ವೇ ಬ್ರಿಜ್ ಮೂಲಕವೇ ಮರಳು: ಬಡವರ ಪಾಲಿಗೆ ಬಿಸಿತುಪ್ಪವಾಗುವ ಭೀತಿ
ಸಾಗಾಟ ಸ್ಥಗಿತ; ನೂರಾರು ಲಾರಿಗಳು ಬಾಕಿ
Team Udayavani, Dec 5, 2019, 2:02 AM IST
ಕುಂದಾಪುರ: ಮರಳು ತುಂಬಿದ ಲಾರಿಗಳನ್ನು “ವೇ ಬ್ರಿಜ್’ ಮೂಲಕ ತೂಕ ಮಾಡಿಯೇ ಗ್ರಾಹಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಗಣಿ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮರಳು ವಿತರಣೆ ಸ್ಥಗಿತವಾಗಿದೆ. ಮರಳು ತುಂಬಿದ ನೂರಾರು ಲಾರಿಗಳು ಬಳ್ಕೂರು, ಕಂಡೂರಿನಲ್ಲಿ ಬಾಕಿಯಾಗಿವೆ.
ಈ ನಿಯಮವು ಬಡವರ ಪಾಲಿಗೆ ಮರಳು ಬಿಸಿತುಪ್ಪವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಮರಳು ಬೇಡಿಕೆದಾರರ ಅಳಲು. ಇದಕ್ಕೆ ಜನಸಾಮಾನ್ಯರು ಕೊಡುವ ವಿವರ ಹೀಗಿದೆ: ಜಿಲ್ಲಾಡಳಿತದ ನಿಯಮದ ಪ್ರಕಾರ, 10 ಮೆಟ್ರಿಕ್ ಟನ್ (2.75 ಯುನಿಟ್) ಮರಳಿಗೆ 6,500 ರೂ. ದರ ನಿಗದಿಪಡಿಸಿತ್ತಾದರೂ ಗ್ರಾಹಕರು ಇದೇ ದರದಲ್ಲಿ 3 ಯುನಿಟ್ ಮರಳು ಪಡೆಯುತ್ತಿದ್ದಾರೆ. ಆದರೆ ವೇ ಬ್ರಿಜ್ ಮೂಲಕ ತೂಕ ಮಾಡಿ ಗ್ರಾಹಕರಿಗೆ ಮರಳು ವಿತರಿಸಿದಲ್ಲಿ ಕೇವಲ 2.25 ಯುನಿಟ್ ಪಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಗುತ್ತೆ. ಒದ್ದೆ ಮರಳು 10 ಮೆಟ್ರಿಕ್ ಟನ್ ದೊರೆತರೂ ನಷ್ಟ. ಅಥವಾ ಒಂದು ಲಾರಿ ಮರಳು ಎಂದು ತುಂಬಿದಾಗ ಸಾಧಾರಣ 3 ಯುನಿಟ್ ಬರುತ್ತದೆ. 10 ಟನ್ ಎಂದಾಗ ಮುಕ್ಕಾಲು ಲೋಡು ಮಾತ್ರ ದೊರೆತರೂ ನಷ್ಟ. ಈ ನಿಯಮದಿಂದ ಮರಳು ವಿತರಿಕರಿಗಾಗಲಿ ಅಥವಾ ಲಾರಿ ಮಾಲಕರಿಗಾಗಲಿ ಯಾವುದೇ ನಷ್ಟ ಸಂಭವಿಸುವುದಿಲ್ಲ. ಪರಿಣಾಮ ಬೀರುವುದು ನೇರವಾಗಿ ಗ್ರಾಹಕರ ಕಿಸೆಗೆ ಎಂಬ ಆತಂಕ ಇದೆ.
ಲಾರಿಗಳ ಸಾಲು
ಗಣಿ ಇಲಾಖೆ ಬುಧವಾರ ದಿಢೀರ್‌ರಾಗಿ ಮರಳು ಅನುಮತಿಯನ್ನು ತಡೆಹಿಡಿದೆ. ಪರಿಣಾಮ ಬಳ್ಕೂರು, ಕಂಡೂರು ಪರಿಸರದಲ್ಲಿ ನೂರಕ್ಕೂ ಅಧಿಕ ಲಾರಿಗಳು ಮರಳು ಹೇರಿಕೊಂಡಿದ್ದರೂ ಸಾಗಾಟ ಸಾಧ್ಯವಾಗದೇ ಬಾಕಿಯಾಗಿವೆ. ಮರಳನ್ನು ತೂಗಿಯೇ ವಿತರಿಸಬೇಕೆಂದು ಟೆಂಡರ್ ಷರತ್ತಿನಲ್ಲಿ ಇದ್ದರೂ ಗುತ್ತಿಗೆದಾರರು ಇನ್ನೂ ಅದಕ್ಕೆ ಮುಂದಾಗದಿರುವುದರಿಂದ ಸಮಸ್ಯೆಯಾಗಿದೆ.
ಕಲ್ಲಿನ ಕೊರತೆ
ಹಿರಿಯಡಕ ಮತ್ತು ಕುಂದಾಪುರದಲ್ಲಿ ಮರಳು ದೊರೆಯುತ್ತಿದ್ದರೂ ಕಾರ್ಕಳ, ಹೆಬ್ರಿ ತಾಲೂಕಿನವರಿಗೆ ಮರಳು ಪಡೆಯುವುದು ಸುಲಭವಾಗಿಲ್ಲ. ಮನೆ ಕಟ್ಟಲೆಂದು ಸಾಲ ಮಾಡಿ ಗುತ್ತಿಗೆದಾರರಿಗೆ ನೀಡಿ ಮನೆಯೂ ನಿರ್ಮಾಣವಾಗದೇ, ಸಾಲವೂ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ಅನುಮತಿಯ ಕೆಂಪುಕಲ್ಲಿನ ಗಣಿ 1 ಮಾತ್ರ ಇದ್ದು, ಕಾರ್ಕಳ ಭಾಗದಲ್ಲಿ ಕರಿಕಲ್ಲಿನ 45 ಕೋರೆಗಳಿವೆ. ಕಾನೂನು ರೀತ್ಯಾ ಅವುಗಳಿಗೆ ಅನುಮತಿ ಹೆಚ್ಚಿಸದಿದ್ದರೆ ಅಕ್ರಮ ಕೋರೆಗಳ ಸಂಖ್ಯೆ ಹೆಚ್ಚಾಗಿ ಮರಳು ಸಿಕ್ಕಿದರೂ ಕಲ್ಲು ಸಿಕ್ಕದು ಎಂಬ ಸ್ಥಿತಿ ಬರಲಿದೆ.
ಹಿರಿಯಡಕದಲ್ಲಿಲ್ಲ ಸಮಸ್ಯೆ ಹಿರಿಯಡಕದಲ್ಲಿ ಬಜೆ ಅಣೆಕಟ್ಟಿನ ಮರಳನ್ನು ನಿಯಮದಂತೆ ವೇಬ್ರಿಜ್ ಮೂಲಕ ತೂಕ ಮಾಡಿಯೇ ನೀಡಲಾಗುತ್ತಿದೆ. ಅಲ್ಲಿ ಸಮಸ್ಯೆ ಇಲ್ಲ ಎಂದು ಗಣಿ ಇಲಾಖೆ ತಿಳಿಸಿದೆ.
ಎರಡು ದಿನದಲ್ಲಿ ಇತ್ಯರ್ಥ
ಒದ್ದೆ ಮರಳನ್ನು ನೇರ ಲಾರಿಗಳಿಗೆ ತುಂಬುವಂತಿಲ್ಲ. ಸ್ಟಾಕ್ ಯಾರ್ಡ್‌ನಲ್ಲಿ ದಾಸ್ತಾನಿರಿಸಿ ಒಣಗಿ ಬಳಿಕ ತೂಕ ಮಾಡಿ ನೀಡಬೇಕು ಎನ್ನುವುದು ನಿಯಮ. ವೇ ಬ್ರಿಜ್ ನಿರ್ಮಿಸಲು ಗುತ್ತಿಗೆದಾರರು ಎರಡು ದಿನಗಳ ಕಾಲಾವಕಾಶ ಕೇಳಿದ್ದು ಅನಂತರ ಸರಿಯಾಗಿ ದೊರೆಯಲಿದೆ.
ಜಿ. ಜಗದೀಶ್, ಜಿಲ್ಲಾಧಿಕಾರಿ
ಲಾಬಿಯಿದೆಯೇ?
ಮಣ್ಣು, ಶಿಲೆಕಲ್ಲು, ಕೆಂಪುಕಲ್ಲು, ಜಲ್ಲಿ, ಎಂ ಸ್ಯಾಂಡ್, ಜೇಡಿಮಣ್ಣು ಇವೆಲ್ಲವೂ ಕೂಡ ಗಣಿ ಇಲಾಖೆಯ ಅಧೀನಕ್ಕೆ ಒಳಪಡುತ್ತವೆ. ಆದರೆ ಇದಾವುದಕ್ಕೂ ಇಲ್ಲದ ತೂಕದ ನಿಯಮ ಕೇವಲ ಮರಳಿಗೆ ಮಾತ್ರ ಸೀಮಿತ ಮಾಡುವುದರ ಹಿಂದೆ ಜಿಲ್ಲಾಡಳಿತ ಲಾಬಿ ನಡೆಸಿರುವ ಸಂಶಯವಿದೆ.
ದಿನೇಶ್ ಬಸ್ರೂರು, ಮರಳು ಗ್ರಾಹಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.