ಪ್ಲಾಸ್ಟಿಕ್ ತಂದರೆ ಅಕ್ಕಿ ಉಚಿತ!
Team Udayavani, Dec 4, 2019, 4:47 PM IST
ಬನಹಟ್ಟಿ: ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಸರಕಾರ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಂತೆಯೇ ಬನಹಟ್ಟಿ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸ್ಥಳೀಯ ಅನ್ನಪೂರ್ಣೇಶ್ವರಿ ಹೋಟೆಲ್ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಹೋಟೆಲ್‌ನ ಮಲ್ಲಯ್ಯ ಬಸಲಿಂಗಯ್ಯ ಕಲ್ಯಾಣಿ “ಒಂದು ಕೇಜಿ ಪ್ಲಾಸ್ಟಿಕ್ ತಂದರೆ ಒಂದು ಕೇಜಿ ಅಕ್ಕಿ ಉಚಿತ‘ ಎಂದು ಘೋಷಣೆ ಮಾಡುವ ಮೂಲಕ ಪ್ಲಾಸ್ಟಿಕ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 2 ರಂದೇ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್‌ಗೆ ಬರುವವರಿಗೆ ಸೋಮವಾರದಿಂದಗುರುವಾರದವರೆಗೆ ಉಚಿತವಾಗಿ1ಕೇಜಿ ಅಕ್ಕಿ ನೀಡುತ್ತಿದ್ದಾರೆ.
ಬಾಳೆ ಎಲೆಯಲ್ಲಿ ಪಾರ್ಸಲ್: ನಮ್ಮ ಹೋಟೆಲ್‌ನಿಂದ ಪಾರ್ಸೆಲ್ ತೆಗೆದುಕೊಂಡು ಹೋಗುವವರಿಗೆ ಬಾಳೆ ಎಲೆಯಲ್ಲೇ ಊಟ ಕಟ್ಟಿ ಕೊಡುತ್ತಿದ್ದೇವೆ. ಸಾಂಬಾರ್‌ನಂತಹ ಪದಾರ್ಥಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಡುತ್ತೇವೆ ಎನ್ನುತ್ತಾರೆ ಮಲ್ಲಯ್ಯ. ಬನಹಟ್ಟಿ ಸೇರಿದಂತೆ ಅಥಣಿ, ಜಮಖಂಡಿ, ಗಲಗಲಿ ಹೀಗೆ 6 ಕಡೆಗಳಲ್ಲಿ ಹೊಟೇಲ್‌ಗಳಿದ್ದು, ಎಲ್ಲ ಕಡೆಗಳಲ್ಲಿಯೂ ಇಂತಹ ಅಭಿಯಾನ ನಡೆಸುವ ಮೂಲಕ ಬಂದ ಪ್ಲಾಸ್ಟಿಕ್ ಗಳನ್ನು ನಗರಸಭೆ ಸುಪರ್ದಿಗೆ ನೀಡಲಾಗುತ್ತಿದೆ ಎಂದು ದಾನಯ್ಯ ಕಲ್ಯಾಣಿ ತಿಳಿಸಿದರು.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.