ಜೀತದಿಂದ ಮುಕ್ತವಾಯಿತು ಕುಟುಂಬ
Team Udayavani, Dec 4, 2019, 4:14 PM IST
ಮಾಗಡಿ: ಇಟ್ಟಿಗೆ ಕಾರ್ಖಾನೆಯಲ್ಲಿ ಜೀತಕ್ಕಿದ್ದ ಪತಿ, ಪತ್ನಿ ಹಾಗೂ ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸದಸ್ಯರನ್ನು ಶಾಂತ ಜೀವನ ಜ್ಯೋತಿ ಸರ್ಕಾರೇತರ ಸಂಸ್ಥೆ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಜೀತ ಕಾರ್ಮಿಕರನ್ನು ರಕ್ಷಣೆ ಮಾಡಿರುವ ಘಟನೆ ಮಾಡಬಾಳ್ ಹೋಬಳಿಯ ಅಜ್ಜನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಟ್ಟಿಗೆ ತಯಾರಿಕಾ ಕಾರ್ಖಾನೆಯ ಮಾಲೀಕರಾದ ದೇವಮ್ಮ, ಗೋವಿಂದರಾಜು ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಜೀತಕಾರ್ಮಿಕ ಪದ್ದತಿ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
9 ತಿಂಗಳಿನಿಂದ ಜೀತ: ಶೋಭಾ, ಕುಮಾರ್ ಈ ದಂಪತಿ ಹಾಗೂ ಇವರ ನಾಲ್ಕು ಮಂದಿ ಮಕ್ಕಳು ಜೀತದಿಂದ ಮುಕ್ತರಾಗಿದ್ದಾರೆ. ಹಾವೇರಿ ಜಿಲ್ಲೆಯ ಯಾತನಹಳ್ಳಿ ಗ್ರಾಮದವರಾಗಿದ್ದು, 9 ತಿಂಗಳ ಹಿಂದೆ ಇಟ್ಟಿಗೆ ತಯಾರಿಕೆ ಕಾರ್ಖಾನೆಯಲ್ಲಿ ಮಾಲೀಕರು ಜೀತಗಿಟ್ಟುಕೊಂಡಿದ್ದರು.
20 ಸಾವಿರ ನೀಡಿ ಜೀತಕ್ಕೆ ಪಡೆದುಕೊಂಡರು: ಪ್ರಾರಂಭದಲ್ಲಿ ರಾಮನಗರದ ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ ಕುಟುಂಬ ಅಲ್ಲಿ ಮುಂಗಾಡವಾಗಿ ಪಡೆದಿದ್ದ 20 ಸಾವಿರ ಹಣವನ್ನು ಮಾಲಿಕರಾದ ದೇವಮ್ಮ, ಗೋವಿಂದರಾಜು ಅವರು ಹಿಂದಿನ ಮಾಲೀಕರಿಗೆ ನೀಡಿ ಅಲ್ಲಿಂದ ಅಜ್ಜನಹಳ್ಳಿ ಬಳಿ ಇರುವ ಇಟ್ಟಿಗೆ ತಯಾರಿಕಾ ಕಾರ್ಖಾನೆಗೆ ಕರೆ ತಂದಿದ್ದರು ಎಂದು ಶಾಂತಿ ಜೀವನ ಜ್ಯೊತಿ ಸಂಸ್ಥೆ ತಿಳಿಸಿದೆ.
2 ವರ್ಷದಿಂದ ಊರಿನ ಮುಖ ನೋಡದ ಕುಟುಂಬ: ಈ ಕುಟುಂಬಸ್ಥರು ಕಳೆದ 2 ವರ್ಷದಿಂದ ತಮ್ಮ ಊರಾದ ಹಾವೇರಿ ಜಿಲ್ಲೆ ಯಾತನಹಳ್ಳಿ ಗ್ರಾಮಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ದಂಪತಿ ಪ್ರತಿದಿನ ಎಡಬಿಡದೆ 14 ಗಂಟೆಗಳ ಕಾಲ ದುಡಿಯುತ್ತಿದ್ದರು. ಪ್ರತಿ ದಿನ 1 ಸಾವಿರ ಇಟ್ಟಿಗೆ ತಯಾರಿಸುತ್ತಿದ್ದರು. ಜೊತೆಗೆ ಅವರ ನಾಲ್ಕು ಮಕ್ಕಳು ಸಹ ಇಟ್ಟಿಗೆ ಕಾರ್ಖಾನೆಯಲ್ಲಿ ಇಟ್ಟಿಗೆ ಒಣಗಿಸಿ ಸುಡುವುದು, ಜೋಡಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
20 ಸಾವಿರಕ್ಕೆ 51 ಸಾವಿರ ಬಡ್ಡಿ: ಮೂಲಸೌಕರ್ಯವಿಲ್ಲದ ಸಣ್ಣ ಕೊಠಡಿಯೊಂದರಲ್ಲಿ ರಾತ್ರಿ ಕಳೆಯುತ್ತಿದ್ದ ಕುಟುಂಬ ವಾರಕ್ಕೊಮ್ಮೆ ಇಂತಿಷ್ಟು ಎಂದು ಹಣ ಪಡೆದು ಧವಸ ಧಾನ್ಯ ತಂದು ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಧವಸ ಧಾನ್ಯ ಖರೀದಿಸಲು ದಂಪತಿ ಹೊರ ಹೋಗಬೇಕಾದರೆ, ಮಕ್ಕಳನ್ನು ಕಾರ್ಖಾನೆಯಲ್ಲಿಯೇ ಬಿಟ್ಟು ಹೋಗಬೇಕಿತ್ತು.
ದಂಪತಿ ಊರಿಗೆ ಹೋಗಿ ಬರುವುದಾಗಿ ಕೇಳಿದಾಗ, ನಾವು ಕೊಟ್ಟಿರುವ ಮುಂಗಡ ಹಣ ಹಾಗೂ ಬಡ್ಡಿ ಸೇರಿ 71 ಸಾವಿರ ರೂ. ಆಗಿದೆ. ಕೊಟ್ಟು ಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಈ ಸಂಬಂಧ ಜಿಲ್ಲಾಢಾಳಿತ ಜೀತಮುಕ್ತ ಪ್ರಮಾಣ ಪತ್ರ ವಿತರಿಸಲಿದ್ದು, 2016 ಜೀತ ಮುಕ್ತ ಕಾರ್ಮಿಕರ ಪುನರ್ವಸತಿ ಕೇಂದ್ರ 20 ಸಾವಿರ ರೂ. ಪ್ರಾರಂಭಿಕ ಪರಿಹಾರ ನೀಡಲಿದ್ದು, ಕಾರ್ಮಿಕರನ್ನು ಶೀಘ್ರದಲ್ಲೇ ಕುಟುಂಬದ ಸ್ವಂತ ಊರಾದ ಹಾವೇರಿ ಜಿಲ್ಲೆಯ ಯಾತನಹಳ್ಳಿ ಗ್ರಾಮಕ್ಕೆ ಕಳಿಸಿಕೊಡಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.