ಜ್ವರನಾಶಿನಿ….ಅಮೃತ ಬಳ್ಳಿಯಂತಾಗಬೇಕು!
Team Udayavani, Sep 21, 2020, 5:00 AM IST
ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು ನನ್ನ ಆಪ್ತರೊಬ್ಬರು ಅಮೃತಬಳ್ಳಿಯ ಕಷಾಯ ಕುಡಿಯಲು ಸಲಹೆಯನ್ನಿತ್ತರು. ಅಷ್ಟು ಪರಿಣಾಮಕಾರಿಯಾದ ಇಂಗ್ಲಿಷ್ ಮಾತ್ರೆಗಳಿಂದಾಗದ್ದು, ಈ “ಬರಿಯ ಬಳ್ಳಿ’ಯಿಂದ ಸಾಧ್ಯವೇ ಎಂದು ನಕ್ಕು ಸುಮ್ಮನಾದೆ. ಅಷ್ಟಕ್ಕೂ ನಾವು ಬದುಕುತ್ತಿರುವುದು ಸ್ಪರ್ಧಾತ್ಮಕ ಪ್ರಪಂಚದಲ್ಲಿ. ಇಲ್ಲಿ ಒಂದು ನಿಮಿಷ ಹಳೆಯದ್ದು, ಹಳಸಿದ್ದು ಎನ್ನುವ ಭಾವ. ಹೀಗಿರಲು ತ್ವರಿತ ಉಪಶಮನ ನೀಡುವ ಇಂಗ್ಲಿಷ್ ಮದ್ದುಗಳ ಹೊರತು, ತಿಂಗಳು°ಗಟ್ಟಲೇ ಪಥ್ಯ, ಜೊತೆಗೆ ಕಹಿಯಾದ ಈ ಆಯುರ್ವೇದಿಕ್ ಔಷಧಿಗಳು ನಮಗೆ ಸೇರುವುದೆಂತು?
ಆದರೆ, ಕಾಕತಾಳೀಯ ಎಂಬಂತೆ ಇದೇ ಸಮಯದಲ್ಲಿ ಲೇಖಕಿ ನೇಮಿಚಂದ್ರರ ಬದುಕು ಬದಲಿಸಬಹುದು ಎಂಬ ಹೊತ್ತಗೆ ನನ್ನ ಕೈ ಸೇರಿತು. ಈ ಪುಸ್ತಕದಲ್ಲಿ ನೇಮಿಚಂದ್ರರವರು ಅಮೃತ ಬಳ್ಳಿಗೆ ಸಾವಿಲ್ಲ ಎಂಬ ತಲೆಬರಹದಡಿ ಅಮೃತಬಳ್ಳಿಯ ಮಹಿಮೆಯ ಹಾಡಿ ಹೊಗಳಿದ್ದರು. ಆಗಲೆ ನನಗೆ ಈ “ಬರಿಯ ಬಳ್ಳಿಯ’ ಕುರಿತು ಅರಿವಾದದ್ದು
ಅಮೃತಬಳ್ಳಿ ವಾತ, ಪಿತ್ತ ಮತ್ತು ಕಫಹರವಾಗಿದೆ. ಇದರ ಎಲೆ, ಕಾಂಡ, ಬೇರು ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದೆ. ಜ್ವರಕ್ಕೆ ಅಮೃತಬಳ್ಳಿ ರಾಮಬಾಣ. “ಅಮೃತ’ (ಸಾವಿಲ್ಲದ)ಎಂಬ ಹೆಸರಿನ ಈ ಬಳ್ಳಿಯ ಕಷಾಯ “ಜ್ವರನಾಶಿನಿ’ ಎಂದು “ಚರಕ ಸಂಹಿತೆ’ಯಲ್ಲಿ ಉಲ್ಲೇಖವಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಪಡೆದಿದೆ. ಈ ಗುಣ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ ಎನ್ನುತ್ತಾರೆ. ಈ ಬಳ್ಳಿಗೆ ಸಾಕ್ಷಾತ್ ಧನ್ವಂತರಿಯ ವರವೇ ಏನೋ, ಅಷ್ಟು ಔಷಧೀಯ ಗುಣವನ್ನು ತನ್ನೊಡಲಲ್ಲಿ ಇರಿಸಿದೆ.
ಆದರೆ, ನನಗೆ ಅಮೃತ ಬಳ್ಳಿಯ ಪರಿಚಯವಿರಲಿಲ್ಲ. ಅಮ್ಮನನ್ನು ಕೇಳಲು ಅವರು, “ನೆರೆಮನೆಯವರ ಹಿತ್ತಲಲ್ಲಿ ಕಂಡಿ¨ªೆ’ ಅಂದರು. ಆದರೆ, ನೆರೆಮನೆಯವರು ಮನೆಮುಂದೆ ಪೊದೆಯಂತಾಗುತ್ತದೆ ಎಂದು ಕಡಿದಿದ್ದರು. ನಿರಾಸೆಯಿಂದ ಅವರು ಕಡಿದು ರಾಶಿ ಹಾಕಿದ್ದ ಕಡೆಗೆ ನೋಡಲು ಹೋದೆ. ಅಲ್ಲಿ ಅಚ್ಚರಿ ಕಾದಿತ್ತು. ಕಾರಣ, ಆ ಒಣ ಕಡ್ಡಿಯಲ್ಲೂ ಜೀವಂತಿಕೆ ಹಾಗೇ ಇತ್ತು.
ಅಲ್ಲೇ ಇತ್ತು ನೋಡಿ, “ಪ್ರಕೃತಿಯ ಪಾಠ’. ಕಡಿದೆಸೆದವರು ಬಳ್ಳಿಯ ಅಮೃತೀಯ ಗುಣವರಿಯರು. ಆದರೆ, ತನ್ನನ್ನು ಎಸೆದರು ಎಂದ ಮಾತ್ರಕ್ಕೆ ಅಮೃತಬಳ್ಳಿ ತನ್ನ ಔಷಧೀಯ ಗುಣಗಳನ್ನು ಕಳೆದುಕೊಳ್ಳಲಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯನ್ನು ಈ ಸಮಾಜ ಎಲ್ಲೂ ಸಲ್ಲದವನು ಎಂದು ನಿಂದಿಸಿ, ತಿರಸ್ಕರಿಸಿದ ಮಾತ್ರಕ್ಕೆ ಆ ವ್ಯಕ್ತಿ ಕೆಲಸಕ್ಕೆ ಬಾರದವನು ಎಂದರ್ಥವಲ್ಲ. ಆತನಲ್ಲಿ ಎಲ್ಲರನ್ನೂ ಮೀರಿಸುವ ಪ್ರತಿಭೆ ಸುಪ್ತವಾಗಿರಬಹುದು. ಜನ ತನ್ನನ್ನು ದೂರ ತಳ್ಳಿದರೆಂದು ಆತ ತನ್ನತನವನ್ನು ತ್ಯಜಿಸಬಾರದು, ಬದುಕುವ ಛಲ ಬಿಡಬಾರದು. ಈ ಮೂಲಕ ಕಡಿದವರ ಮುಂದೆಯೇ ಹುಲುಸಾಗಿ ಬೆಳೆಯುವ ಸಾಹಸ ಮಾಡುವ ಅಮೃತಬಳ್ಳಿಯಂತಾಗಬೇಕು.
ಹರ್ಷಿತಾ
ದ್ವಿತೀಯ ಬಿಎ (ಪತ್ರಿಕೋದ್ಯಮ), ವಿಶ್ವವಿದ್ಯಾನಿಲಯದ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.