾಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿದರು.
ಜನತೆ ತಲೆ ತಗ್ಗಿಸುವಂತಹ ಕೃತ್ಯ
ಹೈದರಾಬಾದ್‌ನಲ್ಲಿ ಯುವತಿಯ ಮೇಲೆ ನಡೆದಿರುವ ದೌರ್ಜನ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮೊದಲು ಮನುಷ್ಯನನ್ನು ಮನುಷ್ಯ ಗೌರವಿಸುವ, ಪ್ರೀತಿಸುವ ಗುಣಗಳನ್ನು ಕಲಿಯಬೇಕು, ಮೃಗಗಳಂತೆ ವರ್ತಿಸುವವರಿಗೆ ಕಾನೂನಿನಡಿ ಕಠಿನ ಶಿಕ್ಷೆ ವಿಧಿಸಿದರೆ ಮುಂದೆಂದು ಇಂತಹ ತಪ್ಪು ನಡೆಯಲಾರದು’ ಎಂದು ರಾಣಿ ತಿಳಿಸಿದರು.
ಒಲಿಂಪಿಕ್ಸ್ ಕ್ವಾರ್ಟರ್‌ಫೈನಲ್ ಗುರಿ
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ 12 ತಂಡಗಳು ಕೂಡ ನಮಗೆ ಕಠಿನ ಎದುರಾಳಿಗಳಾಗಿವೆ. ಯಾವುದೇ ತಂಡವನ್ನು ನಿರ್ಲಕ್ಷಿಸುವಂತಿಲ್ಲ. ಮೊದಲಿಗೆ ಕ್ವಾರ್ಟರ್‌ಫೈನಲ್ ತನಕ ಏರುವ ಯೋಜನೆ ಹಾಕಿಕೊಂಡಿದ್ದೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಕೋಚ್ ಮರಿನ್ ನಮಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ’ ಎಂದರು ರಾಣಿ.
ಶೇ.90 ಕಠಿನ ಶ್ರಮ, ಶೇ.10 ಅದೃಷ್ಟ:
14 ವರ್ಷ ಆಗಿದ್ದಾಗ ನಾನು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದೆ. ಅದು ನನ್ನ ಕಠಿನ ಪರಿಶ್ರಮದಿಂದ. ತಂಡದ ಹಿರಿಯ ಆಟಗಾರ್ತಿಯರಿಂದ ಸಾಕಷ್ಟು ಕಲಿತೆ, ಅದೇ ಅನುಭವ ಇಂದು ನನ್ನನ್ನು ತಂಡದ ನಾಯಕಿಯಾಗುವ ತನಕ ಕರೆದುಕೊಂಡು ಹೋಗಿದೆ. ಶೇ.90ರಷ್ಟು ಕಠಿನ ಶ್ರಮದಲ್ಲೇ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ಶೇ.10ರಷ್ಟು ಮಾತ್ರ ಅದೃಷ್ಟದಲ್ಲಿ ನಂಬಿಕೆ ಹೊಂದಿದ್ದೇನೆ’ ಎಂದು ರಾಣಿ ಹೇಳಿದರು.
ಕಿತ್ತು ತಿನ್ನುವ ಬಡತನವಿತ್ತು
ನಾನಿನ್ನೂ ತುಂಬಾ ಚಿಕ್ಕವಳಾಗಿದ್ದೆ. ಅಪ್ಪ ತಳ್ಳು ಗಾಡಿ ಇಟ್ಟುಕೊಂಡು ದುಡಿದು ಗಳಿಸುತ್ತಿದ್ದ ಆದಾಯವೇ ಮನೆಗೆ ಆಧಾರವಾಗಿತ್ತು. ನನಗೆ ನೂರು ಕೊರತೆಗಳಿದ್ದರೂ ಅಪ್ಪನ ಪ್ರೀತಿಯಲ್ಲಿ ಎಂದಿಗೂ ಕೊರತೆಯಾಗಿರಲಿಲ್ಲ. ಹಾಕಿ ಕಲಿಯಲು ನನ್ನೂರು ಹರ್ಯಾಣದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಯಿತು. ಆದರೆ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ನನ್ನನು ಪ್ರೋತ್ಸಾಹಿಸಿದ ತಂದೆ-ತಾಯಿಯಿಂದ ನಾನು ಹಾಕಿ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಯಿತು. ಅವರ ಋಣ ತೀರಿಸಲು ಎಂದೂ ಸಾಧ್ಯವಿಲ್ಲ’ ಎನ್ನುವುದು ರಾಣಿ ಮನದಾಳದ ಮಾತು.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.