ಮಂಗಳೂರು ಮನೆ ಕಳ್ಳತನ ಪ್ರಕರಣ: ಏಳು ಮಂದಿಯ ಬಂಧನ
Team Udayavani, Dec 5, 2019, 5:29 PM IST
ಮಂಗಳೂರು: ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆಯಲ್ಲಿರುವ ಅನೀತಾ ಎನ್. ಶೆಟ್ಟಿಯವರ ಮನೆಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆ ಪಕ್ಕದಲ್ಲಿರುವ ಅಪಾರ್ಟ್ಮೆಂಟಿನ ಅನೀತಾ ಎನ್. ಶೆಟ್ಟಿ ಎಂಬವರ ಪ್ಲಾಟಿನಲ್ಲಿ ಕಳ್ಳತನವಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು ಕದ್ರಿ ಶಿವಭಾಗ್ ನ ರಾಕೇಶ್ ಬೋನಿಪಾಸ್ ಡಿ” ಸೋಜಾ (37 ವರ್ಷ), ಗೋವಾ ಮಾಡಗಾಂವ್ ನ ಅಶೋಕ್ ಬಂಡ್ರಗಾರ್ (36 ವರ್ಷ), ಗಣೇಶ್ ಬಾಪು ಪರಾಬ್ (37 ವರ್ಷ), ಮಂಗಳೂರು ಬೆಂದೂರ್ ವೆಲ್ ನ ಶಾಹೀರ್ ಮೊಹಮ್ಮದ್ (43 ವರ್ಷ), ಮಂಗಳೂರು ಕೊಲ್ಯ ಜನಾರ್ಧನ ಆಚಾರ್ಯ (41 ವರ್ಷ), ಮಂಗಳೂರು ಮಂಗಳಾ ನಗರ, ಮಂಗಳಾದೇವಿಯ ಚಂದನ್ ಆಚಾರ್ಯ (44 ವರ್ಷ), ಮಂಗಳೂರು ಕೊಟೆಕಾರ್ ನ ಪುರುಷೊತ್ತಮ್ ಆಚಾರ್ಯ (46 ವರ್ಷ) ರವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು ಅಂದಾಜು 34 ಲಕ್ಷ ರೂ ಮೊತ್ತದ ಚಿನ್ನ ಹಾಗೂ ವಜ್ರ, ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, 1 ಹುಂಡೈ ಕಾರ್, ಮೋಟಾರ್ ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳೂರು ಪೋಲಿಸ್ ಆಯುಕ್ತ ಪಿ.ಎಸ್.ಹರ್ಷ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಡಿಸಿಪಿಗಳಾದ ಶ್ರೀಮಘ ಅರುಣಾಂಗ್ಸುಗಿರಿ, ಲಕ್ಷ್ಮಿ ಗಣೇಶ್, ಎಸಿಪಿ ಜಗದೀಶ್ ನಾಯಕ್ ,ಇನ್ಸ್ ಪೆಕ್ಟರ್ ಶಾಂತಾರಾಮ, ಕಾಂತಾರಾಜು, ಎಸ್ ಐ ಪ್ರದೀಪ್, ಮಾರುತಿ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.