ಚಾರಣಿಗರ ಪ್ರಿಯತಾಣ ರಾಣಿಪುರಂ


Team Udayavani, Dec 5, 2019, 5:15 AM IST

fd-13

“ದೇವರ ಸ್ವಂತ ನಾಡು’ ಕೇರಳದಲ್ಲಿ ಪ್ರಕೃತಿ ರಮಣೀಯ ತಾಣಗಳಿಗೆ ಕೊರತೆ ಇಲ್ಲ. ಅದರಲ್ಲೂ ಹಸುರಿನಿಂದ ಕೂಡಿದ ಬೆಟ್ಟ ಗುಡ್ಡ ಎಂತಹವರನ್ನೂ ತನ್ನತ್ತ ಸೆಳೆಯುವ ಚುಂಬಕ ಶಕ್ತಿಯನ್ನು ಹೊಂದಿವೆ. ಅಂತಹ ತಾಣಗಳಲ್ಲಿ ಕಾಸರಗೋಡಿನ ರಾಣಿಪುರಂ ಕೂಡ ಒಂದು. ಕಾಂಞಂಗಾಡ್‌ನ‌ ಸಮೀಪವಿರುವ ಕೇರಳದ ಊಟಿ ಎಂದೇ ಕರೆಯಲ್ಪಡುವ ರಾಣಿಪುರಂನಲ್ಲೊಂದು ಸುತ್ತು…

ರಜಾದಿನಗಳಲ್ಲಿ ಮನಸ್ಸನ್ನು ಹಗುರಗೊಳಿಸಲು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ ಹವ್ಯಾಸ. ಕೆಲವರು ಮನಶಾಂತಿಗಾಗಿ ದೇವಸ್ಥಾನಗಳಿಗೆ ಹೋದರೆ, ಕೆಲವರು ಉದ್ಯಾನವನಗಳಿಗೆ ಹೋಗುತ್ತಾರೆ. ಹಾಗೆಯೇ ಯುವಕರು ಪ್ರವಾಸಿನ ತಾಣಗಳಿಗೆ ಭೇಟಿ ನೀಡುತ್ತಾರೆ. ಅಂತಹ ಮನಸೆಳೆಯುವ ಚಾರಣ ತಾಣಗಳಲ್ಲಿ ಮತ್ತೆ ಮತ್ತೆ ಹೋಗಬೇಕೆಂದಿನಿಸುವ ತಾಣವೊಂದಿದೆ. ಅದುವೇ ಕಾಸರಗೋಡಿನ ರಾಣಿಪುರಂ. ಕಣ್ತುಂಬುವ ತಾಣ ಚಾರಣಪ್ರಿಯರಿಗಿದು ಪ್ರಾಣ. ಸಮುದ್ರ ಮಟ್ಟದಿಂದ 1022 ಮೀಟರ್‌ ಎತ್ತರದಲ್ಲಿದ್ದು, ಪಶ್ಚಿಮಘಟ್ಟದಲ್ಲಿದೆ. ಇದು ಕೇರಳದ ಊಟಿ ಎಂದೇ ಹೆಸರುವಾಸಿ.

ಕಣ್ತುಂಬುವ ತಾಣ
ಹಚ್ಚಹಸುರ ಟೋಪಿಯನ್ನು ಧರಿಸಿರುವ ಈ ಬೆಟ್ಟ ಗುಡ್ಡಗಳು ಹುಲ್ಲಿನ ಹಾಸಿಗೆಯಂತಿವೆ. ವಿಶಾಲವಾದ ರಾಣಿಪುರಂ ತನ್ನ ಗಡಿಯನ್ನು ಕರ್ನಾಟಕದ ತಲಕಾವೇರಿಯೊಂದಿಗೆ ಜೋಡಿಸಿಕೊಂಡಿದೆ. ಚಾರಣ ತಾಣವನ್ನು ಹೊರತುಪಡಿಸಿ ಇಲ್ಲಿನ ದಟ್ಟಕಾಡಿನಲ್ಲಿ 24ಕ್ಕೂ ಹೆಚ್ಚು ವಿಧದ ಕಾಡುಪ್ರಾಣಿಗಳನ್ನು ಕಾಣಬಹುದು. ಇಲ್ಲಿ ಆನೆಗಳು, ಮಂಗಗಳು ಮತ್ತು ಕರಡಿಗಳು ಕಂಡುಬರುತ್ತವೆ. ಈ ರಾಣಿಪುರಂನ ಚಾರಣ ಸೊಬಗನ್ನು ಸವಿಯಲು ಎರಡು ಕಣ್ಣುಗಳೂ ಸಾಲದು ಎಂದರೆ ಅತಿಶಯೋಕ್ತಿಯಲ್ಲ.

ವಾರದ ಕೊನೆಯಲ್ಲಿ ಎಲ್ಲ ನೋವು ಕೆಲಸದ ಒತ್ತಡಗಳನ್ನು ಮರೆಯಲು ರಾಣಿಪುರಂ ಬೆಟ್ಟದ ಚಾರಣವೊಂದು ಒಳ್ಳೆಯ ಔಷಧವಾಗಿದೆ. ಗೆಳೆಯರ ಬಳಗದೊಂದಿಗೆ ಇಲ್ಲಿಗೆ ಹೋದಲ್ಲಿ ಅದರಷ್ಟು ಸಂತೋಷ ಇನ್ನೊಂದಿಲ್ಲ. ಪ್ರಕೃತಿಯನ್ನು ಆರಾಧಿಸುವವರಿಗೂ, ಫೋಟೋ ತೆಗೆಯಲು ಆಸಕ್ತಿ ಇರುವವರಿಗೂ ಇದು ಹೇಳಿ ಮಾಡಿಸಿದ ತಾಣ. ಇದು ಕೇರಳದ ಕಾಸರಗೋಡಿನಿಂದ 50 ಕಿ.ಮೀ. ದೂರದಲ್ಲಿ ಕಾಂಞಂಗಾಡ್‌ನ‌ಲ್ಲಿದೆ. 1970ರವರೆಗೆ ರಾಣಿಪುರಂ ಮೂಡತ್ತುಮಲ ಎಂದು ಕರೆಯ ಲ್ಪಡುತ್ತಿತ್ತು. ತಂಪಿನಿಂದ ಕೂಡಿದ ಹುಲ್ಲುಹಾಸಿದ ವಾತಾವರಣವನ್ನು ತನ್ನ ದಾಗಿಸಿಕೊಂಡ ರಾಣಿಪುರಂ ಚಾರಣ ಪ್ರಿಯರಿಗೆ ಅಚ್ಚುಮೆಚ್ಚು. ವಿವಿಧ ರೀತಿಯ ಚಿಟ್ಟೆಗಳು ನಮ್ಮ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಈ ರೀತಿಯ ಉತ್ತಮ ವಾತಾವರಣದ ಹಚ್ಚ ಹಸಿರಿನಿಂದ ಕೂಡಿದ “ಕೇರಳದ ಊಟಿ’ ಚಾರಣ ಪ್ರೇಮಿಗಳಗೊಂದು ಕಣ್ತುಂಬುವ ತಾಣ.

ಸುಮಾರು 2 ಗಂಟೆಗಳ ಕಾಲದ ಪಯಣ, ದಾರಿ ಮಧ್ಯದಲ್ಲಿ ಯಾವುದೇ ಅಂಗಡಿಗಳ ಸೌಲಭ್ಯಗಳಿಲ್ಲ. ಆದ್ದರಿಂದ ನೀರು ಮುಂತಾದವುಗಳನ್ನು ನಮ್ಮ ಜತೆಯಲ್ಲಿರಿಸಿಕೊಳ್ಳಬೇಕು. ಸೂರ್ಯ ತನ್ನ ಶಕ್ತಿ ಪ್ರದರ್ಶನವನ್ನು ಶುರು ಮಾಡಿದ ಮೇಲೆ ಈ ಗುಡ್ಡವನ್ನು ಹತ್ತುವುದು ಕಷ್ಟ. ಆದ್ದರಿಂದ ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಚಾರಣ ಪ್ರಾರಂಭಿಸಿ ಮಧ್ಯಾಹ್ನ ಹನ್ನೆರಡು ಗಂಟೆಯ ಒಳಗಾಗಿ ಹಿಂತಿರುಗುವುದು ಉತ್ತಮ. ಐದು ಕಿ.ಮೀ.ನ ಈ ಪಯಣದಿಂದ ಉಂಟಾಗುವ ಅಲ್ಪ ಸ್ವಲ್ಪ ಸುಸ್ತು ಕೂಡ ನಮ್ಮ ಗುರಿಯನ್ನು ತಲುಪಿದ ಕೂಡಲೆ ಮರೆತು ಹೋಗುತ್ತದೆ. ಅಲ್ಲಿ ಬೀಸುವ ತಂಪಾದ ಗಾಳಿ ನಮ್ಮ ಎಲ್ಲ ಸುಸ್ತನ್ನು ಶಮನಗೊಳಿಸುತ್ತದೆ. ನಾವು ಗಾಳಿಯಲ್ಲಿ ತೇಲಾಡಿದಂತಹ ಅನುಭವವಾಗುತ್ತದೆ. ಚಾರಣ ಪ್ರಿಯರು ಭೇಟಿ ನೀಡಲೇ ಬೇಕಾದ ತಾಣವಿದು.

ಐದು ಕಿ.ಮೀ. ಬೆಟ್ಟ ಹತ್ತಬೇಕು
ಕೇರಳದ ಪ್ರಸಿದ್ಧ ಚಾರಣ ತಾಣವಾದ ರಾಣಿಪುರಂನ ಬೆಟ್ಟದ ಬುಡದಿಂದ ತೊಡಗಿ ಮುಂದೆ 5 ಕಿ.ಮೀ ದೂರದಷ್ಟು ಹತ್ತಬೇಕು. ದಾರಿಮಧ್ಯದಲ್ಲಿ ಹಚ್ಚಹಸುರಿನಿಂದ ತುಂಬಿದ ಚಿಕ್ಕಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಬೇಕು. ಚಾರಣದ ಪ್ರಮುಖ ಗುರಿಯನ್ನು ಮಣಿಮಲ ಎಂದು ಕರೆಯಲಾಗುತ್ತದೆ. ಇಲ್ಲಿ ಬೆಟ್ಟದ ಬಂಡೆಯ ತುದಿಯಲ್ಲಿ ನಿಂತು ನೋಡಿದರೆ ಪ್ರಕೃತಿಯು ಹಸುರು ಹಸುರಾದ ಸ್ವರ್ಗದಂತೆ ಗೋಚರಿಸುತ್ತದೆ. ನಮ್ಮ ದೇಹವನ್ನು ತಾಕುವ ಗಾಳಿಯು ನಮ್ಮ ಲ್ಲೇನೋ ಹೇಳಲು ಬಯಸಿದಂತೆ ಭಾಸವಾಗುತ್ತದೆ. ಅದೆಷ್ಟೋ ಔಷಧಿಯ ಗಿಡಗಳಿಂದ ಕೂಡಿದ ಬೆಟ್ಟಗಳು, ಮಂಜು ಮುಸುಕಿದ ದಾರಿ ಎಲ್ಲವೂ ಮನಸ್ಸಿನ ಆತಂಕ ಮರೆಯುವಂತೆ ಮಾಡುತ್ತದೆ.

ರೂಟ್‌ ಮ್ಯಾಪ್‌
 ಮಂಗಳೂರಿನಿಂದ ರಾಣಿಪುರಂ ಸುಮಾರು 111 ಕಿ.ಮೀ. ದೂರದಲ್ಲಿದೆ.
 ಕಾಞಂಗಾಡ್‌ಗೆ ಬೇಕಾದಷ್ಟು ಬಸ್‌, ರೈಲು ಸಂಪರ್ಕವಿದ್ದು, ಅಲ್ಲಿಂದ ತೆರಳಬಹುದು. ಕಾಸರಗೋಡಿನಿಂದ ರಾಣಿಪುರಂಗೆ ಕೆಸ್ಸಾರ್ಟಿಸಿ, ಖಾಸಗಿ ಬಸ್‌ ಇದ್ದು, ಸ್ವಂತ ವಾಹನದಲ್ಲೂ ತೆರಳಬಹುದು.
ಬೇಕಲಕೋಟೆ, ಪಳ್ಳಿಕೆರೆ ಬೀಚ್‌ ಸಮೀಪದ ಪ್ರೇಕ್ಷಣೀಯ ತಾಣಗಳು.

– ಪಲ್ಲವಿ ಕೋಂಬ್ರಾಜೆ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.