ಡಿ. 7: ಕೆಯ್ಯೂರಿನಲ್ಲಿ 19ನೇ ತಾ| ಕನ್ನಡ ಸಾಹಿತ್ಯ ಸಮ್ಮೇಳನ


Team Udayavani, Dec 5, 2019, 4:38 AM IST

fd-21

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಆಶ್ರಯದಲ್ಲಿ 19ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕೆಯ್ಯೂರು ಜಯ ಕರ್ನಾಟಕ ಸಭಾಭವನದಲ್ಲಿ ಡಿ. 7ರಂದು ನಡೆಯಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ| ನರೇಂದ್ರ ರೈ ದೇರ್ಲ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಕೆಯ್ಯೂರಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಿಂದ ಸಮ್ಮೇಳನಾಧ್ಯಕ್ಷರು ಮತ್ತು ಕನ್ನಡ ಭುವನೇಶ್ವರಿಯ ಮೆರವಣಿಗೆ ಆರಂಭಗೊಳ್ಳಲಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾಹಿತ್ಯ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಬಾಬು ಬಿ. ಮೆರವಣಿಗೆ ಉದ್ಘಾಟಿಸಲಿದ್ದಾರೆ. ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಪರಿಷತ್‌ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಸಮ್ಮೇಳನ ಧ್ವಜಾರೋಹಣ ಮಾಡಲಿದ್ದಾರೆ.

ಸಾಹಿತ್ಯ ಸಮ್ಮೇಳನ ವನ್ನು ಪತ್ರಕರ್ತ ಈಶ್ವರ ದೈತೋಟ ಉದ್ಘಾಟಿಸಲಿ ದ್ದಾರೆ. ಶಾಸಕ ಸಂಜೀವ ಮಠಂದೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಪುಸ್ತಕ ಪ್ರದರ್ಶನ, ತಾ.ಪಂ. ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ ವಸ್ತು ಪ್ರದರ್ಶನ, ಎಸ್‌.ಬಿ. ಜಯರಾಮ ರೈ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಆಶಯ ನುಡಿಗಳನ್ನಾಡಲಿದ್ದಾರೆ. ತಾಲೂಕು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಉಪಸ್ಥಿತರಿರುತ್ತಾರೆ.

ಸಂಜೆ ಸಮಾರೋಪ
ಸಂಜೆ 4.45ಕ್ಕೆ ಸಮಾರೋಪ ನಡೆಯಲಿದೆ. ಕಬಕ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಬಿ. ಚಂದ್ರಹಾಸ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಸುದಾನ ವಸತಿಯುತ ಶಾಲೆಯ ಸಂಚಾಲಕ ವಿಜಯ ಹಾರ್ವಿನ್‌, ಸ್ವರ್ಣೋದ್ಯಮಿ ಮುಳಿಯ ಶ್ಯಾಮ್‌ ಭಟ್‌, ಕೆಯ್ಯೂರು ದೇವಸ್ಥಾನದ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕೆ.ಎಂ. ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕವಿಗೋಷ್ಠಿ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಂಸ್ಮರಣೆ, ವಿಚಾರಗೋಷ್ಠಿ, ಪುಸ್ತಕಗಳ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಮೀಕ್ಷೆ, ಸಾಧಕರಿಗೆ ಸಮ್ಮಾನ ನಡೆಯಲಿದೆ. ಮಧ್ಯಾಹ್ನ ಸಾಹಿತ್ಯ ಪ್ರೇಮಿಗಳಿಗೆ ಭೋಜನದ ವ್ಯವಸ್ಥೆ ಮಾಡ ಲಾಗಿದೆ ಎಂದರು.

19ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ 19 ಗಣ್ಯರಿಗೆ/ ಸಂಸ್ಥೆಗಳಿಗೆ ಸಮ್ಮಾನ ನಡೆಯಲಿದೆ. ಪ್ರೊ| ಡಿ.ಎಸ್‌. ಭಟ್‌ (ಶಿಕ್ಷಣ), ನಾರಾಯಣ ತೋಳ್ಪಾಡಿ (ಛಾಯಾಚಿತ್ರ), ಡಾ| ಕೆ.ಜಿ. ಭಟ್‌ (ವೈದ್ಯಕೀಯ), ಬಿ. ರಮೇಶ್‌ ರೈ (ದೇಶ ಸೇವೆ), ರಾಮಯ್ಯ ರೈ ಎನ್‌. (ಸಹಕಾರ), ಕಂಪ ರಾಮಣ್ಣ ಪೂಜಾರಿ (ಮೂಲಿಕಾ ವೈದ್ಯ), ಶೀನ ಅಜಿಲಾಯ(ಜಾನಪದ), ಎಸ್‌. ಈಶ್ವರ ಭಟ್‌ ಎಲ್ಯಡ್ಯ (ಶಿಕ್ಷಣ- ಸಾಹಿತ್ಯ), ಶ್ರೀಧರ ಭಂಡಾರಿ (ಯಕ್ಷಗಾನ), ವೆಂಕಮ್ಮ ಕೆಯ್ಯೂರು (ಪ್ರಸೂತಿ ತಜ್ಞರು), ಯಶೋದಾ ಕೆ. (ಶಿಕ್ಷಣ, ಸಮಾಜಸೇವೆ), ಪ್ರಸನ್ನ ರೈ ಮಜಲುಗದ್ದೆ (ಚಿತ್ರಕಲೆ), ಮಹಮ್ಮದ್‌ ಯು. (ಶಿಕ್ಷಣ ಸೇವೆ), ಮಾಧವ ಪೂಜಾರಿ ಕೆಂಗುಡೇಲು (ದೇಶ ಸೇವೆ), ಡಿಂಬ್ರಿ ಪದ್ಮನಾಭ ರೈ (ಕೃಷಿ), ಆಸ್ಕರ್‌ ಆನಂದ್‌ (ಉದ್ಯಮ), ಕರುಣಾಕರ ಗೌಡ ಪಲ್ಲತ್ತಡ್ಕ (ದೇಶಸೇವೆ), ಲಕ್ಷ್ಮಣ ಪರವ (ಕುಶಲ ಕಲೆ), ಗಾನಸರಸ್ವತಿ ಸಂಗೀತ ಕಲಾಶಾಲೆ, ನೆಹರೂನಗರ (ಸಂಸ್ಥೆ) ಸಮ್ಮಾನ ಸ್ವೀಕರಿಸಲಿದ್ದಾರೆ ಎಂದರು.

ಕೃತಿ ಬಿಡುಗಡೆ
ಮೌನ ಮಾತು (ಡಾ| ಗೀತಾಕುಮಾರಿ ಟಿ.), ಗೇರು ಎತ್ತರಕ್ಕೆ ಏರು ಮತ್ತು ಬಯಸದೇ ಬಂದ ಭಾಗ್ಯ (ಕಡಮಜಲ್‌ ಸುಭಾಸ್‌ ರೈ), ನಿನ್ನದೇ ಎಲ್ಲ (ಮಲ್ಲಿಕಾ ಜೆ. ರೈ), ಪಯಣ- ಭರವಸೆಯ ಪಥದತ್ತ (ಇಂದಿರಾ ಕೆ.ಎಸ್‌.), ಕಾವ್ಯ ಸಿಂಚನ (ಗಣೇಶ್‌ ಭಟ್‌ ಪಾಪೆಮಜಲು), ಧನ್ವಂತರಿ (ಶಾರದಾ ಭಟ್‌ ಕೊಡೆಂಕಿರಿ ಮತ್ತು ಮಹಾಲಕ್ಷ್ಮೀ ಪುತ್ತೂರಾಯ), ಹಣತೆ ಸಾಲು (ಜೆಸ್ಸಿ ಪಿ.ವಿ.), ಮನದ ಮಾತು (ನಳಿನಿ), ಮಾರ್ದನಿ (ಸಮ್ಯಕ್‌¤ ಎಚ್‌.) ಕೃತಿಗಳು ಬಿಡುಗಡೆಯಾಗಲಿವೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಡಾ| ಎಚ್‌.ಜಿ. ಶ್ರೀಧರ್‌, ಸ್ವಾಗತ ಸಮಿತಿ ಗೌರವಾಧ್ಯಕ್ಷ ದಂಬೆಕಾನ ಸದಾಶಿವ ರೈ, ಹಿರಿಯ ಸಾಹಿತಿ ಪ್ರೊ| ವಿ.ಬಿ. ಅರ್ತಿಕಜೆ ಉಪಸ್ಥಿತರಿದ್ದರು.

ಸಾಹಿತ್ಯ ಮನುಷ್ಯ ಚಿಂತನೆಯ ಉತ್ಕೃಷ್ಟ ಕೆನೆಪದರ

ಕಿರಣ್‌ ಪ್ರಸಾದ್‌ ಕುಂಡಡ್ಕ

ಸಾಹಿತ್ಯ ಎಂಬುವುದು ನಿಮ್ಮ ಪಾಲಿಗೆ ಏನು?
ಸಾಹಿತ್ಯದ ಉದ್ದೇಶ ಮಾನಸಿಕ ಬೇನೆ ಕಳೆದು ಜೀವ ಕ್ಷೇಮ ಕಾಪಾಡುವುದು. ಸಂಗೀತ, ಕಲೆ, ರಂಗಭೂಮಿ, ಜಾನಪದ ಎಲ್ಲದರ ಉದ್ದೇಶವೂ ಇದೆ. ಇವುಗಳಲ್ಲಿ ಸಾಹಿತ್ಯ ಮನುಷ್ಯ ಚಿಂತನೆಯ ಉತ್ಕೃಷ್ಟ ಕೆನೆಪದರ. ಇದು ಸೃಜಿಸಬೇಕಾದರೆ ಬರೀ ಸಂವೇದನೆ ಒಂದೇ ಅಲ್ಲ. ಬೇರೆಯವರ ನೋವಿನ ಅನುಭವವೂ ಬೇಕು. ಇದು ಸಾಧ್ಯವಾಗಬೇಕಾದರೆ ಬರಹ ಗಾರ ಹೇಳುವುದಕ್ಕಿಂತ ಹೆಚ್ಚು ಕೇಳುವುದನ್ನು ಅವಲಂಬಿಸಬೇಕು. ಬರಹಗಾರ ಬರೆ ಯುವುದಕ್ಕಿಂತ ಹೆಚ್ಚು ಓದುವುದು ಮುಖ್ಯ.

ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಆಗುವ ಪ್ರಯೋಜನಗಳೇನು?
ಇಂದು ಯಾವುದಕ್ಕೆ ಕೊರತೆ ಇದೆಯೋ ಅದನ್ನೇ ಬಿತ್ತುವುದು. ಇದರಿಂದ ಕೆಲವಾದರೂ ಮೊಳಕೆಯೊಡೆಯಬಹುದು. ಸಾಹಿತ್ಯ, ಸಾಹಿತ್ಯದ ಹಿರಿತನ, ಮನಸ್ಥಿತಿ, ಅದರ ಹಿಂದಿನ ಸಮಾಜ ಎಲ್ಲವೂ ಇಂದು ಹೊರಳು ದಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ವರ್ತಮಾನದ ಸಂಕೀರ್ಣತೆ, ಸಂಬಂಧ-ಸಹವಾಸದ ನಾಶ. ಸಮುದಾಯದ ಇಂಥ ತೀಕ್ಷ್ಣ ರೋಗಗಳನ್ನು ಕಳೆದು ಸಾಹಿತ್ಯದಿಂದ ಏನಾದರೂ ಸಾಧ್ಯನೋ ನೋಡಬೇಕು. ಈ ಹಿನ್ನೆಲೆಯಲ್ಲಿ ಸಮ್ಮೇಳನಗಳು ನಮಗೆ ಬೇಕು.

 ಇತ್ತೀಚೆಗೆ ಸಾಹಿತಿಗಳು ಅನ್ಯ ಕಾರಣಗಳಿಂದಲೇ ಸುದ್ದಿ ಆಗುವುದು ಹೆಚ್ಚು ಎಂಬ ಆಪಾದನೆ ಇವೆಯಲ್ಲ?
ನಾನು ಗೆಲ್ಲಲೇಬೇಕೆನ್ನುವುದು ಸಹಜ. ಅದಕ್ಕಾಗಿ ಇನ್ನೊಬ್ಬ ಸೋಲಲೇಬೇಕೆಂದು ಬಯಸುವುದು, ಪ್ರಯತ್ನಿಸುವುದು ತಪ್ಪು. ಭಾರತದ ರಾಜಕಾರಣದ ಈ ಕ್ರಮ ಇಂದು ಸಾಹಿತ್ಯ, ಸಂಸ್ಕೃತಿ ಕ್ಷೇತ್ರಕ್ಕೂ ಬಂದಿದೆ. ಭಾರತದ ಎರಡು ವಿ.ವಿ.ಗಳಲ್ಲಿ ಎರಡು ಘಟನೆಗಳು ಆದ ಬಳಿಕ ಅದನ್ನು ಮಾಧ್ಯಮಗಳು ನಮ್ಮ ಮನೆ- ಮನಸ್ಸಿನ ಮುಂದೆ ರಾಶಿ ಸುರಿಯುವ ಪರಿ ನೋಡಿದರೆ ಈ ಎಡ-ಬಲದ ಧ್ರುವೀಕರಣ ದಿನೇ-ದಿನೇ ವಿಸ್ತಾರಗೊಳ್ಳುತ್ತಿದೆ. ಈ ಗುಂಪುಗಾರಿಕೆಯಲ್ಲಿ ಸಾಹಿತಿಗಳೇ ಹೆಚ್ಚಿದ್ದಾರೆ ಎಂಬುವುದು ನೋವಿನ ಸಂಗತಿ.

 ನೀವೊಬ್ಬ ಉಪನ್ಯಾಸಕರು. ಯುವ ಸಮುದಾಯದಲ್ಲಿ ಓದುವ ಹವ್ಯಾಸ, ಸಾಹಿತ್ಯಾಸಕ್ತಿ ಕಡಿಮೆ ಆಗುತ್ತಿದೆಯೇ? ಅಭಿರುಚಿ ಮೂಡಿಸುವುದಕ್ಕೆ ಏನು ಮಾಡಬೇಕು?
23 ವರ್ಷಗಳಿಂದ ಗ್ರಾಮಾಂತರ ಪ್ರದೇಶದ ಕಾಲೇಜುಗಳಲ್ಲಿ ಭಾಷೆ, ಸಾಹಿತ್ಯ, ಪಾಠ ಮಾಡುವ ಮೇಷ್ಟ್ರಾಗಿ ಇದನ್ನೆಲ್ಲ ಹತ್ತಿರದಿಂದ ಗಮನಿಸಿದ್ದೇನೆ. ಮಾನವಿಕ ವಿಷಯದಲ್ಲಿ ಆಸಕ್ತಿ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಆರ್ಥಿಕ ಮಾದರಿ ಬಲವಾಗುತ್ತಿರುವುದು ಮತ್ತು ನವ ಮಾಧ್ಯಮಗಳ ಚಕ್ರಸುಳಿ ನಮ್ಮ ಯುವಜನರ ಸೂಕ್ಷ್ಮ ಸಂವೇದನೆಯನ್ನು ಉದ್ದೀಪಿಸುವುದಿಲ್ಲ. ಕಾಲದ ಯಾಂತ್ರಿಕ ಸಂಕೀರ್ಣತೆ ಅವರನ್ನು ತುಂಬಾ ಆವರಿಸಿದೆ. ಅವುಗಳಿಂದ ಪಾರು ಮಾಡುವುದೇ ಸವಾಲಿನ ಕೆಲಸ.

ಯುವ ಸಮುದಾಯದ ಸೃಜನಶೀಲ ಅಭಿವ್ಯಕ್ತಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಹೋಗುತ್ತಿದೆ ಅನಿಸುತ್ತಿದೆಯೇ?

ಅಭಿವೃಕ್ತಿಯ ಯಂತ್ರದ ವೇಗದ ದಾರಿ ಅಪಾಯದ ದಾರಿಯೂ ಹೌದು. ಹೊಸಬರಲ್ಲಿ ಸೃಜನಶೀಲತೆ ಇಲ್ಲ ಎನ್ನುವುದಿಲ್ಲ. ಅವೆಲ್ಲ ಅಡ್ಡಾದಿಡ್ಡಿಯಾಗಿ ಚಲಿಸುತ್ತಿವೆ. ನವಮಾಧ್ಯಮ ರಹಿತ ಮುಕ್ತ ಚಿಂತನೆಯಲ್ಲಿ 2 ಭಾವಗಳು ಏಕ ಕಾಲದಲ್ಲಿ ಎದುರು ಬದುರು ಇರುತ್ತವೆ. ಪ್ರಶ್ನೆ, ಚರ್ಚೆಗಳೆಲ್ಲ ತಾಳಮದ್ದಳೆಯ ಮಾದರಿಯಲ್ಲಿರಬೇಕು.

ಮಾತುಕತೆ ರೂಪದಲ್ಲಿ ಇರಬೇಕು. ಯಂತ್ರದಾರಿಯ ವೇಗದ ಓಟ ಅಪಘಾತ ಸೃಷ್ಟಿಸುವುದೇ ಹೆಚ್ಚು. ಹಾಗಂತ ಅಪವಾದಗಳೂ ಇವೆ. ಲೇಖಕರ, ಓದುಗರ, ಅಭಿಮಾನಿಗಳ, ಕತೆಗಾರರ, ಕವಿಗಳ ಗುಂಪು ಇವೆಲ್ಲಾ ಕ್ರಿಯಾಶೀಲವಾಗಿರುವುದನ್ನು ಗಮನಿಸಿದ್ದೇನೆ. ಅವೆಲ್ಲ ಸಮ್ಮುಖ ಮುಖಾಮುಖೀಗೆ ಒಳಗಾಗಬೇಕು.

ನಿಮ್ಮ ಕೃಷಿ ಮತ್ತು ಸಾಹಿತ್ಯಿಕ ಬದುಕಿನ ಬಗ್ಗೆ ಹೇಳಿ
ಸಾಹಿತ್ಯ ಮತ್ತು ಕೃಷಿ-ನನಗೆ ಎರಡೂ ಒಂದೇ. ಈ ಎರಡೂ ಮುಖಗಳ ಬಗ್ಗೆ ಅನುಮಾನ-ಸಂದೇಹಗಳು ಕಡಿಮೆ ಎಂಬ ಕಾರಣಕ್ಕಾಗಿ ಅಲ್ಲ. ಧ್ಯಾನಿಸಲು ಇಲ್ಲಿ ಅವಕಾಶ ತುಂಬಾ ಹೆಚ್ಚಿದೆ. ಹಾಗಂತ ನಾನು ತಜ್ಞ ಕೃಷಿಕ ಅಲ್ಲ. ತಜ್ಞ ಬರಹಗಾರನೂ ಅಲ್ಲ. ನನಗೆ ಬೇಕಾಗುವ ಅನ್ನ ಹುಡುಕುವ, ನೆಮ್ಮದಿ ಹುಡುಕುವ ಜಾಗವಿದು. ಇಲ್ಲಿಂದ ನನಗೆ ಬೇರೆಯವರ ಬಗ್ಗೆ ಯೋಚಿಸಲು ಸಮಯವೇ ಇಲ್ಲ.

ನಿಮ್ಮ ಬದುಕು ಮತ್ತು ಬರಹಗಳ ಮೇಲೆ ಯಾರ ಪ್ರಭಾವ ಇದೆ?
ಕುವೆಂಪು ಅವರ ನಿಸರ್ಗಾಧಾರಿತ ಅಧ್ಯಾತ್ಮ, ಕಾರಂತರ ಪ್ರಕೃತಿ ಶೋಧನೆ, ತೇಜಸ್ವಿಯವರ ನಿಸರ್ಗ ದಾರಿಯ ವಿಸ್ಮಯಾನುಭವ, ನಾಗೇಶ ಹೆಗಡೆಯವರ ಮನುಷ್ಯ-ಪ್ರಕೃತಿಯ ಅನುಸಂಧಾನ ನನಗೆ ತುಂಬಾ ಇಷ್ಟ. ಇವರಿಂದಲೇ ನಾನು ಪ್ರಭಾವಿತ.

ಕೃಷಿಯ ಸವಾಲುಗಳನ್ನು ಹತ್ತಿರದಿಂದ ಕಾಣುತ್ತಿದ್ದೀರಿ. ಕೃಷಿಕನ ನೆಮ್ಮದಿಗೆ ಏನು ಮಾಡಬಹುದು?
ನಿಸರ್ಗ ಪೂರ್ಣ ದಿಕ್ಕು ತಪ್ಪಿರುವುದು ಕಣ್ಣಿಗೆ ರಾಚುತ್ತದೆ. ಇದು ಮನುಷ್ಯನಿಂದಲೇ ಆದದ್ದು ಇರಬಹುದು. ಈ ನಡುವೆ ಮನುಷ್ಯ, ಸರಕಾರಗಳು ಸೃಷ್ಟಿಸಿರುವ ಮತ್ತಷ್ಟು ಸವಾಲುಗಳು. ಜತೆಗೆ ಶ್ರೀಮಂತರನ್ನು, ನಗರದವರನ್ನು ಅನುಕರಿಸುವ ಆಸೆಗಳು ಇವೆಲ್ಲವೂ ಸವಾಲುಗಳೇ.

ಡಾ| ನರೇಂದ್ರ ರೈ ದೇರ್ಲ ಪರಿಚಯ
ಪುತ್ತೂರು: ಡಿ. 7 ರಂದು ಕೆಯ್ಯೂರಿನಲ್ಲಿ ನಡೆಯಲಿರುವ ಪುತ್ತೂರು ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ನರೇಂದ್ರ ರೈ ದೇರ್ಲ ಅವರು ಕೆಯ್ಯೂರು ಗ್ರಾಮದ ದೇರ್ಲ ನಿವಾಸಿ. ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ| ನರೇಂದ್ರ ರೈ ದೇರ್ಲ “ತರಂಗ’ ಸಾಪ್ತಾಹಿಕದಲ್ಲಿ ಏಳು ವರ್ಷಗಳ ಕಾಲ ಸಹ ಸಂಪಾದಕರಾಗಿ, ಅನಂತರ ನಾಡಿನ ಅನೇಕ ಪತ್ರಿಕೆಗಳಲ್ಲಿ ಅಂಕಣಗಾರರಾಗಿ, ಲೇಖಕರಾಗಿ ಪರಿಸರ, ಸಾಹಿತ್ಯ, ಕೃಷಿಯ ಬಗ್ಗೆ ಲೇಖನಗಳನ್ನು ಬರೆದವರು. 30ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿರುವ ದೇರ್ಲ ಅವರಿಗೆ ಕರ್ನಾಟಕ ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಡಾ| ಹಾ.ಮಾ. ನಾಯಕ ಅಂಕಣ ಪ್ರಶಸ್ತಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನ ಪ್ರಶಸ್ತಿ, ಪ.ಗೋ. ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳು ಲಭಿಸಿವೆ. ದೇರ್ಲ ಬರೆದ ಅನೇಕ ಲೇಖನಗಳು, ಬರಹಗಳು ಕೇರಳ-ಕರ್ನಾಟಕದ ಅನೇಕ ಪಠ್ಯಗಳಿಗೆ ಪಾಠಗಳಾಗಿ ಸೇರಿವೆ.

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.